ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು ಧೃಡ

ಜೀನೋಮ್ ಸೀಕ್ವೆನ್ಸಿಂಗ್​ನಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ 25 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿ ನೆಗೆಟಿವ್ ಎಂದು ಬಂದಿದೆ. ಸೋಂಕಿತರನ್ನು ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು ಧೃಡ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Dec 25, 2021 | 1:41 PM

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ (Omicron variant) ಪತ್ತೆಯಾಗಿದೆ. ಸೌತ್ ಆಫ್ರಿಕಾದ ಜಾಂಬಿಯಾದಿಂದ ಬಂದಿದ್ದ 60 ವರ್ಷದ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ. ಸೋಂಕಿತ ವ್ಯಕ್ತಿ ಜಾಂಬಿಯಾದಿಂದ ಮುಂಬೈಗೆ ಬಂದು, ಅಲ್ಲಿಂದ ಡಿಸೆಂಬರ್ 11 ರಂದು ಬೆಂಗಳೂರಿಗೆ (Bengaluru) ಬಂದಿದ್ದರು. ಬರುವಾಗ ನೆಗೆಟಿವ್ ರಿಪೋರ್ಟ್ ಕೂಡ ತಂದಿದ್ದರು. ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ರಿಪೋರ್ಟ್ ಇದ್ದು, ಮನೆಗೆ ತೆರಳಿದ ಬಳಿಕ‌ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಕೊವಿಡ್ ಪರೀಕ್ಷೆ ‌ಮಾಡಿಸಿದ್ದಾರೆ. ಈ ವೇಳೆ ಸೋಂಕು ಇರುವುದು ಧೃಡಪಟ್ಟಿದೆ.

ಜೀನೋಮ್ ಸೀಕ್ವೆನ್ಸಿಂಗ್​ನಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ 25 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿ ನೆಗೆಟಿವ್ ಎಂದು ಬಂದಿದೆ. ಸೋಂಕಿತರನ್ನು ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಮಿಕ್ರಾನ್ ನಿಯಂತ್ರಣಕ್ಕೆ ಮಾರ್ಗಸೂಚಿ ಹೊರಡಿಸಿದ್ದೇವೆ: ಸಚಿವ ಡಾ.ಅಶ್ವತ್ಥ್ ನಾರಾಯಣ ಒಮಿಕ್ರಾನ್ ನಿಯಂತ್ರಣಕ್ಕೆ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದೇವೆ. ಏನು ಮಾಡಬೇಕು, ಏನು ಮಾಡಬಾರದೆಂದು ಹೇಳಲಾಗಿದೆ. ದೇಶದಲ್ಲೇ ಬಹಳ ಅಡ್ವಾನ್ಸ್ ಆಗಿ ನಿಯಮ ರೂಪಿಸಿದ್ದೇವೆ. ಈಗ ಏನಿದ್ದರೂ ಅವುಗಳ ನಿರ್ವಹಣೆ ಮಾಡುವುದಷ್ಟೇ ಇದೆ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಒಮಿಕ್ರಾನ್ ಕೇಸ್ ಎರಡೇ ತಿಂಗಳಲ್ಲಿ 10 ಲಕ್ಷಕ್ಕೇರುವ ಸಾಧ್ಯತೆ: ಡಾ.ಅನೀಶ್ ಭಾರತದಲ್ಲಿ ಒಮಿಕ್ರಾನ್ ಕೇಸ್ 10 ಲಕ್ಷಕ್ಕೇರುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ನಮಗೆ ತಿಂಗಳ ಸಮಯವೂ ಇಲ್ಲ ಎಂದು ಕೇರಳದ ಕೊವಿಡ್ ತಜ್ಞರ ಸಮಿತಿ ಸದಸ್ಯ ಡಾ.ಅನೀಶ್ ಹೇಳಿದ್ದಾರೆ. ಎಎನ್​ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘‘ತಿಂಗಳ ಅವಧಿಯಲ್ಲೇ ಒಮಿಕ್ರಾನ್ ನಿಯಂತ್ರಣಕ್ಕೆ ಕ್ರಮ ಅಗತ್ಯ. ಅದಕ್ಕಿಂತ ಹೆಚ್ಚು ಸಮಯ ನಮ್ಮ ಬಳಿಯಿಲ್ಲ’’ ಎಂದು ನುಡಿದಿದ್ದಾರೆ. ವಿಶ್ವದಲ್ಲಿ ದಿನೇದಿನೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೇ ಸಂಖ್ಯೆ ಆಧರಿಸಿ ನೋಡುವುದಾದರೆ ನಮ್ಮಲ್ಲೂ ರೂಪಾಂತರಿ ಒಮಿಕ್ರಾನ್ ಸೋಂಕು ಹೆಚ್ಚಾಗಲಿದೆ. 2-3 ವಾರದಲ್ಲಿ ಒಮಿಕ್ರಾನ್ ಸಂಖ್ಯೆ 1000ಕ್ಕೇರುವ ಸಾಧ್ಯತೆ ಇದ್ದು, 2 ತಿಂಗಳಲ್ಲಿ ಭಾರತದಲ್ಲಿ 10 ಲಕ್ಷ ಒಮಿಕ್ರಾನ್ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಲೇ ಮುನ್ನೆಚ್ಚರಿಕೆ ಕೈಗೊಳ್ಳಲು ತಿಂಗಳಿಗಿಂತ ಕಡಿಮೆ ಅವಧಿಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಡಾ.ಅನೀಶ್ ಹೇಳಿಕೆ ಕುರಿತು ಎಎನ್​ಐ ಹಂಚಿಕೊಂಡ ಮಾಹಿತಿ ಭಾರತದಲ್ಲಿ ಜನವರಿಯಲ್ಲಿ ಕೊವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೈದರಾಬಾದ್ ಕಿಮ್ಸ್ ನಿರ್ದೇಶಕ ಡಾ.ಸಂಬಿತ್ ಹೇಳಿದ್ದಾರೆ. ಭಾರತ ವಿಶ್ವಕ್ಕಿಂತ ಭಿನ್ನವಲ್ಲ. ಈಗ ಎಲ್ಲೆಡೆ ಸೋಂಕು ಹೆಚ್ಚಾಗುತ್ತಿರುವಂತೆಯೇ ಭಾರತದಲ್ಲೂ ಹೆಚ್ಚಳವಾಗಲಿದೆ. ಅದೃಷ್ಟವಶಾತ್ ಮುಂಚಿನಂತೆ ನಮ್ಮಲ್ಲಿ ರೋಗತೀವ್ರತೆ ಹೆಚ್ಚಾಗಿಲ್ಲ. ಇದು ಒಳ್ಳೆಯ ಬೆಳವಣಿಗೆ’’ ಎಂದು ಡಾ.ಸಂಬಿತ್ ನುಡಿದಿದ್ದಾರೆ.

ಇದನ್ನೂ ಓದಿ: ಕೊರೊನಾ ರೂಪಾಂತರ ಆಗುವ ಲಕ್ಷಣ ಇದೆ; ಸಂಶಯ, ಅಸಹನೆ, ದ್ವೇಷ, ರಾಜಕೀಯ ಕಲಹ ಹೆಚ್ಚಾಗುತ್ತೆ: ಕೋಡಿಮಠ ಶ್ರೀ ಭವಿಷ್ಯ

Omicron Variant: ಒಮಿಕ್ರಾನ್​ ಹರಡುವಿಕೆ ಆತಂಕದ ನಡುವೆಯೇ ಗುಡ್​ ನ್ಯೂಸ್ ಕೊಟ್ಟ ಎರಡು ಅಧ್ಯಯನಗಳು !

Published On - 1:32 pm, Sat, 25 December 21