ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿ ಹಿಜಾಬ್ ವಿವಾದ ಸೃಷ್ಟಿಸಲಾಗಿದೆ: ಎಸ್ಡಿಪಿಐನ ಅತಾವುಲ್ಲಾ ಜೋಕಟ್ಟೆ ಹೇಳಿಕೆ
ಹಿಜಾಬ್, ಕೇಸರಿ ಶಾಲು ವಿವಾದದ ಬಗ್ಗೆ ತನಿಖೆಯಾಗಬೇಕು. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿ ವಿವಾದ ಸೃಷ್ಟಿ ಮಾಡಲಾಗಿದೆ. ಇದೀಗ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ ಎಂದು ಅತಾವುಲ್ಲಾ ಜೋಕಟ್ಟೆ ಹೇಳಿದ್ದಾರೆ.
ಉಡುಪಿ: ನಾವು ಯಾವುದೇ ಧರ್ಮವನ್ನು ಆಧರಿಸಿ ಪಕ್ಷವನ್ನು ಕಟ್ಟಿಲ್ಲ. ಎಸ್ಡಿಪಿಐ ಸ್ಥಾಪಿಸಿದವರು ಮುಸಲ್ಮಾನ ಆಗಿರಬಹುದು. ಆದರೆ ನಮ್ಮ ಪಕ್ಷದಲ್ಲಿ ಕ್ರೈಸ್ತರು, ಹಿಂದುಳಿದವರು ಇದ್ದಾರೆ. ಪ್ರಜಾಪ್ರಭುತ್ವ ದೇಶವಾಗಿರಬೇಕೆನ್ನುವ ನಿಟ್ಟಿನಲ್ಲಿ ಸಂಘಟನೆ ಇದೆ. ಹಿಂದುಳಿದವರು, ಅಲ್ಪಸಂಖ್ಯಾತರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಉಡುಪಿಯಲ್ಲಿ ಎಸ್ಡಿಪಿಐ ಸದಸ್ಯ ಅತಾವುಲ್ಲಾ ಜೋಕಟ್ಟೆ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ನಮ್ಮ ವಿರುದ್ಧ ಶಾಸಕ ರಘುಪತಿ ಭಟ್ ಆರೋಪ ನಿರಾಧಾರ ಆಗಿದೆ. ಶಾಲೆಯ ಆರಂಭದಿಂದಲೂ ಹಿಜಾಬ್ ಧರಿಸಿ ಹೋಗುತ್ತಿದ್ದರು. ಆದರೆ, ಈಗ ಪರೀಕ್ಷೆ ಸಂದರ್ಭದಲ್ಲಿ ಕೇಸರಿ ಧರಿಸಿ ಸಮಸ್ಯೆ ಸೃಷ್ಟಿಸಿದ್ಯಾರು? ಇದು ರಘುಪತಿ ಭಟ್, ಸಂಘ ಪರಿವಾರದವರ ಷಡ್ಯಂತ್ರ. ಹಿಜಾಬ್, ಕೇಸರಿ ಶಾಲು ವಿವಾದದ ಬಗ್ಗೆ ತನಿಖೆಯಾಗಬೇಕು. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿ ವಿವಾದ ಸೃಷ್ಟಿ ಮಾಡಲಾಗಿದೆ. ಇದೀಗ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ ಎಂದು ಅತಾವುಲ್ಲಾ ಜೋಕಟ್ಟೆ ಹೇಳಿದ್ದಾರೆ.
ಹೈಕೋರ್ಟ್ನ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇವೆ. ಹೈಕೋರ್ಟ್, ಸುಪ್ರೀಂಕೋರ್ಟ್ ಮೇಲೆ ನಮಗೆ ಗೌರವವಿದೆ. ಹೈಕೋರ್ಟ್ ನಮಗೆ ನ್ಯಾಯ ಒದಗಿಸುವ ಆಶಾಭಾವನೆಯಿದೆ. ಯಾವುದೇ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ. ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾರಿಗೆ ಹಕ್ಕು ನೀಡಿದೆ. ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಕಸಿಯುವ ಹಕ್ಕು ಇಲ್ಲ. ಧಾರ್ಮಿಕ ಸ್ವಾತಂತ್ರ್ಯ ಕಸಿಯುವುದಕ್ಕೆ ಎಸ್ಡಿಪಿಐ ವಿರೋಧವಿದೆ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಈಗ ಬಂದಿರುವುದು ಮಧ್ಯಂತರ ಆದೇಶವಷ್ಟೆ. ಅದು ಸಂಪೂರ್ಣ ತೀರ್ಪಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬಗ್ಗೆ ನಮಗೆ ಗೌರವವಿದೆ. ಕೋರ್ಟ್ನ ನಿರ್ಣಯದ ಬಗ್ಗೆ ಆಶಾಭಾವವಿದೆ. ದೇಶದಲ್ಲಿ ಸಂವಿಧಾನವಿದೆ. ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಕೂಡ ನಮಗೆ ನ್ಯಾಯ ಒದಗಿಸಲಿದೆ ಎನ್ನುವ ಆಶಾಭಾವವಿದೆ. ಬಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ ಧರ್ಮಕ್ಕೂ ಹಕ್ಕನ್ನು ನೀಡಲಾಗಿದೆ. ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಹಕ್ಕು ಯಾರಿಗೂ ಕೂಡ ಇಲ್ಲ. ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವುದಕ್ಕೆ ಎಸ್ಡಿಪಿಐ ವಿರೋಧ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಅವಕಾಶ ನಿರಾಕರಣೆ; ಬೀದರ್‌ನ ಬ್ರಿಮ್ಸ್ ಕಾಲೇಜಿನ ವಿಡಿಯೋ ವೈರಲ್
ಇದನ್ನೂ ಓದಿ: ಸೂಕ್ತ ಸಮಯ ಬಂದಾಗ ನಾವು ಮಧ್ಯ ಪ್ರವೇಶಿಸುತ್ತೇವೆ; ಹಿಜಾಬ್ ವಿವಾದದ ಕುರಿತು ತುರ್ತು ವಿಚಾರಣೆ ಅಸಾಧ್ಯ ಎಂದ ಸುಪ್ರೀಂ ಕೋರ್ಟ್