AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಪೋಷಕಾಂಶ ಇಲ್ಲದ ಬಿಳಿ ಪದಾರ್ಥವೇ ಸಕ್ಕರೆ! ಸಕ್ಕರೆ ಶುದ್ದೀಕರಿಸಿದಾಗ 64 ಅನ್ನಘಟಕಗಳು ನಾಶವಾಗುತ್ತವೆ!

Refined Sugar Effects: ಸಕ್ಕರೆಯನ್ನು ಶುದ್ದೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು 64 ಅನ್ನಘಟಕಗಳು ನಾಶವಾಗುತ್ತವೆ. ಸಕ್ಕರೆ ಉತ್ಪನ್ನದಲ್ಲಿ ಯಾವುದೇ ಪ್ರೊಟೀನ್ ಮತ್ತು ಕೊಬ್ಬಿನಾಂಶ ಇಲ್ಲ. ಆದರೆ 100 ಗ್ರಾಂ ಸಕ್ಕರೆಯಲ್ಲಿ 99 % ಕಾರ್ಬೋಹೈಡ್ರೇಟ್​​ ಗಳೆ ತುಂಬಿವೆ.

ಯಾವುದೇ ಪೋಷಕಾಂಶ ಇಲ್ಲದ ಬಿಳಿ ಪದಾರ್ಥವೇ ಸಕ್ಕರೆ! ಸಕ್ಕರೆ ಶುದ್ದೀಕರಿಸಿದಾಗ 64 ಅನ್ನಘಟಕಗಳು ನಾಶವಾಗುತ್ತವೆ!
ಸಕ್ಕರೆ ಶುದ್ದೀಕರಿಸುವಾಗ ಅದರಲ್ಲಿನ 64 ಅನ್ನಘಟಕಗಳು ನಾಶವಾಗುತ್ತವೆ! ಯಾವುದೇ ಪೋಷಕಾಂಶ ಇಲ್ಲದ ಬಿಳಿ ಪದಾರ್ಥವೇ ಸಕ್ಕರೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 12, 2022 | 9:06 AM

ಯಾವುದೇ ಆಹಾರವು ದೇಹಕ್ಕೆ ಹಾನಿ ಮತ್ತು ಪ್ರಯೋಜನ ಎರಡೂ ಮಾಡಬಹುದು. ಮುಖ್ಯ ವಿಷಯವೆಂದರೆ ಅದನ್ನು ಮಿತವಾಗಿ ಬಳಸುವುದು, ಇಲ್ಲದಿದ್ದರೆ ಅಡ್ಡ ಮತ್ತು ವ್ಯತಿರಿಕ್ತ ಪರಿಣಾಮಗಳು ಕಟ್ಟಿಟ್ಟಬುತ್ತಿ. ಉದಾಹರಣೆಗೆ ಸಕ್ಕರೆ ಪದಾರ್ಥವನ್ನೇ ನೋಡೋಣ. ಸಕ್ಕರೆಯನ್ನು ಸಂಸ್ಕರಿಸಲು ಸಲ್ಪರ್ ಡೈ ಆಕ್ಸೆಡ್, ಫಾಸ್ಟೋರಿಕ್​ ಆಮ್ಲ, ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಳಸಲಾಗುತ್ತೆ. ಹಾಗಾಗಿಯೇ ಸಕ್ಕರೆಯಲ್ಲಿ ಯಾವುದೇ ರೀತಿಯ ಪೋಷಕಾಂಶಗಳಿರಲ್ಲ (Refined Sugar Effects).

ಸಕ್ಕರೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಸೋಡಿಯಂ ಸಣ್ಣ ಪ್ರಮಾಣದಲ್ಲಿದೆ. ಸಕ್ಕರೆ ಉತ್ಪನ್ನದಲ್ಲಿ ಯಾವುದೇ ಪ್ರೊಟೀನ್ ಮತ್ತು ಕೊಬ್ಬಿನಾಂಶ ಇಲ್ಲ. ಆದರೆ 100 ಗ್ರಾಂ ಸಕ್ಕರೆಯಲ್ಲಿ 99 % ಕಾರ್ಬೋಹೈಡ್ರೇಟ್​​ ಗಳೆ ತುಂಬಿವೆ. ಇದು ಹೊಟ್ಟೆಯ ಆಮ್ಲೀಯ ವಾತಾವರಣಕ್ಕೆ ಬಂದಾಗ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಆಗಿ ವಿಭಜನೆಯಾಗುತ್ತದೆ. ಈ ಕಾರಣಕ್ಕಾಗಿಯೇ ಸಿಹಿ ಪದಾರ್ಥವನ್ನು ಖಾಲಿ ಕಾರ್ಬೋಹೈಡ್ರೇಟ್ ಎಂದು ಕರೆಯಲಾಗುತ್ತದೆ.

ಸಕ್ಕರೆ ಬಿಳಿ ಬಣ್ಣಕ್ಕೆ ಬರಲು ಸಲ್ಫರ್ ಡೈ ಆಕ್ಸೈಡ್ ರಾಸಾಯನಿಕ ಬಳಸುವರು. ಅದನ್ನು ಸಲ್ಫರ್ ಮದ್ದಿನ ಪಟಾಕಿಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ಸಲ್ಪರ್ ರಾಸಾಯನಿಕದಿಂದ ಉಸಿರುನಾಳದ ಊತ, ಆಸ್ತಮಾ ತೀವ್ರವಾಗುವುದು ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

ಸಕ್ಕರೆಯನ್ನು ಶುದ್ದೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು 64 ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (ವಿಟಮಿನ್ಸ್), ಖನಿಜ ದ್ರವ್ಯಗಳು (ಮಿನರಲ್ಸ್), ಕಿಣ್ವಗಳು (ಎಂಜೈಮ್ಸ್‌), ಎಮಿನೋ ಆಸಿಡ್, ಫೈಬರ್ ಅಂಶಗಳು ನಾಶವಾಗುತ್ತವೆ ಮತ್ತು ಉಳಿಯುುವುದೇ ಪೋಷಕಾಂಶವಿಲ್ಲದ ಹಾನಿಕರವಾದ ಸುಕ್ರೋಸ್ ಮಾತ್ರ!

ಶುಗರ್ ಆರೋಗ್ಯಕ್ಕೆ ಕಿರಿಕಿರಿ, ಕಹಿ ಕಹಿ ಅಷ್ಟೇ! ಸಕ್ಕರೆ ಸೇವನೆಯು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ತಕ್ಷಣ ಪರಿಣಾಮ ಬೀರುವುದು. ಇದರಿಂದ ಬೊಜ್ಜು, ಹೃದಯದ ಕಾಯಿಲೆ ಮತ್ತು ಮಧುಮೇಹ ಬರುವುದು. ಆಧುನಿಕ ಸಂಶೋಧನೆಯ ಪ್ರಕಾರ ಅಧಿಕ ಸಕ್ಕರೆಯುಕ್ತ ಆಹಾರ ಮತ್ತು ವಿವಿಧ ರೀತಿಯ ಕ್ಯಾನ್ಸರ್‌ ಗೂ ಸಂಬಂಧವಿದೆ.

ಸಕ್ಕರೆಯಿಂದ ಶರೀರದಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕದ ಸಮತೋಲನವು ಏರುಪೇರಾಗುತ್ತೆ. ಸಕ್ಕರೆಯಿಂದ ಚರ್ಮದಲ್ಲಿ ಕೊಲ್ಯಾಜಿನ್ ತಯಾರಿಕೆ ಕಡಿಮೆಯಾಗುವುದರಿಂದ ಚರ್ಮದಲ್ಲಿ ನೆರಿಗೆ ಮತ್ತು ಚರ್ಮವು ಜೋತು ಬೀಳುವಂತೆ ಮಾಡಿ ಅದು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಸಕ್ಕರೆಯು ರಕ್ತನಾಳಗಳಿಗೆ ಹೋದ ಬಳಿಕ ಅದು ಪ್ರೊಟೀನ್ ಜತೆಗೆ ಸೇರಿಕೊಳ್ಳುವುದು. ಪ್ರೊಟೀನ್ ಮತ್ತು ಸಕ್ಕರೆ ಸೇರಿಕೊಳ್ಳುವ ಪರಿಣಾಮ ಚರ್ಮದ ಸ್ಥಿತಿಸ್ಥಾಪಕತ್ವವು ಕಳೆದುಕೊಳ್ಳುವುದು ಮತ್ತು ಇದರಿಂದ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುವುದು.

ಅತಿಯಾದ ಸಕ್ಕರೆ ಬಳಕೆಯಿಂದ ರಕ್ತದೊತ್ತಡ ಹೆಚ್ಚಾಗಿ ಮೆದುಳು ಆಘಾತ ಮತ್ತು ಮೆದುಳಿನಲ್ಲಿ ರಕ್ತಸ್ರಾವ ಆಗುವ ಸಂಭವ ಹೆಚ್ಚು. ಸಕ್ಕರೆಯ ಅತಿಯಾದ ಬಳಕೆಯು ಮಧುಮೇಹ ಮತ್ತು ಜಠರದ ಹುಣ್ಣಿಗೆ ಹಾದಿ ಮಾಡಿಕೊಡುತ್ತದೆ.

ಯಕೃತ್ ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮದ್ಯ ಕುಡಿಸಿದಂತಾಗುತ್ತದೆ. ಮದ್ಯ ಯಕೃತ್ ಗೆ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮ: ಯಕೃತ್ ವೈಫಲ್ಯ ಉಚಿತ!

ದೇಹ ಸಕ್ಕರೆಯನ್ನು ಜೀರ್ಣಿಸಿಕೊಂಡ ಬಳಿಕ ರಕ್ತದಲ್ಲಿ ಡೋಪಮೈನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಮೆದುಳಿಗೆ ಮುದ ನೀಡುವ ರಾಸಾಯನಿಕವಾಗಿದ್ದು ಮೆದುಳು ಹೆಚ್ಚು ಹೆಚ್ಚು ಇಷ್ಟಪಡತೊಡಗುತ್ತದೆ. ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಗೆ ಕಾರಣವಾಗಬಹುದು.

ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಸಕ್ಕರೆ (ಗ್ಲುಕೋಸ್) ಇರುವ ಸಂದರ್ಭದಲ್ಲಿ ಮೆದುಳಿಗೆ ಹಾನಿಯಾಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚುತ್ತದೆ.

Published On - 9:03 am, Sat, 12 February 22

ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ