ರಾಜ್ಯದಲ್ಲಿ ತಾರಕಕ್ಕೇರಿದ ಹಿಜಾಬ್-ಕೇಸರಿ ಶಾಲು ವಿವಾದ; ಪ್ರಾಣ ಹೋದ್ರೂ ಕೂಡ ನಾವು ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರ ಪಟ್ಟು
ಹಿಜಾಬ್‌ಗಾಗಿ ನಮ್ಮ ಪ್ರಾಣ ಹೋದರೂ ಪರವಾಗಿಲ್ಲ. ನಾನು ಮಾತ್ರ ಹಿಜಾಬ್ ತೆಗೆಯಲ್ಲ.. ತೆಗೆಯಲ್ಲ ಎಂದು ಟಿವಿ9ಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿ ಖಡಕ್ ಆಗಿ ಉತ್ತರಿಸಿದ್ದಾಳೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ.
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ(Hijab-Kesari Row) ತಾರಕಕ್ಕೇರುತ್ತಿದೆ. ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಂಘರ್ಷ ಭುಗಿಲೇಳುತ್ತಿದೆ. ಪ್ರಾಣ ಹೋದ್ರೂ ಹಿಜಾಬ್ ತೆಗೆಯಲ್ಲ. ಪರೀಕ್ಷೆಗೆ ಕೂರಿಸದಿದ್ರೂ, ಪರವಾಗಿಲ್ಲ. ಶಿಕ್ಷಣದಷ್ಟೇ ಹಿಜಾಬ್ ಕೂಡ ನಮಗೆ ಮುಖ್ಯ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ನ್ಯಾಯಾಲಯ ಏನೇ ಹೇಳಿದ್ರೂ, ಸರ್ಕಾರ ಯಾವ ಆದೇಶ ಹೊರಡಿಸಿದ್ರೂ, ಹಿಜಾಬೇ ಬೇಕೇ ಬೇಕು ಅಂತ ಕೂಗು ಹಾಕ್ತಿದ್ದಾರೆ. ಸಮವಸ್ತ್ರ ಸಂಘರ್ಷ ಈಗ ಪ್ರತಿಷ್ಠೆಯ ಸಮರ ಆಗಿದ್ದು, ಆಟ, ಪಾಠ ಅನ್ನುತ್ತಿದ್ದ ಕೆಲ ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿದ್ದಾರೆ. ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ಗಾಗಿ ನಡೆಯುತ್ತಿರುವ ಸಂಘರ್ಷದ ಡಿಟೈಲ್ಸ್ ಇಲ್ಲಿದೆ.
ಹಿಜಾಬ್ಗೆ ಅವಕಾಶ ಕೊಟ್ರೆ ಕ್ಲಾಸ್ಗೆ ಹೋಗ್ತೀವಿ, ಇಲ್ಲದಿದ್ರೆ ಹೋಗೋದಿಲ್ಲ ಹಿಜಾಬ್‌ಗಾಗಿ ನಮ್ಮ ಪ್ರಾಣ ಹೋದರೂ ಪರವಾಗಿಲ್ಲ. ನಾನು ಮಾತ್ರ ಹಿಜಾಬ್ ತೆಗೆಯಲ್ಲ.. ತೆಗೆಯಲ್ಲ ಎಂದು ಟಿವಿ9ಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿ ಖಡಕ್ ಆಗಿ ಉತ್ತರಿಸಿದ್ದಾಳೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ. LKGಯಿಂದ ನಾವು ಹಿಜಾಬ್ ಹಾಕಿಕೊಳ್ಳುತ್ತಿದ್ದೇವೆ. ನಾನು ಮುಂದಿನ ದಿನಗಳಲ್ಲೂ ಹಿಜಾಬ್ ಧರಿಸುತ್ತೇನೆ. ನಾನು ಹಿಜಾಬ್ ಹಾಕಿಕೊಂಡೇ ಕೆಲಸ ಮಾಡುತ್ತೇನೆ ಎಂದು ಹೇಳಿದ್ಳು. ಇನ್ನು ಶಿವಮೊಗ್ಗದ DVS ಕಾಲೇಜ್ನಲ್ಲಿ ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿಗಳು ಎಂಟ್ರಿ ಕೊಟ್ಟಿದ್ದು ಹಿಜಾಬ್ಗೆ ಅವಕಾಶ ಕೊಟ್ರೆ ಕ್ಲಾಸ್ಗೆ ಹೋಗ್ತೀವಿ. ಇಲ್ಲದಿದ್ರೆ ತರಗತಿಗೆ ಹೋಗೋದಿಲ್ಲ ಅಂತಾ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಕಾಲೇಜು ಸಿಬ್ಬಂದಿ ಜೊತೆ ಸ್ಟೂಡೆಂಟ್ಸ್ ವಾಗ್ವಾದ ನಡೆಸಿದ್ದಾರೆ. ಇನ್ನು ಮತ್ತೊಂದೆಡೆ ಡಿವಿಎಸ್ ಕಾಲೇಜಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ವಾಪಸ್ ಆಗಿದ್ದಾರೆ.
ಅರ್ಧಂಬರ್ಧ ಬಟ್ಟೆ ಹಾಕಿದ್ರೆ ಒಳಗೆ ಬನ್ನಿ ಅಂತೀರಾ. ಪೂರ್ತಿ ಬಟ್ಟೆ ಹಾಕಿದ್ರೆ ಹೊರಗೆ ಹೋಗಿ ಅಂತೀರಾ. ನಾವು ಎಷ್ಟು ತಾಳ್ಮೆ ವಹಿಸಬೇಕು ಹೇಳಿ ಎಂದು ಡಿವಿಎಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆಕ್ರೋಶ ಹೊರ ಹಾಕಿದ್ದಾರೆ. ಇಂದು ಹಿಜಾಬ್ ತೆಗೆಯಿರಿ ಎಂದು ಹೇಳುತ್ತೀರಿ. ನಾಳೆ ಕಾಲೇಜಿಗೆ ಬರಬೇಡಿ ಎಂದು ಹೇಳುತ್ತೀರಿ ಎಂದು ಗರಂ ಆಗಿದ್ದಾರೆ. ಪ್ರಾಣ ಆದ್ರೂ ಹೋಗ್ಲಿ, ಹಿಜಾಬ್ ತೆಗೆಯಲ್ಲ.. ತೆಗೆಯಲ್ಲ. ನಾವು ಸತ್ತರೆ ಹಿಜಾಬ್ನಲ್ಲೇ ಸಾಯುತ್ತೇವೆ. ಪ್ರಾಣ ಹೋದ್ರೂ ಕೂಡ ನಾವು ಹಿಜಾಬ್ ತೆಗೆಯಲ್ಲ. ನಾನು ನನ್ನ ಕೆಲಸ ಬೇಕಾದ್ರೂ ಬಿಡ್ತೀನಿ, ಹಿಜಾಬ್ ಬಿಡಲ್ಲ. ನನಗೆ ಶಿಕ್ಷಣ ಎಷ್ಟು ಮುಖ್ಯವೋ ಹಿಜಾಬ್ ಅಷ್ಟೇ ಮುಖ್ಯ. ಹಿಜಾಬ್ ಹಾಕೋದು ನನ್ನ ಹಕ್ಕು, ನನ್ನ ನಿರ್ಧಾರ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದಿರಲು ಪಟ್ಟು ಹಿಡಿದಿದ್ದಾರೆ.
ವಿಜಯಪುರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿದ್ಯಾರ್ಥಿಗಳಿಗೆ ನೋ ಎಂಟ್ರಿ. ಅಧಿಕಾರಿಗಳು ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಹಾಕಿದ್ದಾರೆ. ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳನ್ನು ಹೊರಕ್ಕೆ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ವಿ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಲಾಸ್ನಿಂದ ಹೊರಗುಳಿದ ಮಕ್ಕಳ ಬೆಂಬಲಕ್ಕೆ ಪೋಷಕರು ನಿಂತಿದ್ದು ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನ ಬಳಿ ವಿದ್ಯಾರ್ಥಿನಿಯರ ಜೊತೆ ಪೋಷಕರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್ ಸಹಿತ ಮಕ್ಕಳಿಗೆ ಪ್ರವೇಶ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಬೇಟಿ ಪಡಾವೋ, ಬೇಟಿ ಪಡಾವೋ ಅಂತಾರೆ. ಎಲ್ಲಾ ಬೇಟಿಗಳು ರಸ್ತೆಯಲ್ಲೇ ನಿಂತಿದ್ದಾರೆ ಇಂದು ಹಿಜಾಬ್ ತೆಗೆಯಿರಿ ಎಂದು ಹೇಳುತ್ತೀರಿ. ಸರ್ಕಾರ ನಾಳೆ ಬಟ್ಟೆ ಬಿಚ್ಚಿ ಬನ್ನಿ ಎಂದು ಹೇಳುತ್ತೆ. ಅದು ಸಾಧ್ಯವಾ ಎಂದು ಕೋಲಾರದಲ್ಲಿ ವಿದ್ಯಾರ್ಥಿನಿ ಪೋಷಕರು ಪ್ರಶ್ನಿಸಿದ್ದಾರೆ. ನಮ್ಮ ಮಕ್ಕಳು ಸಮವಸ್ತ್ರವನ್ನೂ ಧರಿಸಿದ್ದಾರೆ. ಹಿಜಾಬ್, ಬುರ್ಖಾವನ್ನೂ ಧರಿಸಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ.
ಬೇಟಿ ಪಡಾವೋ, ಬೇಟಿ ಪಡಾವೋ ಅಂತಾರೆ. ಎಲ್ಲಾ ಬೇಟಿಗಳು ರಸ್ತೆಯಲ್ಲೇ ನಿಂತಿದ್ದಾರೆ ನೋಡಿ ಎಂದು ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿನಿಯರು ಗರಂ ಆಗಿದ್ದಾರೆ. ಹಿಜಾಬ್ ಧರಿಸಿದ್ದಕ್ಕೆ ಪರೀಕ್ಷೆಗೆ ಅನುಮತಿ ಕೊಟ್ಟಿಲ್ಲ. ಪರೀಕ್ಷೆ ಬರೆಯಲು ಬಿಡದೆ ಹೊರಗೆ ಕಳಿಸಿದ್ದಾರೆ ಎಂದು ಚಿಕ್ಕಮಗಳೂರಿನ ಮೌಂಟೆನ್ ವ್ಯೂ ಕಾಲೇಜಿನ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ತೆಗೆಯಬೇಕೆನ್ನುವ ಆದೇಶ ಎಲ್ಲಿದೆ ತೋರಿಸಿ ಎಂದು ಪ್ರಾಚಾರ್ಯರು & ಪೊಲೀಸರಿಗೆ ಪೋಷಕರು ಪ್ರಶ್ನೆ ಮಾಡಿದ ಘಟನೆ ಬಳ್ಳಾರಿಯ ಸರಳಾದೇವಿ ಕಾಲೇಜ್ ಮುಂದೆ ನಡೆದಿದೆ. ಸ್ಟೂಡೆಂಟ್ಸ್ ಪೋಷಕರನ್ನ ಕರೆದುಕೊಂಡು ಬಂದಿದ್ದಾರೆ. ಹಿಜಾಬ್ ಧರಿಸುತ್ತೇವೆ ಒಳಗೆ ಬಿಡಿ ಎಂದ ಸ್ಟೂಡೆಂಟ್ಸ್ ಪಟ್ಟು ಹಿಡಿದಿದ್ದಾರೆ. ಹೈಕೋರ್ಟ್ ಆರ್ಡರ್ ಇದೆ ಎಂದ ಪ್ರಾಂಶುಪಾಲರು ಹೇಳಿದಕ್ಕೆ ಕೋರ್ಟ್ ಆದೇಶ ತೋರಿಸುವಂತೆ ಸ್ಟೂಡೆಂಟ್ಸ್ ಪಟ್ಟು ಹಿಡಿದಿದ್ದು ಕಾಲೇಜ್ ಆಡಳಿತ ಮಂಡಳಿತ ವಿರುದ್ಧ ಪೋಷಕರು ಗರಂ ಆಗಿದ್ದಾರೆ.
ಬುರ್ಖಾ ತೆಗೆಯುತ್ತೇವೆ, ಆದ್ರೆ ಹಿಜಾಬ್ ತೆಗೆಯಲ್ಲ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಹಿಜಾಬ್ ತೆಗೆಯಲು ಐವರು ಸ್ಟೂಡೆಂಟ್ಸ್ ಹಿಂದೇಟು ಹಾಕಿದ್ದಾರೆ. ಹಿಜಾಬ್ ತೆಗೆಯಲ್ಲ ಎಂದವರ ಜತೆ ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಐವರು ವಿದ್ಯಾರ್ಥಿನಿಯರು ಮನೆಗೆ ವಾಪಸ್ ಬಂದಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿಲ್ಲ ಹಿಜಾಬ್, ಕೇಸರಿ ಶಾಲು ವಿವಾದ; ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ವಿದ್ಯಾರ್ಥಿಗಳು