ಬಳ್ಳಾರಿಯಲ್ಲಿಲ್ಲ ಹಿಜಾಬ್, ಕೇಸರಿ ಶಾಲು ವಿವಾದ; ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ವಿದ್ಯಾರ್ಥಿಗಳು
ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದರೂ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ತರಗತಿಗೆ ಹೋಗುತ್ತಿದ್ದಾರೆ. ಹೀಗಾಗಿ ಇಲ್ಲಿ ಗೊಂದಲದ ವಾತಾವರಣ ಇಲ್ಲ. ವಿದ್ಯಾರ್ಥಿಗಳು ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂಬುವುದನ್ನು ಅರಿತಿರುವುದೇ ಇಲ್ಲಿ ಪ್ರಧಾನ ಎನಿಸಿಕೊಂಡಿದೆ.
ಬಳ್ಳಾರಿ: ರಾಜ್ಯಾದ್ಯಂತ ಹಿಜಾಬ್, ಕೇಸರಿ ವಿವಾದ ಸಾಕಷ್ಟು ಗಲಾಟೆಗೆ ಕಾರಣವಾಗಿದೆ. ಆದರೆ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ಹಿಜಾಬ್(Hijab) ಮತ್ತು ಕೇಸರಿ ಶಾಲು ವಿವಾದವಿಲ್ಲದೇ ಶಾಂತವಾಗಿದೆ. ಹಿಜಾಬ್ ತಮ್ಮ ಧಾರ್ಮಿಕ ಹಕ್ಕಾದರು ನಾವು ತರಗತಿ ಒಳಗೆ ಹಿಜಾಬ್ ಧರಿಸಲ್ಲ. ಕ್ಲಾಸ್ ರೂಂ(Classroom) ಹೊರಗೆ ಹಿಜಾಬ್ ತಗೆದಿಟ್ಟು ತರಗತಿಯಲ್ಲಿ ಕೂರುತ್ತೇವೆ ಎಂದು ಬಳ್ಳಾರಿಯಲ್ಲಿ ವಿದ್ಯಾರ್ಥಿನಿಯರು(Students) ಹೇಳುತ್ತಿದ್ದಾರೆ. ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದರೂ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ತರಗತಿಗೆ ಹೋಗುತ್ತಿದ್ದಾರೆ. ಹೀಗಾಗಿ ಇಲ್ಲಿ ಗೊಂದಲದ ವಾತಾವರಣ ಇಲ್ಲ. ವಿದ್ಯಾರ್ಥಿಗಳು ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂಬುವುದನ್ನು ಅರಿತಿರುವುದೇ ಇಲ್ಲಿ ಪ್ರಧಾನ ಎನಿಸಿಕೊಂಡಿದೆ.
ಹಿಜಾಬ್ ನಮ್ಮ ಧಾರ್ಮಿಕ ಹಕ್ಕು. ಹಿಜಾಬ್ ಧರಿಸಬಾರದೆಂದು ಹೈಕೋರ್ಟ್ ಹೇಳಿಲ್ಲ. ನ್ಯಾಯಾಲಯದ ಆದೇಶ ಬರುವವರೆಗೂ ಹಿಜಾಬ್ ಧರಿಸುತ್ತೇವೆ. ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಕ್ಲಾಸ್ಗೆ ಕೂರಲ್ಲ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಹಿಜಾಬ್-ಕೇಸರಿ ಶಾಲು ವಿವಾದ; ರಾಜ್ಯಾದ್ಯಂತ ಇಂದಿನಿಂದ ಕಾಲೇಜ್ ಓಪನ್
ಹಿಜಾಬ್-ಕೇಸರಿ ಶಾಲು ವಿವಾದ ಇಡೀ ರಾಜ್ಯವನ್ನು ಆತಂಕಕ್ಕೆ ನೂಕಿದೆ. ಇದರಿಂದಾಗಿ ಒಂದು ವಾರದಿಂದ ಬಂದ್ ಆಗಿದ್ದ ಕಾಲೇಜುಗಳಲ್ಲಿ ಬಾಗಿಲು, ಇಂದು ಓಪನ್ ಆಗ್ತಿವೆ. ಕಾಲೇಜಿನಲ್ಲಿ ಕಿಡಿ ಮತ್ತೆ ಹೊತ್ತಿಕೊಳ್ಳುತ್ತಾ ಅನ್ನೋ ಟೆನ್ಷನ್ ಹೆಚ್ಚಾಗಿದೆ. ಇದು ಸರ್ಕಾರಕ್ಕೆ ಮತ್ತೊಂದು ಚಾಲೆಂಜ್ ಎದುರಾಗಿದ್ದು, ಎಲ್ಲಾ ಕಾಲೇಜುಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹಿಜಾಬ್-ಕೇಸರಿ ಶಾಲಿನ ವಿವಾದ ವಿದ್ಯಾ ದೇಗುಲದಲ್ಲಿ ದಳ್ಳುರಿಯನ್ನೇ ಎಬ್ಬಿಸಿದೆ. ಹಿಜಾಬ್ ಜ್ವಾಲೆ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಕೆಂಡವಾಗಿದ್ವು. ಫೆ. 8 ರಂದು ಅಂದ್ರೆ ವಾರದ ಹಿಂದೆ ಇಡೀ ಕಾಲೇಜ್ ಆವರಣವೇ ರಣಾಂಗಣವಾಗಿತ್ತು. ಖಾಕಿ ಲಾಠಿ ಸದ್ದು ಮಾಡಿತ್ತು. ಉಡುಪಿ ಎಂಜಿಎಂ ಕಾಲೇಜಿನಲ್ಲಿ ದೊಡ್ಡ ಕದನವೇ ನಡೆದಿತ್ತು. ಶಿವಮೊಗ್ಗದಲ್ಲಿ ಕಲ್ಲುತೂರಾಟ ನಡೆದು ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ದಾವಣಗೆರೆಯಲ್ಲಿ ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತರಲಾಗಿತ್ತು. ಲಾಠಿ ಚಾರ್ಜ್ ನಡೆದು ದೊಡ್ಡ ದಂಗೆಯೇ ಎದ್ದಿತ್ತು. ಕಾಲೇಜ್ ರಣಾಂಗಣವಾದ ಬಳಿಕ ಸರ್ಕಾರ ಫೆಬ್ರವರಿ 9ರಿಂದ 15ರ ವರೆಗೆ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಒಂದು ವಾರದ ಬಳಿಕ ಅಂದ್ರೆ ಇಂದಿನಿಂದ ಕಾಲೇಜಿನ ಬಾಗಿಲು ತೆರೆಯುತ್ತಿವೆ.
ರಾಜ್ಯಾದ್ಯಂತ ಇಂದಿನಿಂದ ಕಾಲೇಜ್ ಓಪನ್ ಕಾಲೇಜು ಆರಂಭಕ್ಕೂ ಮೊದಲೇ ಮೊನ್ನೆಯಿಂದ ಶುರುವಾಗಿರುವ ಹೈಸ್ಕೂಲ್‌ಗಳಲ್ಲಿ ಹಿಜಾಬ್ ವಿವಾದ ಬಗೆಹರಿದಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲೆಗೆ ಬರುತ್ತಿದ್ದಾರೆ. ಹಿಜಾಬ್ ಇದ್ದರಷ್ಟೇ ಶಿಕ್ಷಣ. ಹಿಜಾಬ್ ಇಲ್ಲದೆ ಶಿಕ್ಷಣ ಬೇಕಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆಯೇ ಇಂದಿನಿಂದ ಕಾಲೇಜ್ ಓಪನ್ ಆಗ್ತಿದ್ದು, ಟೆನ್ಷನ್ ಹೆಚ್ಚಾಗಿದೆ. ಪೊಲೀಸ್ ಭದ್ರತೆಯಲ್ಲಿ ಕಾಲೇಜು ಆರಂಭಿಸುತ್ತೇವೆ ಅಂತಾ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಕಾಲೇಜ್ಗಳಲ್ಲಿ ಖಾಕಿ ಕಣ್ಗಾವಲು ಇಂದಿನಿಂದಲೇ ಕಾಲೇಜು ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಕಾಲೇಜಿನಲ್ಲಿ ದಂಗೆ ಎದ್ದಿದ್ದ ನಂತ್ರ ಮೊದಲು ಮೂರು ದಿನ ನಂತರ ಎರಡು ದಿನ ರಜೆ ಕೊಟ್ಟಿದ್ದ ಸರ್ಕಾರ ಕಡೆಗೂ ಇಂದಿನಿಂದ ಕಾಲೇಜುಗಳನ್ನು ಪುನರಾರಂಭ ಮಾಡ್ತಿದೆ. ಕಾಲೇಜುಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸಜ್ಜಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Published On - 11:05 am, Wed, 16 February 22