ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ: ಬಸವನಗುಡಿ PSI ವಿರುದ್ಧ ಆಯುಕ್ತರಿಗೆ ದೂರು

ಬೆಂಗಳೂರಿನ ಬಸವನಗುಡಿ ಠಾಣೆಯ ಪಿಎಸ್ಐನಿಂದ ಖಾಸಗಿ ಆಸ್ಪತ್ರೆಯ ವೈದ್ಯೆಗೆ ನಗ್ನ ಫೋಟೋ ಕಳಿಸುವಂತೆ ಕಿರುಕುಳ ಆರೋಪ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸದ್ಯ ವೈದ್ಯೆ ಪೊಲೀಸ್ ಕಮಿಷನರ್​ಗೆ ದೂರು ನೀಡಿದ್ದಾರೆ. ವೈದ್ಯೆಯಿಂದ 1.71 ಲಕ್ಷ ರೂ. ಪಡೆದಿರುವ ಆರೋಪ ಕೂಡ ಮಾಡಲಾಗಿದೆ.

ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ: ಬಸವನಗುಡಿ PSI ವಿರುದ್ಧ ಆಯುಕ್ತರಿಗೆ ದೂರು
ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ: ಬಸವನಗುಡಿ PSI ವಿರುದ್ಧ ಆಯುಕ್ತರಿಗೆ ದೂರು
Edited By:

Updated on: Nov 14, 2024 | 2:57 PM

ಬೆಂಗಳೂರು, ನವೆಂಬರ್​ 14: ನಗ್ನ ಫೋಟೋ ಕಳಿಸುವಂತೆ ಖಾಸಗಿ ಆಸ್ಪತ್ರೆ ವೈದ್ಯೆಗೆ (Doctor) ಕಿರುಕುಳ ಆರೋಪ ಹಿನ್ನೆಲೆ ನಗರದ ಬಸವನಗುಡಿ ಠಾಣೆ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್ ರಾಜಕುಮಾರ್​ ಜೋಡಟ್ಟಿ​​ ವಿರುದ್ಧ ಪೊಲೀಸ್ ಕಮಿಷನರ್​ ಬಿ.ದಯಾನಂದ್​​ಗೆ ವೈದ್ಯೆಯಿಂದ ದೂರು ನೀಡಲಾಗಿದೆ.

2020ರಲ್ಲಿ ಪಿಎಸ್​​ಐಗೆ ಫೇಸ್​ಬುಕ್​​ ಮೂಲಕ ಯುವತಿ ಪರಿಚಯವಾಗಿದೆ. ಈ ವೇಳೆ ಯುವತಿ ಎಂಬಿಬಿಎಸ್ ಪದವಿ​​ ವ್ಯಾಸಂಗ ಮಾಡುತ್ತಿದ್ದರು. ಅದೇ ವರ್ಷ ಪೊಲೀಸ್​​ ಅಕಾಡೆಮಿಯಲ್ಲಿ ಪಿಎಸ್​ಐ ಟ್ರೈನಿಂಗ್​ನಲ್ಲಿದ್ದರು. ಈ ವೇಳೆ ಪರಸ್ಪರ ಸ್ನೇಹ ಬೆಳೆದು ಪ್ರೀತಿಯಲ್ಲಿ ಬಿದ್ದಿದ್ದರು.

ನಗ್ನ ಫೋಟೋ ಕಳಿಸುವಂತೆ ಕಿರುಕುಳ

ಇನ್ನು ಇತ್ತೀಚೆಗೆ ನಗ್ನ ಫೋಟೋ ಕಳಿಸುವಂತೆ ಕಿರುಕುಳ ನೀಡಿದ್ದು, ಇದನ್ನ ನಿರಾಕರಿಸಿದ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ ನೀಡುತ್ತಿರುವ ಆರೋಪ ಮಾಡಲಾಗಿದೆ. ಹೀಗಾಗಿ ಸದ್ಯ ನೊಂದ ವೈದ್ಯೆಯಿಂದ ಬೆಂಗಳೂರು ಪೊಲೀಸ್ ಕಮಿಷನರ್​ಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ಮದ್ವೆಯಾಗುವಂತೆ ಮಾವನ ಕಿರುಕುಳಕ್ಕೆ ಬೇಸತ್ತು ದುರಂತ ಅಂತ್ಯಕಂಡ ಅಪ್ರಾಪ್ತೆ

ಸಬ್​ ಇನ್ಸ್​​ಪೆಕ್ಟರ್ ರಾಜಕುಮಾರ್​ ಜೋಡಟ್ಟಿ ವೈದ್ಯೆಯಿಂದ ಹಂತ ಹಂತವಾಗಿ 1.71 ಲಕ್ಷ ರೂ. ಹಣ ಪಡೆದಿದ್ದಾರೆ. ವಾಟ್ಸಾಪ್​ ಕರೆ ಮಾಡುವ ಮೂಲಕ ನಿನಗೆ ಹಣ ವಾಪಸ್​ ಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀಯಾ ಮಾಡಿಕೊ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನಗೆ ಹಣ ಬೇಕಾದರೆ ಠಾಣೆಗೆ ಬಂದು ತೆಗೆದುಕೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ತವ್ಯದಲ್ಲಿ ಅಸಡ್ಡೆ ಹಾಗೂ ನಿರ್ಲಕ್ಷ್ಯ: ತಹಶೀಲ್ದಾರ್​ಗೆ ನೋಟಿಸ್

ಕೋಲಾರ: ಕರ್ತವ್ಯದಲ್ಲಿ ಅಸಡ್ಡೆ ಹಾಗೂ ನಿರ್ಲಕ್ಷ್ಯ ಹಿನ್ನೆಲೆ ಮಾಲೂರು ತಹಶೀಲ್ದಾರ್​ಗೆ ರಮೇಶ್​ ಎಂಬುವವರಿಗೆ ನೋಟಿಸ್ ನೀಡಲು ಕಂದಾಯ ಇಲಾಖೆಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ. ಬಗರ್​​ ಹುಕುಂ ಹಾಗೂ ಭೂ ಮಂಜೂರಾತಿ ಸೇರಿದಂತೆ ಹಲವು ಕೆಲಸ ನಿರ್ವಹಣೆಯಲ್ಲಿ ಅಸಡ್ಡೆ ತೋರಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಶರಾವತಿ ಹಿನ್ನೀರಿನಲ್ಲಿ ಮಗುಚಿದ ತೆಪ್ಪ: ಐವರ ಪೈಕಿ ಮೂವರು ನಾಪತ್ತೆ

ತಹಶೀಲ್ದಾರ್​​ಗಳ ಜತೆ ಕಾನ್ಫರೆನ್ಸ್​ ಮೂಲಕ ಸಚಿವರು ಸಭೆ ಮಾಡಿದ್ದು, ಈ ವೇಳೆ ನೋಟಿಸ್​ ನೀಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾರಿಗೆ ಸೂಚಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us