ಶರಾವತಿ ಹಿನ್ನೀರಿನಲ್ಲಿ ಮಗುಚಿದ ತೆಪ್ಪ: ಐವರ ಪೈಕಿ ಮೂವರು ನಾಪತ್ತೆ

ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ತೆಪ್ಪು ಮಗುಚಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಐವರು ಯುವಕರು ಪ್ರವಾಸಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸದ್ಯ ನಾಪತ್ತೆಯಾಗಿರುವವರಿಗಾಗಿ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆದಿದೆ.

ಶರಾವತಿ ಹಿನ್ನೀರಿನಲ್ಲಿ ಮಗುಚಿದ ತೆಪ್ಪ: ಐವರ ಪೈಕಿ ಮೂವರು ನಾಪತ್ತೆ
ಶರಾವತಿ ಹಿನ್ನೀರಿನಲ್ಲಿ ಮಗುಚಿದ ತೆಪ್ಪ: ಐವರ ಪೈಕಿ ಮೂವರು ನಾಪತ್ತೆ
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2024 | 8:24 PM

ಶಿವಮೊಗ್ಗ, ನವೆಂಬರ್​ 13: ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ (Sharavati Backwaters) ನಡೆದಿದೆ. ಒಟ್ಟು ಐವರ ಪೈಕಿ ರಾಜು, ಸಂದೀಪ್ ಭಟ್ ಮತ್ತು ಚೇತನ್ ನಾಪತ್ತೆಯಾಗಿದ್ದು, ನವೀನ್ ಹಾಗೂ ಯಶ್ವಂತ್‌ ಈಜಿಕೊಂಡು ದಡ ಸೇರಿದ್ದಾರೆ. ಮೂವರು ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಆರಂಭವಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೇರಿದ ಬಸ್: ​ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್​ ಡಿವೈಡರ್​ ಮೇಲೇರಿದ ಘಟನೆ ನಗರದ ಹೊಳೆ ಬಸ್ ನಿಲ್ದಾಣದ ಬಳಿ ನಡೆದಿದೆ. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಹತ್ತಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಹತ್ತು ದಿನದ ಹಿಂದಷ್ಟೇ ಗಂಡು ಮಗುವಿಗೆ ತಂದೆಯಾಗಿದ್ದ ಉಪನ್ಯಾಸಕ: ಕಾಲೇಜ್​​ ಕ್ವಾರ್ಟರ್ಸ್​ನಲ್ಲಿ ನೇಣಿಗೆ ಶರಣು

ಡಿವೈಡರ್ ಮೇಲೆರಿದ ಹಿನ್ನೆಲೆ ಬಸ್ಸಿನ ಮುಂಭಾಗದ ಬಾಗಿಲು ತೆಗೆಯಲು ಪ್ರಯಾಣಿಕರು ಪರದಾಡಿದ್ದಾರೆ. ಬಳಿಕ ತುರ್ತು ನಿರ್ಗಮನ ಕಿಟಕಿಯಿಂದ ಇಳಿದಿದ್ದಾರೆ. ಅಪಘಾತದಿಂದ ಬಸ್ಸಿನ ಮುಂಭಾಗ ನುಜ್ಜುಗುಜ್ಜಾಗಿದೆ.

ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟವಾಗಿ ಮರಕ್ಕೆ ಡಿಕ್ಕಿ: ಓರ್ವ ಸಾವು

ತುಮಕೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟವಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ರಾಜೇಂದ್ರಪುರ ಗೇಟ್ ಬಳಿ ರಾಜ್ಯ ಹೆದ್ದಾರಿ 33ರಲ್ಲಿ ದುರ್ಘಟನೆ ಸಂಭವಿದೆ. ಮಂಡ್ಯ ಮೂಲದ 28 ವರ್ಷದ ಆಕರ್ಷ್ ಮೃತ ವ್ಯಕ್ತಿ.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ದರೋಡೆಕೋರ ಫಹೀಮ್ ಉತ್ತರ ಪ್ರದೇಶದಲ್ಲಿ ಬಂಧನ: ಮನೆ ಬುಲ್ಡೋಜರ್​ನಿಂದ ನೆಲಸಮ

ತುಮಕೂರಿನಲ್ಲಿ ಮದುವೆ ಮುಗಿಸಿ ಕಾರಿನಲ್ಲಿ ಮಂಡ್ಯಕ್ಕೆ ತೆರಳುತ್ತಿದ್ದರು. ಘಟನೆಯಲ್ಲಿ ಶಶಾಂಕ್ ಗೌಡ, ಜ್ಞಾನೇಶ್ವರಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 3 ತಿಂಗಳ ಹಿಂದೆಷ್ಟೇ ಶಶಾಂಕ್ ಗೌಡ ಮತ್ತು ಜ್ಞಾನೇಶ್ವರಿ ವಿವಾಹವಾಗಿದ್ದರು. ಮರಣೋತ್ತರ ಪರೀಕ್ಷೆಗಾಗಿ ಆಕರ್ಷ್ ಶವ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಹುಲಿಯೂರುದುರ್ಗ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:13 pm, Wed, 13 November 24

ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ
ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ