ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿ ಶೂ, ಚಪ್ಪಲಿ, ಬಟ್ಟೆಗಳ ಕಳ್ಳತನ

ಕಲಬುರಗಿ ಜಿಲ್ಲೆಯಲ್ಲಿ ಜಾನುವಾರು ಕಳ್ಳತನ ಹೆಚ್ಚಾಗುತ್ತಿದೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಜಾನುವಾರು ಕಳುವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರು ಕಳ್ಳತನವಾಗಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿ ಶೂ, ಚಪ್ಪಲಿ, ಬಟ್ಟೆಗಳ ಕಳ್ಳತನ
ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ


ಬೆಂಗಳೂರು: ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಕೆಂಗೇರಿ ಬಳಿಯ ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿ ಶೂ, ಚಪ್ಪಲಿ, ಬಟ್ಟೆಗಳನ್ನು ಕದ್ದಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದ್ದು, ಏರಿಯಾ ಮಂದಿ ಭಯಭೀತರಾಗಿದ್ದಾರೆ. ಡಿಸೆಂಬರ್ 5ರ ಮಧ್ಯ ರಾತ್ರಿಯಲ್ಲಿ ಬಂದ ನಾಲ್ಕು ಜನರ ತಂಡ ಕೃತ್ಯ ಎಸಗಿದೆ. ಕೆಂಗೇರಿ ಸ್ಯಾಟಲೈಟ್ ಟೌನ್ ಸುತ್ತ ಮುತ್ತ ಇರುವ ಮೂರ್ನಾಲ್ಕು ಅಪಾರ್ಟ್​ಮೆಂಟ್​ಗಳಲ್ಲಿ ಶೂ, ಚಪ್ಪಲಿ, ಬಟ್ಟೆಗಳನ್ನ ಕದ್ದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ.

ಹೆಚ್ಚಾದ ಜಾನುವಾರು ಕಳ್ಳತನ
ಕಲಬುರಗಿ ಜಿಲ್ಲೆಯಲ್ಲಿ ಜಾನುವಾರು ಕಳ್ಳತನ ಹೆಚ್ಚಾಗುತ್ತಿದೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಜಾನುವಾರು ಕಳುವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರು ಕಳ್ಳತನವಾಗಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ರಾತ್ರಿ ಸಮಯದಲ್ಲಿ ಬಂದು ಜಾನುವಾರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾರಂತೆ. ಸೇಡಂ ಪಟ್ಟಣದ ನಿವಾಸಿ ಭರತ್ ಕುಮಾರ್ ಅವರ ಒಂದು ಜಾನುವಾರು ಕದ್ದೋಯ್ದಿದ್ದು, ಜಾನುವಾರುಗಳ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಾನುವಾರುಗಳ ಕಳ್ಳತನದಿಂದ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ.

ಮಹಿಳೆಯನ್ನ ಕೊಂದು ನಿದ್ರೆಗೆ ಜಾರಿದ್ದ ಭೂಪ
ಮನೆಯಲ್ಲಿ ಮಹಿಳೆಯನ್ನ ಕೊಂದ ವ್ಯಕ್ತಿ ನಿದ್ರೆಗೆ ಜಾರಿದ್ದ ಘಟನೆ ಚಿಕ್ಕಬಳ್ಳಾಪುರ ನಗರದ ನಕ್ಕಲಕುಂಟೆ ಬಡಾವಣೆಯಲ್ಲಿ ನಡೆದಿದೆ. ಆಂಜಿನಮ್ಮಳನ್ನು ಕೊಂದು ನರಸಿಂಹಪ್ಪ ನಿದ್ರೆಗೆ ಜಾರಿದ್ದ. ಅನೈತಿಕ ಸಂಬಂಧ ಹಿನ್ನೆಲೆ ನರಸಿಂಹಪ್ಪ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದ. ಕುಡಿದ ಅಮಲಿನಲ್ಲಿ ಜೋಡಿ ಪರಸ್ಪರ ಹೊಡೆದಾಡಿಕೊಂಡಿದೆ. ಈ ವೇಳೆ ಮಾರಕಾಸ್ತ್ರದಿಂದ ಮಹಿಳೆಯ ತೆಲೆಗೆ ಹೊಡೆದು ಕೊಲೆ ಮಾಲೆ ಮಾಡಿದ್ದಾನೆ. ಮಹಿಳೆಯ ಶವ ಹೊರ ಹಾಕಿ ನರಸಿಂಹಪ್ಪ ಮನೆಯೊಳಗೆ ನಿದ್ರೆ ಮಾಡಿದ್ದಾನೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಇದನ್ನೂ ಓದಿ

ಜೈಲಿಗೆ ಯಾಕೆ ಹೋದೆ ಅಂದ್ರೆ ನೀವು ಕಳಿಸಿದ್ರಿ ನಾನು ಹೋದೆ; ಈಶ್ವರಪ್ಪ ಪ್ರಶ್ನೆಗೆ ಡಿಕೆ ಶಿವಕುಮಾರ್ ತಿರುಗೇಟು

Bengaluru Power Cut: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಇಂದಿನಿಂದ ಒಂದು ವಾರಗಳವರೆಗೆ ಪವರ್ ಕಟ್

Published On - 12:51 pm, Mon, 6 December 21

Click on your DTH Provider to Add TV9 Kannada