ಕೊವಿಡ್ 2ನೇ ಅಲೆಯಲ್ಲಿ ಮಾಸ್ಕ್ ಹಾಕದವರಿಂದ ಬೆಂಗಳೂರು ನಗರದಲ್ಲಿ 4,54,69,677 ರೂ. ದಂಡ ವಸೂಲಿ, 43,206 ದ್ವಿಚಕ್ರ ವಾಹನ ಸೀಜ್

43,206 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದ್ದು, 2,326 ಮೂರು ಚಕ್ರದ ವಾಹನ ಮತ್ತು 3,083 ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 48,615 ವಾಹನಗಳನ್ನು ಬೆಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊವಿಡ್ 2ನೇ ಅಲೆಯಲ್ಲಿ ಮಾಸ್ಕ್ ಹಾಕದವರಿಂದ ಬೆಂಗಳೂರು ನಗರದಲ್ಲಿ 4,54,69,677 ರೂ. ದಂಡ ವಸೂಲಿ, 43,206 ದ್ವಿಚಕ್ರ ವಾಹನ ಸೀಜ್
ಪೊಲೀಸ್
Follow us
TV9 Web
| Updated By: guruganesh bhat

Updated on: Jun 22, 2021 | 3:38 PM

ಬೆಂಗಳೂರು: ಕೊವಿಡ್ ಎರಡನೇ ಅಲೆಯಲ್ಲಿ ಮಾಸ್ಕ್ ಹಾಕದ ಮತ್ತು ಸಾಮಾಜಿಕ ಅಂತರ ಕಾಪಾಡದ ಕಾರಣ ಬೆಂಗಳೂರು ನಗರ ಪೊಲೀಸರು ಒಟ್ಟು 1,86,549 ಪ್ರಕರಣ ದಾಖಲಿಸಿದ್ದಾರೆ. ಮಾಸ್ಕ್ ಹಾಕದವರಿಂದ ಈವರೆಗೆ ಒಟ್ಟು ₹ 4,54,69,677 ಯಷ್ಟು ಹಣವನ್ನು ದಂಡ ರೂಪದಲ್ಲಿ ಕಟ್ಟಿಸಿಕೊಳ್ಳಲಾಗಿದೆ. 43,206 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದ್ದು, 2,326 ಮೂರು ಚಕ್ರದ ವಾಹನ ಮತ್ತು 3,083 ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 48,615 ವಾಹನಗಳನ್ನು ಬೆಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎನ್​ಡಿಎಂಎ ಕಾಯ್ದೆಯಡಿ 722 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 473 ಜನರನ್ನು ಬಂಧಿಸಿದ್ದಾರೆ.

ನಿರ್ಗತಿಕರಿಗೆ ಬೆಡ್​ಶೀಟ್ ಹಂಚಿದ ಬೆಂಗಳೂರು ಪೊಲೀಸರು ಕೊರೊನಾ ದೆಸೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತ್ವ್ಯಸ್ತವಾಗಿದೆ. ಅದರಲ್ಲೂ ಮನೆ, ಮಠವಿಲ್ಲದೇ ನಿರ್ಗತಿಕರಾಗಿರುವವರ ಪರಿಸ್ಥಿತಿ ದಯನೀಯ ಹಂತಕ್ಕೆ ತಲುಪಿದೆ. ಯಾರೋ ಪುಣ್ಯಾತ್ಮರು ನೀಡುತ್ತಿದ್ದ ಬಿಡಿಗಾಸನ್ನು ನಂಬಿ ಬದುಕುತ್ತಿದ್ದವರು ಈಗ ಸಂಕಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಠಾಣೆ ಪೊಲೀಸರು ರಸ್ತೆಯಲ್ಲಿ ಚಳಿಯಿಂದ ನಡುಗುತ್ತಾ ಮಲಗಿದ್ದ ನಿರ್ಗತಿಕರಿಗೆ ಬೆಡ್​ಶೀಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಗರದಲ್ಲಿ ಮಳೆ ಸುರಿದ ನಂತರ ಚಳಿಯ ವಾತಾವರಣ ಆರಂಭವಾಗಿದ್ದು, ಪಾದಾಚಾರಿ ಮಾರ್ಗಗಳಲ್ಲಿ, ರಸ್ತೆಯ ಪಕ್ಕದಲ್ಲಿ ಅನೇಕ ಮಂದಿ ನಡುಗುತ್ತಾ ಮಲಗಿರುತ್ತಾರೆ. ಮನೆಯಿಲ್ಲದೇ ದಾರಿ ಬದಿ ಮಲಗಿ ಕಾಲ ಕಳೆಯುವ ಇಂತಹ ಜನರಿಗೆ ಸಹಾಯ ಹಸ್ತ ಚಾಚಿರುವ ಪೊಲೀಸರು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ ಪಾಟೀಲರ ಮೂಲಕ ಕೆ.ಆರ್.ಮಾರ್ಕೆಟ್, ಮೆಟ್ರೋ ಸ್ಟೇಶನ್ ಸಮೀಪವಿದ್ದ 100ಕ್ಕೂ ಹೆಚ್ಚು ನಿರ್ಗತಿಕರಿಗೆ ಬೆಡ್​ಶೀಟ್ ಹಂಚಿ ಸಹಾಯ ಮಾಡಿದ್ದಾರೆ.

ಅದರಲ್ಲೂ ಕೆಲವರಂತೂ ದೊಡ್ಡ ದೊಡ್ಡ ಪ್ಲಾಸ್ಟಿಕ್​ ಚೀಲಗೊಳಗೆ ದೇಹ ತೂರಿಸಿಕೊಂಡು ನಡುಗುತ್ತಾ ಮಲಗಿದ್ದರು. ಅಲ್ಲೇ ಅಕ್ಕಪಕ್ಕದಲ್ಲಿ ಬೀದಿ ನಾಯಿಗಳೂ ಅಲೆದಾಡಿಕೊಂಡಿದ್ದವು. ಅಂತಹವರನ್ನು ನೋಡಿದ ಪೊಲೀಸರು ಅವರ ಪರಿಸ್ಥಿತಿಗೆ ಮರುಗಿದ್ದಾರೆ. ತಾವೇ ಖುದ್ದಾಗಿ ಚೀಲಗಳನ್ನೆಲ್ಲಾ ತೆಗೆದು ಬೆಡ್​ಶೀಟ್ ಹೊದೆಸಿದ್ದಾರೆ. ಡಿಸಿಪಿ ಸಂಜೀವ ಪಾಟೀಲ, ಇನ್ಸ್​ಪೆಕ್ಟರ್ ಕುಮಾರಸ್ವಾಮಿ ಹಾಗೂ ಎಲ್ಲಾ ಸಿಬ್ಬಂದಿ ಈ ಕಾರ್ಯದಲ್ಲಿ ಕೈಜೋಡಿಸಿದ್ದು ಜನರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಂತಹಂತವಾಗಿ ಶಾಲೆ ಆರಂಭಿಸುವುದು ಸೂಕ್ತ; ಆದರೆ, ಎಚ್ಚರಿಕೆ ತಪ್ಪಿದರೆ ಅಪಾಯವೂ ನಿಶ್ಚಿತ: ಡಾ.ದೇವಿಪ್ರಸಾದ್ ಶೆಟ್ಟಿ ಮಧ್ಯಂತರ ವರದಿ

Bed Blocking Scam: ಬೆಡ್ ಬ್ಲಾಕಿಂಗ್ ದಂದೆ: ಸ್ವಪಕ್ಷೀಯರ ಕೈವಾಡದ ಬಗ್ಗೆ ಬಿಜೆಪಿಯ ಹಿರಿಯ ನಾಯಕರಿಗೆ ಶಾಸಕ ಸತೀಶ್ ರೆಡ್ಡಿ ದೂರು

(Bengaluru Police seized 43206 two wheeler 4 54696 77 did not wear mask fine in Covid 2nd wave)