ಗುಂಡಿಯಿಂದಾಗಿ ಕಾರು ರಿಪೇರಿಗೆ 23 ಸಾವಿರ ರೂ ಖರ್ಚು, ಗುಂಡಿ ಮುಚ್ಚಲು ನಾನು ಹಣ ಕೊಡ್ತೇನೆ ಎಂದ ನಿವಾಸಿ

ಬೆಂಗಳೂರಿನ ರಸ್ತೆ ಗುಂಡಿಗಳಿಂದ ಕಾರು ಹಾಳಾಗಿ 23,000 ರೂ. ರಿಪೇರಿ ಖರ್ಚು ಬಂದಿರುವ ಬಗ್ಗೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಹೊರ ವರ್ತುಲ ರಸ್ತೆ ಮತ್ತು ವರ್ತೂರು ರಸ್ತೆಯಲ್ಲಿನ ಗುಂಡಿಗಳಿಂದ ಕಾರಿನ ಸಸ್ಪೆನ್ಷನ್ ಹಾಳಾಗಿದೆ ಎಂದು ನಿವಾಸಿಯೊಬ್ಬರು ಹಂಚಿಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ಕಳಪೆ ರಸ್ತೆಗಳ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಹೇಳುತ್ತದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಗುಂಡಿಯಿಂದಾಗಿ ಕಾರು ರಿಪೇರಿಗೆ 23 ಸಾವಿರ ರೂ ಖರ್ಚು, ಗುಂಡಿ ಮುಚ್ಚಲು ನಾನು ಹಣ ಕೊಡ್ತೇನೆ ಎಂದ ನಿವಾಸಿ
ಸಾಂದರ್ಭಿಕ ಚಿತ್ರ

Updated on: Nov 06, 2025 | 12:08 PM

ಬೆಂಗಳೂರು, ನ.6: ಬೆಂಗಳೂರಿನ ರಸ್ತೆ (Bengaluru Potholes) ಬಗ್ಗೆ ದಿನಕ್ಕೊಂದು ಪೋಸ್ಟ್ ವೈರಲ್​ ಆಗುತ್ತ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್​​​ ಭಾರೀ ವೈರಲ್​​​ ಆಗಿದೆ. ನಗರದ ನಿವಾಸಿಯೊಬ್ಬರು ಬೆಂಗಳೂರಿನ ರಸ್ತೆ ಗುಂಡಿಗಳಿಂದ ತಮ್ಮ ಕಾರನ್ನು ರಿಪೇರಿ ಮಾಡಲು 23 ಸಾವಿರ ರೂ. ಖರ್ಚಾಗಿದೆ ಎಂದು ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಸ್ಟೋರಿ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಕಾರಣವಾಗಿದೆ. ಕಾರು ಸರ್ವಿಸ್ ಮಾಡಿದ ಕೇವಲ ಒಂದು ವಾರದ ನಂತರ ಗುಂಡಿಗಳಿಂದ ಮತ್ತೆ ಕಾರು ರಿಪೇರಿಗೆ ಬಂದಿದೆ. ಕಾರು ರಿಪೇರಿ ಮಾಡಲು 23 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ .

ಕಾರಿನ ಸಸ್ಪೆನ್ಷನ್ ಅನ್ನು ಬದಲಾಯಿಸಲು ಹಾಗೂ ಕಾರು ಕಂಡೀಷನ್​​​ಗೆ ಬರಲು 23 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. “ಪ್ರತಿ ದಿನ ಔಟರ್ ರಿಂಗ್ ರಸ್ತೆ ಮತ್ತು ವರ್ತೂರು ರಸ್ತೆಯಲ್ಲಿ ಪ್ರಯಾಣಿಸುತ್ತೇನೆ. ಅಲ್ಲಿರುವ ಗುಂಡಿಗಳಿಂದ ಕಾರು ಸಂಪೂರ್ಣ ಹಾಳಾಗಿದೆ. ಇದರ ಜತೆಗೆ ಎಕ್ಸಾಸ್ಟ್ ಪೈಪ್​​ಗೂ ಹಾನಿಯಾಗಿದೆ. ಇದಕ್ಕೆ 5 ಸಾವಿರ ರೂ. ಖರ್ಚು ಮಾಡಿದ್ದೇನೆ. ಬೇಕಾದರೆ ರಸ್ತೆ ರಿಪೇರಿ ಮಾಡಲು ಹಣ ನೀಡುತ್ತೇನೆ. ಆದರೆ ಯಾವುದೇ ತೆರಿಗೆ ಕಟ್ಟುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

Bangalore roads and my car 🙂
byu/bentneckboi inbangalore


ಈ ಪೋಸ್ಟ್​​​ಗೆ ಸೋಶಿಯಲ್​​ ಮೀಡಿಯಾದಲ್ಲಿ ಬಳಕೆದಾರರು ಕಮೆಂಟ್​​ ಮಾಡಿದ್ದಾರೆ. ಪ್ರತಿ ದಿನ ಇಂಥಹ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತ ಇರುತ್ತದೆ. ಯಾರೂ ಇದರ ಬಗ್ಗೆ ಗಮನ ನೀಡುವುದಿಲ್ಲ. ಇದು ಬೆಂಗಳೂರಿಗರು ಅನುಭವಿಸುವ ಪ್ರತಿದಿನದ ಸಮಸ್ಯೆಯಾಗಿದೆ ಎಂದು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ವರ್ತೂರ್‌ ರಸ್ತೆ ತುಂಬಾ ಕೆಟ್ಟದಾಗಿದೆ. ರಸ್ತೆಗಳು ಅಥವಾ ಮೂಲಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಐಷಾರಾಮಿ ಯೋಜನೆಗಳು ಏಕೆ ಬರುತ್ತಿವೆ? ಎಂದು ಕಮೆಂಟ್​​ ಮಾಡಿದ್ದಾರೆ. ಬೆಂಗಳೂರು ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಜಿಲ್ಲೆ ಅದ್ರೂ ಇಲ್ಲಿನ ರಸ್ತೆಗಳು ಇಷ್ಟೊಂದು ಕಳಪೆಯಾಗಿದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಉದ್ಯಮಿಯೊಬ್ಬರು ಕೂಡ ಈ ಪೋಸ್ಟ್​​ಗೆ ಕಮೆಂಟ್​​ ಮಾಡಿದ್ದಾರೆ. ನಾವು ಹೈದರಬಾದಿನಿಂದ ಬೆಂಗಳೂರಿಗೆ ಬಂದ ಒಂದು ವರ್ಷದಲ್ಲಿ ಕಾರಿನ ಸಸ್ಪೆನ್ಷನ್ ಮತ್ತು ಎ-ಆರ್ಮ್ ಹಾನಿಗೊಳಗಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:21 am, Thu, 6 November 25