ಬೆಂಗಳೂರಿನ ಪಬ್​​ಗಳ ಮೇಲೆ ಪೊಲೀಸರ ದಾಳಿ: ಆಫ್ರಿಕನ್​ ಪ್ರಜೆಗಳು ವಶಕ್ಕೆ

|

Updated on: Jun 18, 2023 | 11:53 AM

ಬೆಂಗಳೂರಿನ ಎಂಜಿ ರೋಡ್​​, ಬ್ರಿಗೇಡ್​ ರೋಡ್​​ನಲ್ಲಿನ ಪಬ್​ಗಳ ಮೇಲೆ ತಡರಾತ್ರಿ ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು ದಾಳಿ ಮಾಡಿದ್ದಾರೆ.

ಬೆಂಗಳೂರಿನ ಪಬ್​​ಗಳ ಮೇಲೆ ಪೊಲೀಸರ ದಾಳಿ: ಆಫ್ರಿಕನ್​ ಪ್ರಜೆಗಳು ವಶಕ್ಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದ ಎಂಜಿ ರೋಡ್ (MG Road)​​, ಬ್ರಿಗೇಡ್​ ರೋಡ್​​ನಲ್ಲಿನ (Brigade Road) ಪಬ್​ಗಳ (Pub) ಮೇಲೆ ತಡರಾತ್ರಿ ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು (Police) ದಾಳಿ ಮಾಡಿದ್ದಾರೆ. ಪಬ್​ಗಳಲ್ಲಿ ಅನೈತಿಕ ಚಟುವಟಿಕೆಹಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆ ಪಬ್​​​ಗಳ ಮೇಲೆ ದಾಳಿ ಮಾಡಿ, ಮಹಿಳೆಯರು ಸೇರಿ 25ಕ್ಕೂ ಹೆಚ್ಚು ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆಫ್ರಿಕನ್​​​​ ಪ್ರಜೆಗಳನ್ನು ರಾತ್ರಿಯೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇನ್ನು ದಾಳಿ ದಾಳಿ ವೇಳೆ ಪರಾರಿಯಾಗಲು ಯತ್ನಿಸಿದ ಆಫ್ರಿಕನ್ ಪ್ರಜೆಗಳನ್ನು ಬೆನ್ನಟ್ಟಿ ಪೊಲೀಸರು ಹಿಡಿದಿದ್ದಾರೆ.

ಮದ್ಯದ ನಶೆಯಲ್ಲಿದ್ದ ಕೆಲ ಆಫ್ರಿಕನ್ ಯುವತಿಯರು ಪೊಲೀಸರ ವಾಗ್ವಾದಕ್ಕಿಳಿದ್ದರು. ಆಗ ಪೊಲೀಸರು ಯುವತಿಯರನ್ನು ಸಮಾಧಾನಗೊಳಿಸಿ ವಶಕ್ಕೆ ಪಡೆದಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಇಬ್ಬರು ಎಸಿಪಿ, ಆರು ಇನ್ಸ್​​ಪೆಕ್ಟರ್​​​, 10 ಪಿಎಸ್​ಐ, 20 ಮಹಿಳಾ ಸಿಬ್ಬಂದಿ, 20 ಪುರುಷ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ನೂತನ ಪೊಲೀಸ್​ ಆಯುಕ್ತರ ಖಡಕ್​ ಸೂಚನೆ: ಬೆಂಗಳೂರಿನಲ್ಲಿ ಬೆಳ್ಳಂಬೆಳ್ಳಗೆ ರೌಡಿ ಶೀಟರ್​ಗಳಿಗೆ ಶಾಕ್

ಇನ್ನು ವೈದ್ಯಕೀಯ ಪರೀಕ್ಷೆಯಲ್ಲಿ 6 ವಿದೇಶಿ ಪ್ರಜೆಗಳು ಮಾದಕ ದ್ರವ್ಯ ಸೇವಿಸಿರುವುದು ದೃಢವಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಪರಿಚಯಸ್ಥರ ಮೂಲಕ ಪಾಸ್​ಪೋರ್ಟ್ ಹಾಗೂ ವೀಸಾ ತರಿಸುವಂತೆ ಪೊಲೀಸರು  ಆರೋಪಿಗಳಿಗೆ ಹೇಳಿದ್ದಾರೆ.

ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

ಉಡುಪಿ: ಇತ್ತೀಚೆಗೆ ಡ್ರಗ್ಸ್ ​ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನ ತಡೆಯಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಇದಕ್ಕೆ ಬ್ರೇಕ್​ ಬಿಳುತ್ತಿಲ್ಲ. ಅದರಂತೆ ನೂತನ ಗೃಹ ಸಚಿವ ಜಿ.ಪರಮೇಶ್ವರ್ ಅವರು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಪಣ ತೊಟ್ಟಿದ್ದೇನೆ ಎಂದಿದ್ದರು.

ಅದರ ಬೆನ್ನಲ್ಲೇ ಇದೀಗ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ನಿಭೀಷ್(23), ಅಮಲ್ (22)ಬಂಧಿತ ವಿದ್ಯಾರ್ಥಿಗಳು. ಮತ್ತೋರ್ವ ವಿದ್ಯಾರ್ಥಿ ಬಂಧನದ ವೇಳೆ ತಲೆಮರೆಸಿಕೊಂಡಿದ್ದು, ಹುಡುಕಾಟ ಆರಂಭಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

Published On - 7:19 am, Sun, 18 June 23