AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಲಿಂಪಿಕ್ ಚಿನ್ನದ ಪದಕ ವಿಜೇತ ಸೋಮಯ್ಯ ಮನೆಯಲ್ಲಿ ಕಳವು ಮಾಡಿದ್ದ ಖದೀಮರು ಅರೆಸ್ಟ್: ಒಲಿಂಪಿಕ್ ಪದಕಗಳು ಸೇರಿ ಎಲ್ಲಾ ವಸ್ತುಗಳು ವಶಕ್ಕೆ

ಭಾರತದ ಪ್ರಸಿದ್ಧ ಮಾಜಿ ಹಾಕಿ ಪಟು ಎಂ.ಎಂ. ಸೋಮಯ್ಯ ಅವರ ಬೆಂಗಳೂರು ನಿವಾಸದಲ್ಲಿ ನಡೆದ ಒಲಿಂಪಿಕ್ ಪದಕಗಳು ಮತ್ತು ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಇಂದಿರಾನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಇಬ್ಬರು ಆರೋಪಿಗಳಾದ ಮಾಣಿಕ್ಯ ಮತ್ತು ಭರತ್‌ನನ್ನು ಬಂಧಿಸಲಾಗಿದ್ದು, ಕಳ್ಳತನವಾಗಿದ್ದ ಎಲ್ಲಾ ಪದಕಗಳು, ಚಿನ್ನಾಭರಣಗಳು ಹಾಗೂ ನಗದನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಸಿ.ಸಿ.ಟಿ.ವಿ ದೃಶ್ಯಗಳು ತನಿಖೆಗೆ ನೆರವಾಗಿವೆ.

ಒಲಿಂಪಿಕ್ ಚಿನ್ನದ ಪದಕ ವಿಜೇತ ಸೋಮಯ್ಯ ಮನೆಯಲ್ಲಿ ಕಳವು ಮಾಡಿದ್ದ ಖದೀಮರು ಅರೆಸ್ಟ್: ಒಲಿಂಪಿಕ್ ಪದಕಗಳು ಸೇರಿ ಎಲ್ಲಾ ವಸ್ತುಗಳು ವಶಕ್ಕೆ
ಸೋಮಯ್ಯ ಮನೆಯಲ್ಲಿ ಕಳ್ಳತನ, ಇಬ್ಬರು ಕಳ್ಳರ ಬಂಧನImage Credit source: Tv9 kannada
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 11, 2026 | 3:50 PM

Share

ಬೆಂಗಳೂರು, ನ.11: ಭಾರತದ ಪ್ರಸಿದ್ಧ ಮಾಜಿ ಹಾಕಿ ಪಟು ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಎಂ.ಎಂ. ಸೋಮಯ್ಯ ಅವರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೆಂಗಳೂರಿನ ಇಂದಿರಾನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಳುವಾಗಿದ್ದ ಒಲಿಂಪಿಕ್ ಪದಕಗಳು ಹಾಗೂ ಚಿನ್ನಾಭರಣಗಳನ್ನು ಪೊಲೀಸರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಾಣಿಕ್ಯ ಹಾಗೂ ಭರತ್ ಎಂದು ಗುರುತಿಸಲಾಗಿದೆ.

ಸೋಮಯ್ಯ ಅವರು ಬೆಂಗಳೂರಿನ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮ ನಿವಾಸಕ್ಕೆ ಬೀಗ ಹಾಕಿ, ಸ್ವಂತ ಕೆಲಸದ ನಿಮಿತ್ತ ಕೊಡಗು ಜಿಲ್ಲೆಯ ಮಡಿಕೇರಿಗೆ ತೆರಳಿದ್ದರು. ಮನೆ ಖಾಲಿ ಇರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮನೆಗೆ ಕನ್ನ ಹಾಕಿ ಹಲವು ಮೌಲ್ಯದ ವಸ್ತುಗಳು ದೋಚಿದ್ದರು. ಆರೋಪಿಗಳು ಮನೆಯಲ್ಲಿದ್ದ ಅತ್ಯಂತ ಮೌಲ್ಯಯುತವಾದ ಒಲಿಂಪಿಕ್ ಚಿನ್ನದ ಪದಕ, ಬೆಳ್ಳಿ ಪದಕ, 2 ಕಂಚಿನ ಪದಕಗಳು, ಬೆಲೆಬಾಳುವ ಚಿನ್ನಾಭರಣ ಹಾಗೂ 30,000 ರೂ. ನಗದನ್ನು ಕದ್ದು ಪರಾರಿಯಾಗಿದ್ದರು.

ಕಳ್ಳತನದ ಕುರಿತು ಸೋಮಯ್ಯ ಅವರು ದೂರು ನೀಡುತ್ತಿದ್ದಂತೆಯೇ ಸಕ್ರಿಯರಾದ ಇಂದಿರಾನಗರ ಠಾಣೆ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿಗಳಾದ ಮಾಣಿಕ್ಯ ಮತ್ತು ಭರತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದ ಪದಕಗಳು, ಚಿನ್ನಾಭರಣ ಹಾಗೂ ಕದ್ದಿದ್ದ ಹಣ ಸೇರಿದಂತೆ ಎಲ್ಲಾ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹಾಕಿ ದಿಗ್ಗಜ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ ಪದಕ ಕಳವು

ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ:

ಮನೆಯ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ, ಅಕ್ಟೋಬರ್ 28 ರಂದು ಮುಂಜಾನೆ 2:34 ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿದೆ. ಓರ್ವ ಆರೋಪಿ ನೀಲಿ ಶರ್ಟ್ ಹಾಗೂ ಮತ್ತೋರ್ವ ಕೆಂಪು ಶರ್ಟ್ ಧರಿಸಿ ಕಳವು ನಡೆಸಿರುವುದು ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. 1 ಚಿನ್ನದ ಪದಕ, 1 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕಗಳು, 10 ಗ್ರಾಂ ತೂಕದ ಚಿನ್ನದ ಬಳೆಗಳು. 144 ಗ್ರಾಂ ತೂಕದ ಎರಡು ಬೆಳ್ಳಿಯ ಕಪ್‌ಗಳು, 6 ಬೆಳ್ಳಿಯ ಚಮಚಗಳು ಹಾಗೂ 80 ಗ್ರಾಂ ತೂಕದ ಬೆಳ್ಳಿಯ ಬಿಂದಿಗೆ/ಪಾತ್ರೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಿಸಿಟಿವಿ ದೃಶ್ಯ ಆಧಾರದಲ್ಲಿ ಪೊಲೀಸರು ಪತ್ತೆ ಕಾರ್ಯಚರಣೆಯನ್ನು ನಡೆಸಿದರು. ಇದೀಗ ಇಬ್ಬರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು