Hijab row: ಬೆಂಗಳೂರು ನಗರಕ್ಕೂ ಲಗ್ಗೆಯಿಟ್ಟ ಹಿಜಾಬ್​ ಫೈಟ್? ವಿದ್ಯಾಸಾಗರ್ ಶಾಲೆಯಲ್ಲಿ ಸಂಘರ್ಷ, ಶಿಕ್ಷಕಿ ಕೆಲಸದಿಂದ ವಜಾ

Hijab row in Bangalore: ತ್ವೇಷಮಯ ವಾತಾವರಣದಿಂದಾಗಿ ಚಂದ್ರಾ ಲೇಔಟ್​ನ ವಿದ್ಯಾಸಾಗರ್ ಶಾಲೆಗೆ ಪೊಲೀಸರು ದೌಡಾಯಿಸಿದ್ದಾರೆ. ಹಿಜಾಬ್​ ಪರವಿರುವ ಪೋಷಕರು ಮತ್ತು ಶಿಕ್ಷಕರ ಜತೆ ಚಂದ್ರಾ ಲೇಔಟ್ ಪೊಲೀಸರು ಚರ್ಚೆಗಳನ್ನು ನಡೆಸುತ್ತಿದ್ದಾರೆ.

Hijab row: ಬೆಂಗಳೂರು ನಗರಕ್ಕೂ ಲಗ್ಗೆಯಿಟ್ಟ ಹಿಜಾಬ್​ ಫೈಟ್? ವಿದ್ಯಾಸಾಗರ್ ಶಾಲೆಯಲ್ಲಿ ಸಂಘರ್ಷ, ಶಿಕ್ಷಕಿ ಕೆಲಸದಿಂದ ವಜಾ
ಬೆಂಗಳೂರು ನಗರಕ್ಕೂ ಲಗ್ಗೆಯಿಟ್ಟ ಹಿಜಾಬ್​ ಫೈಟ್​: ವಿದ್ಯಾಸಾಗರ್ ಶಾಲೆಯಲ್ಲಿ ಸಂಘರ್ಷ, ಪೋಷಕರಿಂದ ವಾಗ್ವಾದ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 12, 2022 | 1:49 PM

ಬೆಂಗಳೂರು: ರಾಜ್ಯದ ನಾನಾ ಶಾಲಾ ಕಾಲೇಜುಗಳಲ್ಲಿ ಸುಂಟರಗಾಳಿ ಎಬ್ಬಿಸಿರುವ ಹಿಜಾಬ್​ ವಿವಾದ ಇದೀಗ ರಾಜಧಾನಿ ಬೆಂಗಳೂರು ನಗರಕ್ಕೂ ಲಗ್ಗೆಯಿಟ್ಟಿದೆ. ಹಿಜಾಬ್​ ಫೈಟ್​ ನಿಂದಾಗಿ ಚಂದ್ರಾ ಲೇಔಟ್​ನ ವಿದ್ಯಾಸಾಗರ್ ಶಾಲೆಯಲ್ಲಿ ಸಂಘರ್ಷ ಏರ್ಪಟ್ಟಿದೆ. ಹಿಜಾಬ್ ಧರಿಸದಂತೆ ಶಿಕ್ಷಕರು ಸೂಚನೆ ನೀಡಿದರೆಂದು ತರಗತಿಗೆ ನುಗ್ಗಿ ಶಿಕ್ಷಕರ ಜತೆ ಪೋಷಕರು ವಾಗ್ವಾದ ನಡೆಸಿದ್ದಾರೆ. 7ನೇ ತರಗತಿ ಮಕ್ಕಳಿಗೆ ಶಿಕ್ಷಕರಿಂದ ಹಿಜಾಬ್ ವಿಚಾರವಾಗಿ ಕಿರುಕುಳ ನೀಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ತ್ವೇಷಮಯ ವಾತಾವರಣದಿಂದಾಗಿ ಚಂದ್ರಾ ಲೇಔಟ್​ನ ವಿದ್ಯಾಸಾಗರ್ ಶಾಲೆಗೆ ಪೊಲೀಸರು ದೌಡಾಯಿಸಿದ್ದಾರೆ. ಹಿಜಾಬ್​ ಪರವಿರುವ (hijab row) ಪೋಷಕರು ಮತ್ತು ಶಿಕ್ಷಕರ ಜತೆ ಚಂದ್ರಾ ಲೇಔಟ್ ಪೊಲೀಸರು ಚರ್ಚೆಗಳನ್ನು ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ವಿದ್ಯಾಸಾಗರ ಪಬ್ಲಿಕ್ ಶಾಲೆಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಅವರು ಚಂದ್ರಾ ಲೇಔಟ್​ನಲ್ಲಿರುವ ವಿದ್ಯಾಸಾಗರ್ ಶಾಲೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ, ಬೋರ್ಡ್ ಮೇಲೆ ಹಿಜಾಬ್ ಬಗ್ಗೆ ಅಶ್ಲೀಲವಾಗಿ ಬರೆದ ಶಿಕ್ಷಕಿಯನ್ನ ಕರೆಸುವಂತೆ ಪೋಷಕರು ಪಟ್ಟುಹಿಡಿದಿದ್ದಾರೆ. ಚಂದ್ರಲೇಔಟ್ ಪೊಲೀಸರು ಪೋಷಕರನ್ನ ಸಮಾಧಾನ ಪಡಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ಬೈಲಾಂಜನಪ್ಪ ಹೇಳಿಕೆ: ವಿದ್ಯಾಸಾಗರ ಶಾಲೆಯಲ್ಲಿ ಗೊಂದಲದ ವಾತಾವರಣವಿತ್ತು. ಹೀಗಾಗಿ ವಿದ್ಯಾಸಾಗರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪೋಷಕರು ಆರೋಪಿಸಿದ ಶಿಕ್ಷಕಿ ಜತೆ ಚರ್ಚೆ ಮಾಡಿದ್ದೇನೆ. ಕೇವಲ ಪಾಠವನ್ನು ಮಾತ್ರ ಮಾಡಿದ್ದೇನೆಂದು ಹೇಳಿದ್ದಾರೆ. ಯಾವುದೇ ಕೋರ್ಟ್ ವಿಚಾರ ಚರ್ಚಿಸಿಲ್ಲವೆಂದು ತಿಳಿಸಿದ್ದಾರೆ. ಸದರಿ ಶಿಕ್ಷಕಿ ಸ್ಪಷ್ಟನೆ ನೀಡಿದ್ದಾರೆ ಎಂದು ಡಿಡಿಪಿಐ ಬೈಲಾಂಜನಪ್ಪ ಹೇಳಿದ್ದಾರೆ.

ವಿದ್ಯಾಸಾಗರ್​ ಶಾಲೆಯಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗಿಲ್ಲ-ಪೋಷಕರು ವಿದ್ಯಾಸಾಗರ್​ ಶಾಲೆಯ ಶಿಕ್ಷಕಿಯೊಬ್ಬರು ‘ಕೆಎಲ್‌ಎಸ್’ ಅಂತಾ ಬೋರ್ಡ್​ ಮೆಲೆ ಬರೆದಿದ್ದಾರೆ. ಇದೊಂದು ಇನ್ಶಿಯಲ್ ಅಲ್ಲ. ಇದರ ಹಿಂದೆ ಏನೋ ಕೆಟ್ಟ ಪದ, ವಿಚಾರ ಇರಬೇಕು ಎಂದು ಪೋಷಕರು ಕಿಡಿಕಾರಿದ್ದಾರೆ. ಅದರ ಹೊರತಾಗಿ ಘಟನೆಯ ಸಂಬಂಧ ಶಾಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಆದರೆ ಇಲ್ಲಿ ಯಾವುದೇ ಹಿಜಾಬ್ ವಿವಾದ ಸೃಷ್ಟಿಯಾಗಿಲ್ಲ ಎಂದು ಶಾಲಾ ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ.

ಶಿಕ್ಷಕಿ ಕೆಲಸದಿಂದ ವಜಾ: ಬೆಂಗಳೂರಿನ ವಿದ್ಯಾಸಾಗರ್ ಶಾಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿಕ್ಷಕಿಯನ್ನು ಡಿಸ್​ಮಿಸ್​​ ಮಾಡಲಾಗಿದೆ. ವಿದ್ಯಾಸಾಗರ್ ಶಾಲಾ ಆಡಳಿತ ಮಂಡಳಿಯು ಮೊದಲು ಸಸ್ಪೆಂಡ್ ಮಾಡಿದ್ದು, ಆ ನಂತರ ಶಿಕ್ಷಕಿಯನ್ನು ಕೆಲಸದಿಂದಲೇ ತೆಗೆದುಹಾಕುವ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ವಿವಾದಿತ ಶಿಕ್ಷಕಿ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ ಪೋಷಕರು: ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ವಿವಾದ ವಿಚಾರ ಶಿಕ್ಷಕಿ ವಿರುದ್ಧ ಪೋಷಕರು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರ ಲೇಔಟ್ ಪೊಲೀಸ್ ಠಾಣೆ ಬಳಿ ಸೇರಿರುವ ಪೋಷಕರು ಶಿಕ್ಷಕಿ ವಿರುದ್ಧ ದೂರು ನೀಡಿದ್ದು, ಚಂದ್ರಾ ಲೇಔಟ್ ಪೊಲೀಸರು ದೂರು ಸ್ವೀಕರಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿ, ಕೇವಲ ತರಗತಿ ಮಾತ್ರ ಮಾಡಬೇಕು: ಈ ಮಧ್ಯೆ, ಹಿಜಾಬ್ ಫೈಟ್​ ಸಮ್ಮುಖದಲ್ಲಿ ಶಿಕ್ಷಣ ಇಲಾಖೆ ಆತಂಕದಲ್ಲಿದೆ. ಸೋಮವಾರದಿಂದ ಪ್ರೌಢ ಶಾಲೆ ಆರಂಭಕ್ಕೆ ಮುಂದಾಗಿತ್ತು. ಆದರೆ ಈಗ ಸೋಮವಾರದಿಂದ ಶಾಲೆ ಆರಂಭಕ್ಕೆ ಇಲಾಖೆಯು ಆತಂಕ ಪಡುತ್ತೀದೆ.

ಶಾಲಾ ಆವರಣದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಯೇ ಶಾಲೆ ಆರಂಭಿಸಬೇಕು. ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಶಾಂತಿ ಹದಗೆಡದಂತೆ ನೋಡಿಕೊಳ್ಳಿ. ಕೆಲವು ದಿನಗಳ ಮಟ್ಟಿಗೆ ಯಾವುದೇ ರೀತಿಯ ವಿದ್ಯಾರ್ಥಿ ಕಾರ್ಯಕ್ರಮಗಳಿಗೆ ಅವಕಾಶ ಬೇಡ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿ, ಕೇವಲ ತರಗತಿ ಮಾತ್ರ ಮಾಡಬೇಕು ಎಂದು ಎಲ್ಲಾ ಜಿಲ್ಲಾ ನಿರ್ದೇಶಕರು ಹಾಗೂ ಬಿಇಎಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದೆ.

ಆಯಾ ಜಿಲ್ಲಾ ಡಿ.ಸಿ. ಹಾಗೂ ಎಸ್​.ಪಿ. ಜೊತೆ ಡಿಡಿಪಿಐ ನಿರಂತರ ಸಂಪರ್ಕದಲ್ಲಿರಬೇಕು: ಒಂದೊಮ್ಮೆ ಸಮವಸ್ತ್ರ ಕಿರಿಕ್ ಅಥವಾ ಗಲಾಟೆ ಎದುರಾದ್ರೆ ತಕ್ಷಣಕ್ಕೆ ಡಿಡಿಪಿಐ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ಪ್ರೌಢ ಶಾಲೆಗಳ ಆರಂಭಕ್ಕೆ ಡಿಡಿಪಿಐಗಳ ನೇತೃತ್ವದಲ್ಲಿ ನಿರಂತರ ಸಭೆ ನಡೆಸಬೇಕು. ಇಂದು ಝೂಮ್ ಮಿಟಿಂಗ್ ಮೂಲಕ ಬಿಇಒಗಳಿಗೆ ಡಿಡಿಪಿಐ ಕಡೆಯಿಂದ ಸಲಹೆ ಸೂಚನೆ ನೀಡಲಾಗುವುದು. ಸೂಕ್ಷ್ಮ ಜಿಲ್ಲೆಗಳಲ್ಲಿ ಡಿಡಿಪಿಐಗಳಿಂದ ಪ್ರಮುಖ ಶಾಲೆಗಳಿಗೆ ಭೇಟಿಯಾಗಲಿದೆ. ಆಯಾ ಜಿಲ್ಲಾಧಿಕಾರಗಳು ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಜೊತೆ ಡಿಡಿಪಿಐಗಳು ನಿರಂತರ ಸಂಪರ್ಕದಲ್ಲಿರಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಅಹಿತಕರ ಘಟನೆಗಳು ಆಗದಂತೆ ಬಿಇಒಗಳಿಗೆ ಎಚ್ಚರ ವಹಿಸುವಂತೆ ಸಲಹೆ ನೀಡಲಾಗಿದೆ. ಶಾಲಾ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಹಾಗೂ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕ ಇರುವಂತೆ ಬಿಇಒಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಸಿಡಿ ಪ್ರಕರಣ ಕೈಜಾರುವ ಆತಂಕ -ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಾಧಿತ ಯುವತಿ, ಶಾಸಕ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ

ಇದನ್ನೂ ಓದಿ: ಯಾವುದೇ ಪೋಷಕಾಂಶ ಇಲ್ಲದ ಬಿಳಿ ಪದಾರ್ಥವೇ ಸಕ್ಕರೆ! ಸಕ್ಕರೆ ಶುದ್ದೀಕರಿಸಿದಾಗ 64 ಅನ್ನಘಟಕಗಳು ನಾಶವಾಗುತ್ತವೆ!

Published On - 10:47 am, Sat, 12 February 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ