
ಬೆಂಗಳೂರು, ಸೆಪ್ಟೆಂಬರ್ 17: ರಾಜಾನುಕುಂಟೆ ಉಪಕೇಂದ್ರ ಮತ್ತು ಸಾರಕ್ಕಿ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಿನ್ನಲೆ ಸೆ.17 ಮತ್ತು 18 ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ. ಬುಧವಾರದಂದು ಬೆಳಿಗ್ಗೆ 10 ರಿಂದ 4 ಮತ್ತು ಗುರುವಾರದಂದು 10 ರಿಂದ 5 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ (Bescom) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಹಾಗಾದರೆ ಬೆಂಗಳೂರಿನ ಯಾವೆಲ್ಲಾ ನಗರದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ತಿಳಿಯಲು ಮುಂದೆ ಓದಿ.
ಸಿಂಗ ನಾಯಕನಹಳ್ಳಿ, ಹೊನ್ನೇನಹಳ್ಳಿ, ಅಡ್ಡವಿಶ್ವನಾಥಪುರ, ರಾಜಾನು ಕುಂಟೆ, ಶ್ರೀರಾಮನಹಳ್ಳಿ, ಮಾರಸಂದ್ರ, ಹನಿಯೂರು, ನೆಲಕುಂಟೆ, ಕೆಎಂಎಫ್, ಚೆಲ್ಲ ಹಳ್ಳಿ, ಬೂದಮನಹಳ್ಳಿ, ಬೈರಾಪುರ, ಕಾಕೋಲು, ದಿಟ್ಟೂರು, ಸೊನ್ನೇನಹಳ್ಳಿ ಸೇರಿದಂತೆ ಸೆಂಚುರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
Power outage in the Bescom area
September 18, 2025#Bescom #poweroutage pic.twitter.com/L93aeNL5u0— Namma BESCOM | ನಮ್ಮ ಬೆಸ್ಕಾಂ (@NammaBESCOM) September 16, 2025
ಪೈಪ್ ಲೈನ್ ರೋಡ್, ಶಾಕಂಬರಿ ನಗರ, ರಾಘವೇಂದ್ರ ಸ್ವಾಮಿ ಮಠ, ಜೆ.ಪಿ ನಗರ ಮೊದಲನೇ ಹಂತ 14ನೇ ಅಡ್ಡ ರಸ್ತೆ, ಪುಟ್ಟೇನಹಳ್ಳಿ, ಸಲಾರ್ಪುರಿಯಾ ಅಪಾರ್ಟ್ ಮೆಂಟ್ ನಾಗಜುನ ಅಪಾರ್ಟ್‌ಮೆಂಟ್, ಐಟಿಐ ಲೇಔಟ್, ಜಯನಗರ 8 5. 7 ನೇ ಬ್ಲಾಕ್, ಎಸ್. ಬಿ. ಐ ಕಾಲೋನಿ ಮತ್ತು ಆರ್.ವಿ. ಡೆಂಟಲ್ ಕಾಲೇಜ್ ಸುತ್ತಮುತ್ತಲ ಪ್ರದೇಶ.
ಇದನ್ನೂ ಓದಿ: ಕರ್ನಾಟಕದ ಜನತೆಗೆ ಮತ್ತೆ ಕರೆಂಟ್ ಶಾಕ್: ವಿದ್ಯುತ್ ದರ ಏರಿಕೆಗೆ ಪ್ಲ್ಯಾನ್, ಎಷ್ಟು ಗೊತ್ತಾ?
ಅದೇ ರೀತಿಯಾಗಿ ಎಲ್‌ಐಸಿ ಕಚೇರಿ ಹಿಂಬಾಗ, 24ನೇ ಮೇನ್, ಕೆ ಆರ್ ಲೇಔಟ್, ಎಲ್‌ಐಸಿ ಕಾಲೋನಿ, ಜಿ.ಪಿ.ನಗರ 5ನೇ ಹಂತ, ವೆಂಕಟಾದ್ರಿ ಲೇಔಟ್, ಜೆ.ಪಿ.ನಗರ 6ನೇ ಹಂತ, 15 ನೇ ಕ್ರಾಸ್, ಸಾಯಿ ನರ್ಸರಿ ರಸ್ತೆ, 16 ಮತ್ತು 12 ನೇ ಕ್ರಾಸ್, ಬನ್ನೇರಘಟ್ಟ ರೋಡ್, ಆದರ್ಶ ರೆಸಿಡೆನ್ಸಿ ಅಪಾರ್ಟ್ ಮೆಂಟ್, ಕಲ್ಯಾಣಿ ಮ್ಯಾಗ್ನಮ್ ಅಪಾರ್ಟ್ಮೆಂಟ್, ಡಾಲರ್ಸ್ ಲೇಔಟ್, ಕಲ್ಯಾಣಿ ಕೃಷ್ಣ ಮ್ಯಾಗ್ನಮ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಹಾಗಾಗಿ ಸಾರ್ವಜನಿಕರು ಇದಕ್ಕೆ ಅನುಗುಣವಾಗಿ ತಮ್ಮ ಕೆಲಸ, ಕಾರ್ಯಗಳನ್ನು ನಿರ್ವಹಿಸುವಂತೆ ಮತ್ತು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:38 am, Wed, 17 September 25