AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಡೇಟಾ ಸೆಂಟರ್ ತೆರೆಯುತ್ತಿದೆ: ಆದ್ರೆ ನಾವು ರಸ್ತೆಗುಂಡಿ ಮುಚ್ಚಲು ಕಷ್ಟಪಡುತ್ತಿದ್ದೇವೆ; ಮೋಹನ್ ದಾಸ್ ಪೈ

ಬೆಂಗಳೂರಲ್ಲಿ ರಸ್ತೆ ಗುಂಡಿಗಳ ವಿಚಾರ ಮತ್ತೆ ಭಾರಿ ಸದ್ದು ಮಾಡುತ್ತಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಪೋಸ್ಟ್ ಬೆನ್ನಲ್ಲೇ ಉದ್ಯಮಿ ಮೋಹನ್ ದಾಸ್ ಪೈ ಕೂಡ ಟ್ವೀಟ್​ ಮಾಡಿದ್ದು, ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಾಗಾದರೆ ಮೋಹನ್ ದಾಸ್ ಪೈ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

ಆಂಧ್ರ ಡೇಟಾ ಸೆಂಟರ್ ತೆರೆಯುತ್ತಿದೆ: ಆದ್ರೆ ನಾವು ರಸ್ತೆಗುಂಡಿ ಮುಚ್ಚಲು ಕಷ್ಟಪಡುತ್ತಿದ್ದೇವೆ; ಮೋಹನ್ ದಾಸ್ ಪೈ
ಉದ್ಯಮಿ ಮೋಹನ್ ದಾಸ್ ಪೈ
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 15, 2025 | 4:11 PM

Share

ಬೆಂಗಳೂರು, ಅಕ್ಟೋಬರ್​​ 15: ನಗರದ ರಸ್ತೆ ಗುಂಡಿಗಳು (Potholes) ಬೆಂಗಳೂರಿಗರ ನಿದ್ದೆಗೆಡಿಸಿವೆ. ಬೆಂಗಳೂರಿಗರು ಮಾತ್ರ ಅಲ್ಲ ವಿದೇಶಿ ಉದ್ಯಮಿಗಳು ಕೂಡ ಪಾತ್‌ಹೋಲ್‌ ಬಗ್ಗೆ ಮಾತಾಡುವಂತಾಗಿದೆ. ಈ ಬಗ್ಗೆ ಉದ್ಯಮಿ ಕಿರಣ್‌ ಮಜುಂದಾರ್‌ ಮಾಡಿದ್ದ ಟ್ವೀಟ್​​ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೆಲ್ಲದರ ಬೆನ್ನಲ್ಲೇ ಇದೀಗ ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಕೂಡ ಟ್ವೀಟ್​​ ಮಾಡಿದ್ದು, ನಮ್ಮ ನೆರೆಯ ಆಂಧ್ರಪ್ರದೇಶ ಡೇಟಾ ಸೆಂಟರ್ ತೆರೆಯುತ್ತಿದೆ. ಆದರೆ ನಾವಿನ್ನೂ ರಸ್ತೆಗುಂಡಿ ಮುಚ್ಚಲು ಕಷ್ಟಪಡುತ್ತಿದ್ದೇವೆ ಎಂದು ಸರ್ಕಾರಕ್ಕೆ ತಿವಿದಿದ್ದಾರೆ.

ಸರ್ಕಾರದ ವಿರುದ್ಧ ಪೈ ಕಿಡಿ

ಬೆಂಗಳೂರಲ್ಲಿ ಗುಂಡಿಗಳೇ ತುಂಬಿದ ಕೆಟ್ಟ ರಸ್ತೆಯಿಂದ ಒದ್ದಾಡುತ್ತಿದ್ದೇವೆ. ಆದರೆ ನಮ್ಮ ನೆರೆಯ ಆಂಧ್ರಪ್ರದೇಶ ಗೂಗಲ್​ನ 1,30,000 ಕೋಟಿ ವೆಚ್ಚದಲ್ಲಿ ಡೇಟಾ ಸೆಂಟರ್ ತೆರೆಯುತ್ತಿದೆ. ನಾವಿನ್ನೂ ರಸ್ತೆಗುಂಡಿ ಮುಚ್ಚಲು ಕಷ್ಟಪಡುತ್ತಿದ್ದೇವೆ ಸಾಮಾಜಿಕ ಜಾಲತಾಣದಲ್ಲಿ ಉದ್ಯಮಿ ಮೋಹನ್ ದಾಸ್ ಪೈ ಪೋಸ್ಟ್ ಮಾಡಿದ್ದಾರೆ.

ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್

ಇದೇ ಗುಂಡಿ ವಿಚಾರವಾಗಿ ಇತ್ತೀಚೆಗೆ ಬ್ಲ್ಯಾಕ್‌ಬಕ್‌ ಕಂಪನಿ ಬೆಂಗಳೂರನ್ನೇ ತೊರೆಯೋ ಬಗ್ಗೆ ಮಾತನಾಡಿತ್ತು. ಇದೀಗ ಸಿಲಿಕಾನ್‌ ಸಿಟಿಯ ಹದಗೆಟ್ಟ ರಸ್ತೆಗಳ ಬಗ್ಗೆ ವಿದೇಶಿಗರು ಮಾತನಾಡಿರೋದು ವಾಕ್ಸ್‌ಸಮರಕ್ಕೆ, ಟ್ವೀಟ್‌ ಸಮರಕ್ಕೆ ಸಾಕ್ಷಿ ಆಗಿದೆ. ಗುಂಡಿಗಳ ಬಗ್ಗೆ, ಕಸದ ಸಮಸ್ಯೆ ಬಗ್ಗೆ ಚೀನಾ ಉದ್ಯಮಿ ಕೂಡ ಮಾತನಾಡಿರೋದನ್ನ ಬಯೋಕಾಲ್‌ ಮುಖ್ಯಸ್ಥೆ ಕಿರಣ್‌ ಮಜಂದಾರ್‌ ರಿವೀಲ್‌ ಮಾಡಿದ್ದರು. ಚೀನಾ ಉದ್ಯಮಿ ಮಾತನ್ನ ಟ್ವೀಟ್‌ನಲ್ಲೇ ಹಂಚಿಕೊಂಡಿದ್ದರು.

ಇದನ್ನೂ ಓದಿ: ರಸ್ತೆ ಗುಂಡಿ ಸಮಸ್ಯೆ: ನಾವು ತೆರಿಗೆ ಕಟ್ಟಲ್ಲ ಎಂದು ಸಿಎಂ, ಡಿಸಿಎಂಗೆ ಪತ್ರ ಬರೆದ ಐಟಿ-ಬಿಟಿ ಮಂದಿ

ಇದಕ್ಕೆ ಟ್ವೀಟ್‌ ಮೂಲಕವೇ ಡಿಸಿಎಂ ಡಿಕೆ ಶಿವಕುಮಾರ್​ ತಿರುಗೇಟು ನೀಡಿದ್ದರು. ರಸ್ತೆ ಅಭಿವೃದ್ಧಿಗಾಗಿಯೇ 1,100 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ. ಈಗಾಗಲೇ 5 ಸಾವಿರ ಗುಂಡಿ ಮುಚ್ಚಿದ್ದು, ಇನ್ನೂ ಐದು ಸಾವಿರ ಗುಂಡಿ ಬಾಕಿ ಇವೆ ಎಂದು ಹೇಳಿದ್ದರು.

ಸರ್ಕಾರಕ್ಕೆ ಪತ್ರ

ಇನ್ನು ರಸ್ತೆ ಗುಂಡಿಗಳಿಂದ ಬೆಸತ್ತ ಐಟಿ-ಬಿಟಿ ನಿವಾಸಿಗಳು ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ, ನಮ್ಮಿಂದ ತೆರಿಗೆ ಕೇಳಬೇಡಿ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​ಗೆ ವರ್ತೂರು, ಪಣತ್ತೂರು ಭಾಗದ ನಿವಾಸಿಗಳು ಪತ್ರ ಬರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.