2023ರ ಚುನಾವಣೆಯವರೆಗೆ ಬೊಮ್ಮಾಯಿಯವರೇ ಸಿಎಂ; ನಳಿನ್ ಕುಮಾರ್ ಕಟೀಲ್
ಸರ್ಕಾರದಲ್ಲಿ ಅರಾಜಕತೆ ಹುಟ್ಟಿಹಾಕಲು ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರೇ ಇಂತಹ ಸುದ್ದಿಯನ್ನು ಹುಟ್ಟಿಸಿರಬಹುದು. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವಿರುತ್ತೆ. ಸಿಎಂ ಬೊಮ್ಮಾಯಿಗೆ ಅನಾರೋಗ್ಯ ಇಲ್ಲ, ಕಾಲು ನೋವಿದೆ.
ಬೆಂಗಳೂರು: ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಪಟ್ಟಕ್ಕೆ ಬಂದು ಒಂದು ವರ್ಷದೊಳಗೆ ಅಧಿಕಾರದಿಂದ ಕೆಳಗೆ ಇಳಿಯುತ್ತಾರಾ? ಎಂಬ ಅನುಮಾನ ಮೂಡಿದೆ. ಈ ಅನುಮಾನಕ್ಕೆ ಯಾವುದೇ ಹುದ್ದೆ, ಸ್ಥಾನ ಶಾಶ್ವತ ಅಲ್ಲ ಎಂಬ ಅವರ ಹೇಳಿಕೆ ಕಾರಣ. ಆದರೆ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. ಇನ್ನು ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), 2023ರ ಚುನಾವಣೆಯವರೆಗೆ ಬೊಮ್ಮಾಯಿಯವರೇ ಸಿಎಂ. ಸಿಎಂ ಬದಲಾವಣೆ ಎಂಬುದು ಕೇವಲ ಕಪೋಲಕಲ್ಪಿತ ಅಂತ ಹೇಳಿದ್ದಾರೆ.
ಸರ್ಕಾರದಲ್ಲಿ ಅರಾಜಕತೆ ಹುಟ್ಟಿಹಾಕಲು ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರೇ ಇಂತಹ ಸುದ್ದಿಯನ್ನು ಹುಟ್ಟಿಸಿರಬಹುದು. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವಿರುತ್ತೆ. ಸಿಎಂ ಬೊಮ್ಮಾಯಿಗೆ ಅನಾರೋಗ್ಯ ಇಲ್ಲ, ಕಾಲು ನೋವಿದೆ. ಅದಕ್ಕೆ ಸಿಎಂ ಬೊಮ್ಮಾಯಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಅವರು ವಿದೇಶಕ್ಕೂ ಹೋಗುವುದಿಲ್ಲ ಅಂತ ಕಟೀಲ್ ತಿಳಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಪುನಾರಚನೆಯಾದರೆ ನಮ್ಮ ಜತೆ ಚರ್ಚಿಸುತ್ತಾರೆ. ಚರ್ಚೆಯಾದ ಮರುದಿನವೇ ನಾನು ಮಾಹಿತಿ ನೀಡುತ್ತೇನೆ ಅಂತ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅಭಿಪ್ರಾಯಪಟ್ಟರು.
ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮತಾಂತರದಿಂದ ಸಮಾಜದಲ್ಲಿ ಕಲಹ ಉಂಟಾಗುತ್ತಿತ್ತು. ಅದಕ್ಕೆ ತಡೆಯೊಡ್ಡಲು ಕಾಯ್ದೆ ಜಾರಿ ಮಾಡಲಾಗಿದೆ. ಸಿಎಂ ಬೊಮ್ಮಾಯಿ ಒಳ್ಳೆಯ ನಿರ್ಧಾರವನ್ನು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ವಿರೋಧ ಮಾಡುವುದು ಸಹಜ. ಯಾವ ಯಾವಾಗ ಕಾಂಗ್ರೆಸ್ ಆಡಳಿತದಲ್ಲಿ ಇಲ್ಲವೋ ಆಗೆಲ್ಲ ಸರ್ಕಾರವನ್ನು ವಿರೋಧಿಸಿಕೊಂಡೇ ಬಂದಿದೆ. ಸಿದ್ದರಾಮಣ್ಣನೇ ಮತಾಂತರ ನಿಷೇಧ ಕಾಯ್ದೆಗೆ ಸಹಿ ಹಾಕಿದ್ದಾರೆ. ಅಧಿಕಾರ ಇದ್ದಾಗ ಒಂದು ಇಲ್ಲದಾಗ ಒಂದು. ಕಾಂಗ್ರೆಸ್ ಶಾಸಕರೇ ನಾವು ತಂದ ಕಾಯ್ದೆ ಪರವಾಗಿ ಇದ್ದಾರೆ ಅಂತ ಹೇಳಿದರು.
ಇದನ್ನೂ ಓದಿ
ರಾಯಚೂರಿನಲ್ಲಿ ವಾಹನಕ್ಕೆ ಸೈಡ್ ನೀಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ! ನಾಲ್ವರ ವಿರುದ್ಧ ಎಫ್ಐಆರ್ ದಾಖಲು
ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಅಲ್ಲ; ಆಕೆಯ ಗಂಡನ ಕಾರುಬಾರು – ಮಿಡಿಗೇಶಿ ಗ್ರಾಮಸ್ಥರಿಂದ ಪ್ರತಿಭಟನೆ