ವರ್ತೂರು ಗುಂಡಿಯಿಂದ ಪತ್ನಿ ಅನುಭವಿಸಿದ ಸಂಕಷ್ಟದ ಬಗ್ಗೆ ವಿವರಿಸಿದ ಪತಿ

ಬೆಂಗಳೂರಿನ ರಸ್ತೆಗಳ ದುಸ್ಥಿತಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವರ್ತೂರು ರಸ್ತೆಯಲ್ಲಿ ಮಳೆಯಿಂದ ತುಂಬಿದ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ವೈರಲ್ ಆಗಿದೆ. ಕಳಪೆ ರಸ್ತೆಗಳಿಂದ ಜೀವಕ್ಕೆ ಅಪಾಯ, ಸಂಚಾರ ಅಸ್ತವ್ಯಸ್ತ ಬಗ್ಗೆ ಜನ ಸಾಮಾನ್ಯರು ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ವರ್ತೂರು ಗುಂಡಿಯಿಂದ ಪತ್ನಿ ಅನುಭವಿಸಿದ ಸಂಕಷ್ಟದ ಬಗ್ಗೆ ವಿವರಿಸಿದ ಪತಿ
ಸಾಂದರ್ಭಿಕ ಚಿತ್ರ

Updated on: Oct 15, 2025 | 5:59 PM

ಬೆಂಗಳೂರಿನ ರಸ್ತೆಗಳ (Bengaluru road) ಸಮಸ್ಯೆ ಬಗ್ಗೆ ದಿನಕ್ಕೊಂದು ಪೋಸ್ಟ್​ ವೈರಲ್​ ಆಗುತ್ತಲೇ ಇದೆ. ಜನ ಸಾಮಾನ್ಯರಿಂದ ಹಿಡಿದು, ಉದ್ಯಮಿಗಳವರೆಗೂ ಬೆಂಗಳೂರಿನ ರಸ್ತೆ ಸಮಸ್ಯೆ ಬಗ್ಗೆ ತಮ್ಮ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳತ್ತಿದ್ದಾರೆ. ಇದೀಗ ಮತ್ತೊಂದು ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬೆಂಗಳೂರಿನ ನಿವಾಸಿಯೊಬ್ಬರು ರೆಡ್ಡಿಟ್​​​ನಲ್ಲಿ ಈ ಅವ್ಯವಸ್ಥೆ ರಸ್ತೆಯಿಂದ ತನ್ನ ಪತ್ನಿ ಪ್ರಾಣಾಪಯದಿಂದ ಬದುಕಿ ಬಂದ ಬಗ್ಗೆ ಹಂಚಿಕೊಂಡಿದ್ದಾರೆ. ವರ್ತೂರು ಪೊಲೀಸ್ ಠಾಣೆ ಬಳಿಯ ರಸ್ತೆ ಮಳೆಯಿಂದ ನದಿಯಂತಾಗಿದೆ. ಸಾಮಾನ್ಯ ದಿನದಲ್ಲಿಯೂ ಸಹ ಈ ರಸ್ತೆಯಲ್ಲಿ ಪ್ರಯಾಣಿಸಲು ಸುಮಾರು 40 ನಿಮಿಷಗಳು ಬೇಕಾಗುತ್ತದೆ, ಆದರೆ ನಿನ್ನೆಯ ಮಳೆಯಿಂದ ಹೊರ ವರ್ತುಲ ರಸ್ತೆಯ ಸಂಚಾರ ಅವ್ಯವಸ್ಥೆ ಬಗ್ಗೆ ವಿವರಿಸಿದ್ದಾರೆ.

ಈ ರಸ್ತೆಯಿಂದ ತನ್ನ ಪತ್ನಿ ಅನುಭವಿಸಿದ ಸಂಕಷ್ಟದ ಬಗ್ಗೆ ಈ ಪೋಸ್ಟ್​​​ನಲ್ಲಿ ಹೇಳಿಕೊಂಡಿದ್ದಾರೆ. ಅವರ ಪತ್ನಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಈ ರಸ್ತೆಯ ಟ್ರಾಫಿಕ್​​ನಲ್ಲಿ ಸಿಲುಕಿ ಒದ್ದಾಡಿರುವ ಬಗ್ಗೆ ವಿವರಿಸಿದ್ದಾರೆ. “ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನನ್ನ ಪತ್ನಿ ಈ ರಸ್ತೆಯಲ್ಲಿ ಗಾಡಿ ಓಡಿಸಿಕೊಂಡು ಬಂದಿದ್ದಾಳೆ. ಮಳೆ ಬರುತ್ತಿದ್ದ ಕಾರಣ ಈ ರಸ್ತೆ ನೀರಿನಿಂದ ತುಂಬಿತ್ತು. ರಸ್ತೆಯಲ್ಲಿ ಗುಂಡಿ ಇರುವುದು ಗೊತ್ತಾಗದೆ. ಗಾಡಿ ರಸ್ತೆಯಲ್ಲಿದ್ದ ಆಳವಾದ ಗುಂಡಿಗೆ ಬಿದ್ದಿದೆ. ಈ ವೇಳೆ ಆಕೆಗೆ ನಿಯಂತ್ರಣ ಸಿಕ್ಕಿಲ್ಲ, ಗಾಡಿಯ ಜತೆ ಆಕೆಯು ಗುಂಡಿಗೆ ಬಿದ್ದಿದ್ದಾಳೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬಸ್​​​ ಡಿಕ್ಕಿ ಹೊಡೆಯುವುದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ” ಎಂದು ಹೇಳಿದ್ದಾರೆ.

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

 

Varthur Roads: Every time it rains, I pray for my family’s safety.
byu/vijayvithal inbangalore


ಈ ಬಗ್ಗೆ ವಿವರಿಸುತ್ತ ಅವರು, ಆಕೆ ಶಾಕ್​​ನಿಂದ ಹೊರ ಬರಲು ಒಂದು ದಿನ ಕೆಲಸಕ್ಕೆ ರಜೆ ಹಾಕಬೇಕಾಗಿ ಬಂತು. ಈ ಕಳಪೆ ರಸ್ತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ದೂರುಗಳು ಪೋಸ್ಟ್ ಆಗುತ್ತಲೇ ಇರುತ್ತದೆ. ಅದರೂ ಈ ಬಗ್ಗೆ ಯಾರು ಗಮನ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್ ಬಗ್ಗೆ​​ ಅನೇಕ ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ಕೆಲಸ ಮತ್ತು ಶೈಕ್ಷಣಿಕ ಬದ್ಧತೆಗಳಿಂದಾಗಿ ನಾವು ಬೆಂಗಳೂರಿನಲ್ಲಿಯೇ ಇರುವ ಇತರರಂತೆ ಈ ಬಗ್ಗೆ ದೂರು ಕೂಡ ನೀಡಿದ್ದೇನೆ. ಆದರೆ ಈ ದೂರು ಯಾವುದಕ್ಕೂ ಪ್ರಯೋಜನ ಇಲ್ಲ ಎಂಬುದು ಮನವರಿಕೆಯಾಗಿದೆ.

ಇದನ್ನೂ ಓದಿ: ಆಂಧ್ರ ಡೇಟಾ ಸೆಂಟರ್ ತೆರೆಯುತ್ತಿದೆ: ಆದ್ರೆ ನಾವು ರಸ್ತೆಗುಂಡಿ ಮುಚ್ಚಲು ಕಷ್ಟಪಡುತ್ತಿದ್ದೇವೆ; ಮೋಹನ್ ದಾಸ್ ಪೈ

ಇನ್ನು ಪೋಸ್ಟ್ ಬಗ್ಗೆ​​​ ಬಳಕೆದಾರರು ಹೀಗೆ ಕಮೆಂಟ್​ ಮಾಡಿದ್ದಾರೆ. ನಾವು ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸುವ ಸಮಯ ಬಂದಿದೆ. ORR ನಿಂದ ವೈಟ್‌ಫೀಲ್ಡ್‌ವರೆಗಿನ ರಸ್ತೆಗಳ ಬಗ್ಗೆ ಅವ್ಯವಸ್ಥೆಯನ್ನು ನೋಡಿದ್ರೆ ಗೊತ್ತಾಗುತ್ತದೆ. ನಮ್ಮನ್ನು ಎಷ್ಟು ನಿರ್ಲಕ್ಷಿಸಲಾಗಿದೆ ಎಂದು ಅದಕ್ಕಾಗಿ ನಾನು ಮತದಾನ ಮಾಡಿ ಪಾಠ ಕಲಿಯುತ್ತಿದ್ದೇನೆ. ಖಂಡಿತ ಮುಂದಿನ ಸಲ ಈ ತಪ್ಪು ಮಾಡುವುದಿಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ವರ್ತೂರಿನಲ್ಲೂ ಅದೇ ಸಮಸ್ಯೆ, ನಗರದ ಈ ಭಾಗಕ್ಕೆ ಬಂದು ವಾಸಿಸುವ ಕಷ್ಟ ಯಾರಿಗೂ ಬೇಡ, ಬೆಂಗಳೂರ ಬಂಗಾರದ ಹೆಬ್ಬಾಗಿಲು ಅಲ್ಲ ಸಾವಿನ ಬಾಗಿಲು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ