ಬೆಂಗಳೂರು: 2021ರಲ್ಲಿ ರಸ್ತೆ ಗುಂಡಿಗಳಿಗೆ ಬಲಿಯಾದ ಜೀವಗಳೆಷ್ಟು ಗೊತ್ತಾ? ಹೈಕೋರ್ಟ್ ಬಿಬಿಎಂಪಿಗೆ ಕೊಟ್ಟ ಸೂಚನೆ ಇಲ್ಲಿದೆ
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬಹುತೇಕ ರಸ್ತೆಗಳು ತೀರಾ ಹದಗೆಟ್ಟಿವೆ. ಗುಣಮಟ್ಟವಿಲ್ಲದ ರಸ್ತೆಗಳಿಂದ ಜೀವಹಾನಿಯ ಜೊತೆಗೆ ಆರೋಗ್ಯ ಮತ್ತು ಆರ್ಥಿಕ ನಷ್ಟಗಳು ಸಂಭವಿಸುತ್ತಿವೆ.
ಬೆಂಗಳೂರು: ಕಳೆದ ವರ್ಷ ಡಿಸೆಂಬರ್ ಅಂತ್ಯದವರೆಗೂ ಬೆಂಗಳೂರಿನಲ್ಲಿ ಸುರಿದ ಮಳೆಯಿಂದ (Rain) ರಸ್ತೆ ಗುಂಡಿಗಳ (Pothole) ಸಂಖ್ಯೆ ಹೆಚ್ಚಳವಾಗಿದ್ದು, ನಗರದಲ್ಲಿ ರಸ್ತೆ ಗುಂಡಿಗಳಿಂದ ಜೀವ ಬಲಿಯಾಗುತ್ತಿದೆ. ರಸ್ತೆ ಗುಂಡಿಗಳಿಂದ ಏಳು ಮಂದಿ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆ ದ್ವಿಗುಣವಾಗಿದೆ. 2020 ರಲ್ಲಿ 3 ಜನರ ಪ್ರಾಣ ಹೋಗಿತ್ತು. ಆದರೆ 2021ರಲ್ಲಿ 7 ಜನರ ಉಸಿರು ನಿಲ್ಲಿಸಿದೆ.
ಈ ಬಗ್ಗೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಬಿಬಿಎಂಪಿಗೆ ಖಡಕ್ ಆದೇಶ ನೀಡಿತ್ತು. ಗುಂಡಿ ಮುಚ್ಚಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವಿವರ ನೀಡುವಂತೆ ಸೂಚನೆಯನ್ನೂ ನೀಡಿತ್ತು. ಬೆಂಗಳೂರಿನಲ್ಲಿರುವ ಗುಂಡಿಗಳನ್ನು ಮುಚ್ಚಲು ಏನು ಕ್ರಮ ತೆಗೆದುಕೊಂಡಿದ್ದೀರಿ? ಇದಕ್ಕೆ ಶಾಶ್ವತ ಪರಿಹಾರವಾಗಿ ಉತ್ತಮ ತಂತ್ರಜ್ಞಾನ ಬಳಕೆ ಮಾಡಬಹುದಲ್ಲವೇ ಎಂಬ ಪ್ರಶ್ನೆ ಹೈಕೋರ್ಟ್ ಕೇಳಿತ್ತು. ಆದರೆ ಈ ಪ್ರಶ್ನೆಗೆ ಬಿಬಿಎಂಪಿ ಸಮರ್ಪಕವಾದ ಉತ್ತರವನ್ನೇ ನೀಡಿಲ್ಲ.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬಹುತೇಕ ರಸ್ತೆಗಳು ತೀರಾ ಹದಗೆಟ್ಟಿವೆ. ಗುಣಮಟ್ಟವಿಲ್ಲದ ರಸ್ತೆಗಳಿಂದ ಜೀವಹಾನಿಯ ಜೊತೆಗೆ ಆರೋಗ್ಯ ಮತ್ತು ಆರ್ಥಿಕ ನಷ್ಟಗಳು ಸಂಭವಿಸುತ್ತಿವೆ. ಬೆಂಗಳೂರಿನ ಎಂಟು ವಲಯದಲ್ಲಿ ಗುಂಡಿಗಳಿರುವ ರಸ್ತೆಗಳ ಸಂಖ್ಯೆ ಹೀಗಿದೆ.
* ಪೂರ್ವ ವಲಯದಲ್ಲಿ -3,078. * ಪಶ್ಚಿಮ ವಲಯದಲ್ಲಿ -2,295. * ದಕ್ಷಿಣ ವಲಯದಲ್ಲಿ – 931. * ಬೊಮ್ಮನಹಳ್ಳಿ ವಲಯದಲ್ಲಿ -1,025. * ದಾಸರಹಳ್ಳಿ ವಲಯದಲ್ಲಿ – 576. * ಮಹಾದೇವಪುರ ವಲಯದಲ್ಲಿ – 625. * ಆರ್ಆರ್ ನಗರ ವಲಯದಲ್ಲಿ – 2,792. * ಯಲಹಂಕ ವಲಯದಲ್ಲಿ – 363.
ಒಟ್ಟು ಎಂಟು ವಲಯಗಳಲ್ಲಿ 11,685 ಗುಂಡಿ ಬಿದ್ದ ರಸ್ತೆಗಳಿವೆ. ಈ ಪೈಕಿ 9,927 ಗುಂಡಿ ಬಿದ್ದ ರಸ್ತೆಗಳ ಮೇಲೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ಉಳಿದ 1,758 ರಸ್ತೆಗಳಲ್ಲಿ ಗುಂಡಿಗಳನ್ನ ಮುಚ್ಚಬೇಕು.
ಇದನ್ನೂ ಓದಿ
RBI MPC Meet: ಆರ್ಬಿಐ ಹಣಕಾಸು ಸಮಿತಿ ಸಭೆ ಫೆಬ್ರವರಿ 8ರಿಂದ 10ಕ್ಕೆ ಮರು ನಿಗದಿ
ಉತ್ತರ ಕನ್ನಡ: ನಾಯಿಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈರಸ್; ಶ್ವಾನಪ್ರಿಯರು ಕಂಗಾಲು
Published On - 12:48 pm, Mon, 7 February 22