ಬೆಂಗಳೂರು, ಜೂನ್ 11: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕೆಲವು ಪ್ರದೇಶಗಳಲ್ಲಿ ಪವರ್ ಕಟ್ (Power Cut) ಇರಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ದುರಸ್ತಿ ಕಾರ್ಯ, ನಿರ್ವಹಣೆ ಮತ್ತಿತರ ಕಾರ್ಯಗಳಿಗಾಗಿ ಪವರ್ ಕಟ್ ಮಾಡಲಾಗುತ್ತಿದೆ ಎಂದು ಬೆಸ್ಕಾಂ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತಿಳಿಸಿವೆ.
ಜೂನ್ 10 ರಿಂದಲೇ ನಿರ್ವಹಣೆ, ದುರಸ್ತಿ ಕಾರ್ಯ ಆರಂಭಿಸಲಾಗಿದ್ದು, ಮೊದಲ ದಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಿದೆ. ಜೂನ್ 8-9 ರಂದು ಕೂಡ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಿತ್ತು. ಜೂನ್ 10 ರ ಅದೇ ಸಮಯದಲ್ಲಿ ಸಿ ಕುಪ್ಪೆ, ತಾವರೆಕೆರೆ, ಹಕ್ಕಿ ಮಾರಿಪಾಳ್ಯ, ಹಂಗರಹಳ್ಳಿ, ಎಂಎಚ್ ಪಾಳ್ಯ, ಟಿ.ಬೊಮ್ಮೇನಹಳ್ಳಿ, ನೀಲಸಂದ್ರ ಮತ್ತು ಆರ್ ಬ್ಯಾಡರಹಳ್ಳಿಯಲ್ಲಿ ವಿದ್ಯುತ್ ಕಡಿತ ಮಾಡಲಾಗಿತ್ತು.
ಇಂದು ಮತ್ತು ನಾಳೆ (ಜೂನ್ 11-12 ರಂದು) ವಿದ್ಯುತ್ ಕಡಿತದ ಸಮಯವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಇರುತ್ತದೆ.
ಜೂನ್ 11 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 3): ಆಡುಗೋಡಿ, ಸಾಲರ್ಪುರಿಯ ಟವರ್, ಚಿಕ್ಕ ಆಡುಗೋಡಿ, ನಂಜಪ್ಪ ಲೇಔಟ್, ಚಿಕ್ಕ ಲಕ್ಷ್ಮಯ್ಯ ಲೇಔಟ್, ವಿಲ್ಸನ್ ಗಾರ್ಡನ್, ಲಕ್ಕಸಂದ್ರ ಮತ್ತು ಲಾಲ್ಜಿನಗರ.
ಇದನ್ನೂ ಓದಿ: ಸಂಚಾರ ನಿಲ್ಲಿಸಿದ ಇಂದಿರಾ ಮೊಬೈಲ್ ಕ್ಯಾಂಟೀನ್ಗಳು; ಗ್ಯಾರಂಟಿ ಗಮನದಲ್ಲಿ ಸಿಎಂ ಕನಸಿನ ಯೋಜನೆಗೆ ನಿರ್ಲಕ್ಷ್ಯ
ಜೂನ್ 12 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 3): ಶ್ರೀನಗರ, ಹೊಸಕೆರೆಹಳ್ಳಿ, ವೀರಭದ್ರನಗರ, ನ್ಯೂ ಟಿಂಬರ್ಯಾರ್ಡ್ (NTY) ಲೇಔಟ್, ತ್ಯಾಗರಾಜನಗರ, ಬಿಎಸ್ಕೆ III ಹಂತ, ಕತ್ರಿಗುಪ್ಪೆ, ಗಿರಿನಗರ 4 ನೇ ಹಂತ, ವಿಲ್ಸನ್ ಗಾರ್ಡನ್, ಜೆಸಿ ರಸ್ತೆ, ಶಾಂತಿನಗರ, ರಿಚ್ಮಂಡ್ ವೃತ್ತ, ರೆಸಿಡೆನ್ಸಿ ರಸ್ತೆ ರಸ್ತೆ, ಸಂಪಂಗಿರಾಮನಗರ, ಕೆಎಚ್ ರಸ್ತೆ, ಸುಬ್ಬಯ್ಯ ವೃತ್ತ ಮತ್ತು ಸುಧಾಮನಗರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ