AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Press Club: ಜೀವಮಾನ ಸಾಧನೆಗಾಗಿ ಟಿವಿ9 ಹಿರಿಯ ವರದಿಗಾರ ಕಿರಣ್​ಗೆ ಪ್ರೆಸ್​​ ಕ್ಲಬ್ ಪ್ರಶಸ್ತಿ ಪ್ರದಾನ

ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಪರ್ತಕರ್ತರಿಗೆ ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಟಿವಿ9ನ ಕ್ರೈಂ ವಿಭಾಗದ ಹಿರಿಯ ವರದಿಗಾರ ಹೆಚ್​​.ವಿ.ಕಿರಣ್ ಅವರು ಸಿಎಂ ಸಿದ್ದರಾಮಯ್ಯರವರ ಕೈಯಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದರು.

Bengaluru Press Club: ಜೀವಮಾನ ಸಾಧನೆಗಾಗಿ ಟಿವಿ9 ಹಿರಿಯ ವರದಿಗಾರ ಕಿರಣ್​ಗೆ ಪ್ರೆಸ್​​ ಕ್ಲಬ್ ಪ್ರಶಸ್ತಿ ಪ್ರದಾನ
ಪ್ರೆಸ್​ಕ್ಲಬ್
ಪ್ರಸನ್ನ ಗಾಂವ್ಕರ್​
| Edited By: ಆಯೇಷಾ ಬಾನು|

Updated on:Dec 31, 2023 | 1:59 PM

Share

ಬೆಂಗಳೂರು, ಡಿ.31: ಬೆಂಗಳೂರಿನ ಪ್ರೆಸ್​ಕ್ಲಬ್​​​ (Bengaluru Press Club) ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರೆಸ್‌ ಕ್ಲಬ್ ಆಫ್ ಬೆಂಗಳೂರು 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ (Bengaluru Press Club Award)ವಿತರಣ ಕಾರ್ಯಕ್ರಮ ಬೆಂಗಳೂರು ಪ್ರೆಸ್ ಕ್ಲಬ್​ನಲ್ಲಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಪರ್ತಕರ್ತರಿಗೆ ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಟಿವಿ9ನ ಕ್ರೈಂ ವಿಭಾಗದ ಹಿರಿಯ ವರದಿಗಾರ ಹೆಚ್​​.ವಿ.ಕಿರಣ್ (Kiran H.V)​ ಅವರು ಸಿಎಂ ಸಿದ್ದರಾಮಯ್ಯರವರ (Siddaramaiah) ಕೈಯಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಶ್ಯಾಮನೂರು ಶಿವಶಂಕರಪ್ಪ, ಸಂತೋಷ್​ ಲಾಡ್​​, ಕೆ.ಗೋವಿಂದ ರಾಜು ಹಾಗೂ 29 ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಟಿವಿ9 ಹಿರಿಯ ವರದಿಗಾರ ಕಿರಣ್​.H​​.V.ಗೆ ಜೀವಮಾನ ಸಾಧನೆಗಾಗಿ ಪ್ರೆಸ್​​ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿರಣ್ ಅವರು ಸೇರಿ ಒಟ್ಟು 29 ಪತ್ರಕರ್ತರ ಜೀವಮಾನ ಸಾಧನೆಗಾಗಿ ಪ್ರೆಸ್​​ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​​​​ಗೆ ವರ್ಷದ ವ್ಯಕ್ತಿ, ಶಾಸಕ ಶ್ಯಾಮನೂರು ಶಿವಶಂಕರಪ್ಪಗೆ ಪ್ರೆಸ್‌ ಕ್ಲಬ್ ವಿಶೇಷ ಪ್ರಶಸ್ತಿ, ಸಂತೋಷ್​ ಲಾಡ್​​, ಕೆ.ಗೋವಿಂದ ರಾಜುಗೆ ಪ್ರೆಸ್​​ಕ್ಲಬ್ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಸಿದ್ದರಾಮಯ್ಯನವರು ಸನ್ಮಾನಿಸಿದರು.

ಇದನ್ನೂ ಓದಿ: ಟಿವಿ9ನ ಕಿರಣ್​ ಸೇರಿದಂತೆ 29 ಮಂದಿಗೆ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ, ಡಿಕೆಶಿ ʼವರ್ಷದ ವ್ಯಕ್ತಿʼ

ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದ 29 ಪತ್ರಕರ್ತರು

ಕಿರಣ್ ಎಚ್.ವಿ (ಟಿವಿ9), ಸದಾಶಿವ ಶೆಣೈ. ಕೆ, ಆರ್. ಶಂಕರ್, ಡಾ. ಕೂಡ್ಲಿ ಗುರುರಾಜ್, ಕೆ.ಕೆ ಮೂರ್ತಿ (ಕಂ.ಕ ಮೂರ್ತಿ), ನಾಗರಾಜ. ಎಂ, ರೂಪಾ ಆರ್. ರಾವ್, ಸತೀಶ್‌ಕುಮಾರ್ ಬಿ.ಎಸ್, ರಾಕೇಶ್ ಪ್ರಕಾಶ್ , ರಮೇಶ್ ಬಿ.ಎನ್ (ಅಭಿಮನ್ಯು), ಚನ್ನಕೃಷ್ಣ ಪಿ.ಕೆ, ವಿಜಯ್‌ಕುಮಾರ್ ಮಲಗಿಹಾಳ್, ಮನೋಜ್‌ಕುಮಾರ್, ಮುತ್ತು. ಪಿ, ಶ್ರೀಕಂಠ ಶರ್ಮ. ಆರ್, ಸಿದ್ದೇಶ್‌ಕುಮಾರ್ ಹೆಚ್.ಪಿ, ಅಫ್ಶಾನ್ ಯಾಸ್ಮಿನ್, ಚಂದ್ರಶೇಖರ್. ಎಂ, ಭಾಸ್ಕರ್ ಕೆ.ಎಸ್, ಸುಭಾಷ್ ಹೂಗಾರ್, ಪ್ರಸನ್ನಕುಮಾರ್ ಲೂಯಿಸ್, ಶಂಕರೇಗೌಡ ಹೆಚ್.ಡಿ, ಜನಾರ್ಧನಾಚಾರಿ ಕೆ.ಎಸ್, ಲಿಂಗರಾಜು ಡಿ. ನೊಣವಿನಕೆರೆ, ಮೋಹನ್‌ರಾವ್ ಸಾವಂತ್. ಜಿ, ಅನಂತರಾಮು ಸಂಕ್ಲಾಪುರ್. ಎಲ್, ಕೌಶಿಕ್. ಆರ್, ಲಕ್ಷ್ಮಿ ಸಾಗರ ಸ್ವಾಮಿಗೌಡ, ಚಿದಾನಂದ ಪಟೇಲ್.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:40 pm, Sun, 31 December 23

Follow Us
Prasanna Gaonkar
Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು