Hijab Row: ಉಡುಪಿಯ ಪ್ರತಿಭಟನಾನಿರತ ವಿದ್ಯಾರ್ಥಿನಿಯರು ತರಗತಿಯಲ್ಲಿ ಮೊದಲು ಹಿಜಾಬ್ ಧರಿಸುತ್ತಿರಲಿಲ್ಲ; ಸಹಪಾಠಿ ಹೇಳಿಕೆ

Karnataka Hijab Row: ಉಡುಪಿಯಲ್ಲಿ ಹಿಜಾಬ್ ವಿವಾದಕ್ಕೆ ಕಾರಣವಾದ 6 ವಿದ್ಯಾರ್ಥಿನಿಯರೂ ಮೊದಲು ಹಿಜಾಬ್ ಧರಿಸುತ್ತಿರಲಿಲ್ಲ ಎಂದು ಅವರ ಸಹಪಾಠಿ ವಿದ್ಯಾರ್ಥಿನಿಯೋರ್ವಳು ಮಾಹಿತಿ ನೀಡಿದ್ದಾರೆ. ಅವರ ನಡೆಗೆ ಯಾರೋ ಪ್ರಭಾವ ಬೀರಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

Hijab Row: ಉಡುಪಿಯ ಪ್ರತಿಭಟನಾನಿರತ ವಿದ್ಯಾರ್ಥಿನಿಯರು ತರಗತಿಯಲ್ಲಿ ಮೊದಲು ಹಿಜಾಬ್ ಧರಿಸುತ್ತಿರಲಿಲ್ಲ; ಸಹಪಾಠಿ ಹೇಳಿಕೆ
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು
Follow us
TV9 Web
| Updated By: shivaprasad.hs

Updated on:Feb 12, 2022 | 11:41 AM

ಉಡುಪಿ: ಕಾಲೇಜುಗಳಲ್ಲಿ ಹಿಜಾಬ್ ವರ್ಸಸ್ ಕೇಸರಿ ಫೈಟ್ (Hijab-Kesari Row) ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ವಿಚಾರಗಳು ಹೊರಬರುತ್ತಿವೆ. ಈ ಅಂಶಗಳ ಮೂಲಕ ಹಿಜಾಬ್ ವಿವಾದ (Hijab Row) ಉದ್ದೇಶಪೂರ್ವಕವಾಗಿ ಹುಟ್ಟಿಕೊಂಡ ವಿವಾದವೇ ಎನ್ನುವ ಅನುಮಾನ ಮೂಡಿದೆ. ಕಾರಣ, ಧರಣಿ ನಡೆಸುತ್ತಿರುವ ವಿದ್ಯಾರ್ಥಿನಿಯರ ಸಹಪಾಠಿಯೋರ್ವಳು ನೀಡಿರುವ ಹೇಳಿಕೆ. ಇದರಲ್ಲಿ ಪ್ರಕರಣದ ಕುರಿತು ಮತ್ತಷ್ಟು ವಿಚಾರಗಳು ಬಯಲಾಗಿದೆ. ಧರಣಿ ನಡೆಸುತ್ತಿರುವ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಮೊದಲಿಗೆ ಹಿಜಾಬ್ ಧರಿಸುತ್ತಿರಲಿಲ್ಲ ಎಂದು ಸಹಪಾಠಿ ಹೇಳಿಕೆ ನೀಡಿದ್ದಾಳೆ. ‘ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ಇಲ್ಲ. ಪ್ರಾಂಶುಪಾಲರೇ ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದರು. ಬೇರೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಮಸ್ಯೆ ಇಲ್ಲ. ಈ 6 ವಿದ್ಯಾರ್ಥಿನಿಯರಿಗೆ ಮಾತ್ರ ಹಿಜಾಬ್ ಸಮಸ್ಯೆ. ಇವರನ್ನು ಯಾರೋ ಪ್ರಭಾವಿಸಿದ್ದಾರೆ’ ಎಂದು ಸಹಪಾಠಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎಬಿವಿಪಿ ಪ್ರತಿಭಟನೆಯಲ್ಲಿ ಪ್ರಸ್ತುತ ಹಿಜಾಬ್ ವಿವಾದದಲ್ಲಿ ಕಾಣಿಸಿಕೊಂಡಿರುವ 6 ಜನ ವಿದ್ಯಾರ್ಥಿನಿಯರು ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಸಂಘಟನೆಯೊಂದು ಈ ವಿದ್ಯಾರ್ಥಿನಿಯರ ಮನಸ್ಸನ್ನು ಪರಿವರ್ತಿಸಲು ಯತ್ನಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಪ್ರತಿಭಟನಾನಿರತ ವಿದ್ಯಾರ್ಥಿನಿಯರ ಸಹಪಾಠಿ, ‘‘ಎಬಿವಿಪಿ ಪ್ರತಿಭಟನೆಗೆ ಯಾರನ್ನೂ ಒತ್ತಾಯ ಮಾಡಿಲ್ಲ. ಈ ವಿದ್ಯಾರ್ಥಿನಿಯರು ಸ್ವಇಚ್ಛೆಯಿಂದಲೇ ಬಂದಿದ್ದರು’ ಎಂದು ಹೇಳಿಕೆ ನೀಡಿದ್ದಾರೆ.

‘ಈ ಗಲಾಟೆ ಆರಂಭವಾದ ನಂತರ ಸಮಸ್ಯೆ ಬಗೆಹರಿಸಲು ಕಾಲೇಜು ತುಂಬಾ ಪ್ರಯತ್ನಿಸಿದೆ. ಹಿಜಬ್ ತೆಗೆದೇ ಕುಳಿತುಕೊಳ್ಳಿ ಎಂದು ಆದೇಶಿಸಿದ್ದರು. ಆದರೂ ಹಠ ಮಾಡಿ ಅವರು ಹೊರಗೆ ಕುಳಿತುಕೊಳ್ಳುತ್ತಿದ್ದರು. ತರಗತಿಯಲ್ಲಿ ಹಿಜಾಬ್ ಧರಿಸಿರೋ ಫೋಟೋ ಸುಳ್ಳು. ಇತರ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಕಾನೂನು ಪಾಲಿಸುತ್ತಾರೆ. ಬರುವಾಗ ಹಿಜಾಬ್ ಧರಿಸಿ ಬರುತ್ತಾರೆ; ಹೋಗುವಾಗ ಹಿಜಾಬ್ ತೆಗೆದು ಹೋಗುತ್ತಾರೆ. ಈ ವಿದ್ಯಾರ್ಥಿನಿಯರು ಮಾತ್ರ ಹೀಗೆ ಮಾಡುತ್ತಿದ್ದಾರೆ’ ಎಂದು ಹೋರಾಟಗಾರ್ತಿಯರಲ್ಲಿ ಮೂವರ ಸಹಪಾಠಿಯಾಗಿರುವ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾರೆ.

ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಮೊದಲು ಹಿಜಾಬ್ ಹಾಕುತ್ತಿರಲಿಲ್ಲ: ಸಹಪಾಠಿ

ಪ್ರತಿಭಟನೆ ನಡೆಸುತ್ತಿರುವ ಮೂರು ವಿದ್ಯಾರ್ಥಿನಿಯರಿಗೆ ಈಕೆ ಸಹಪಾಠಿಯಾಗಿದ್ದಾಳೆ. ಆಕೆ ನೀಡಿರುವ ಮಾಹಿತಿಯ ಪ್ರಕಾರ, ‘ಈ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಹಾಕುತ್ತಿರಲಿಲ್ಲ. ರೂಲ್ಸ್ ಗೊತ್ತಿರದವರು ಕಾಲೇಜು ಆರಂಭದಲ್ಲಿ ಹಾಕಿಕೊಂಡು ಬರುತ್ತಿದ್ದರು. ರೂಲ್ಸ್ ತಿಳಿಸಿದ ನಂತರ ಎಲ್ಲರೂ ಹಿಜಾಬ್ ತೆಗೆದಿರಿಸಿದರು. ಈ ವಿದ್ಯಾರ್ಥಿನಿಯರು ಕೂಡ ಒಂದುವರೆ ವರ್ಷ ಹಿಜಾಬ್ ಧರಿಸಿರಲಿಲ್ಲ. ನಮ್ಮ ಕಾಲೇಜಿನ ಇತರ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಯಾವುದೇ ಸಮಸ್ಯೆ ಇಲ್ಲ. ಇವರಿಗೆ ಯಾರೋ ಪ್ರೇರಣೆ ಕೊಟ್ಟು ಒತ್ತಾಯ ಮಾಡಿಸುತ್ತಿದ್ದಾರೆ’ ಎಂದು ಹೇಳಿದ್ದಾಳೆ.

ಹಿಜಾಬ್ ವಿವಾದದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಆತಂಕ ಹಂಚಿಕೊಂಡಿರುವ ವಿದ್ಯಾರ್ಥಿನಿ, ‘‘ಸೆಕೆಂಡ್ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಂದಿದೆ. ಈ ರೀತಿ ಮಾಡಿದರೆ ನಮಗೆ ಕಲಿಕೆ ಮಾಡಲು ಸಾಧ್ಯವಿಲ್ಲ. ಅವರು ಚೆನ್ನಾಗಿ ಕಲಿಯಬೇಕು, ನಾವೂ ಕಲಿಯಬೇಕು. ಗಲಾಟೆಯಾದರೆ ನಮಗೆ ಏಕಾಗ್ರತೆ ಬರುವುದಿಲ್ಲ. ಹಿಜಾಬ್ ವಿವಾದವನ್ನು ಬೇಗ ಮುಗಿಸಿ. ಆದಷ್ಟು ಬೇಗ ತರಗತಿಯನ್ನು ಆರಂಭಿಸಿ’’ ಎಂದು ಕೋರಿಕೊಂಡಿದ್ದಾರೆ.

ಇದನ್ನೂ ಓದಿ:

Hijab Row: ಹಿಜಾಬ್ ಪ್ರಕರಣದ ಮತ್ತಷ್ಟು ಒಳಸುಳಿಗಳು ಲಭ್ಯ; ಇಲ್ಲಿದೆ ಪೂರ್ಣ ಮಾಹಿತಿ

ಹಿಜಾಬ್ ವಿವಾದದ ನಡುವೆ ದಕ್ಷಿಣ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್! ವಿಡಿಯೋ ವೈರಲ್

Published On - 10:58 am, Sat, 12 February 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ