ಬಾಗಲಕೋಟೆಯಲ್ಲಿ ಇಮ್ಮಡಿ ಪುಲಿಕೇಶಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗಿಲ್ಲ ಭಾಗ್ಯ

ಬಹು ವರ್ಷಗಳ ಬೇಡಿಕೆ ಮೇರೆಗೆ ಹೃದಯ ಯೋಜನೆಯ ಅಡಿಯ ಒಂದು ಕಾರ್ಯದಲ್ಲಿ ಇಮ್ಮಡಿ‌ ಪುಲಿಕೇಶಿ ಪ್ರತಿಮೆ ನಿರ್ಮಾಣ ‌ಮಾಡಲಾಗಿದೆ. ಆದರೆ ಪ್ರತಿಷ್ಠಾಪನೆ ಭಾಗ್ಯ ದೊರೆತ್ತಿಲ್ಲ. ಇದು ಸ್ಥಳೀಯರಿಗೆ ಅಸಮಾಧಾನ ತಂದಿದೆ. ವಿವಿಧ ಕಾರಣ ನೀಡುತ್ತಲೇ ಪ್ರತಿಮೆಗಳು ಸಿಮೆಂಟ್ ಯಾರ್ಡ್​ನಲ್ಲೇ ಧೂಳು ಹಿಡಿಯುವಂತೆ ಮಾಡಲಾಗಿದೆ.

ಬಾಗಲಕೋಟೆಯಲ್ಲಿ ಇಮ್ಮಡಿ ಪುಲಿಕೇಶಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗಿಲ್ಲ ಭಾಗ್ಯ
ಬಾಗಲಕೋಟೆಯಲ್ಲಿ ಇಮ್ಮಡಿ ಪುಲಿಕೇಶಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗಿಲ್ಲ ಭಾಗ್ಯ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 13, 2024 | 7:57 PM

ಬಾಗಲಕೋಟೆ, ನವೆಂಬರ್​ 13: ಅದು ಚಾಲುಕ್ಯ ಅರಸರು ಆಳಿದ ಐತಿಹಾಸಿಕ‌ ನಾಡು. ದಕ್ಷಿಣ ಪಥೇಶ್ವರ ಎಂದು ಹೆಸರಾದ ಇಮ್ಮಡಿ ಪುಲಿಕೇಶಿ (Immadi Pulikeshi) ಅಳಿದ ಸಾಮ್ರಾಜ್ಯ‌‌ ಚಾಲುಕ್ಯರ ರಾಜಧಾನಿ. ಅಂತಹ ನಾಡಲ್ಲಿ ಇದುವರೆಗೂ ಒಂದೇ ಒಂದು ಇಮ್ಮಡಿ‌ ಪುಲಿಕೇಶಿ ಪ್ರತಿಮೆ ಅನಾವರಣ ಆಗಿಲ್ಲ. ಪ್ರತಿಮೆ ನಿರ್ಮಾಣವಾಗಿ ಐದು ವರ್ಷ ಕಳೆದರೂ ಪ್ರತಿಷ್ಠಾಪನೆ ಭಾಗ್ಯ ಸಿಕ್ಕಿಲ್ಲ. ಇನ್ನು ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆಗೂ ಗ್ರಹಣ ಹಿಡಿದಿದೆ. ಪ್ರತಿಮೆ ಯಾಕೆ‌ ಪ್ರತಿಷ್ಠಾಪನೆ ಆಗಿಲ್ಲ. ಯಾಕೆ ಇಷ್ಟೊಂದು ನಿರ್ಲಕ್ಷ್ಯ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಮ್ಮಡಿ ಪುಲಿಕೇಶಿ, ಬಸವೇಶ್ವರ ಪ್ರತಿಮೆಗಿಲ್ಲ ಪ್ರತಿಷ್ಠಾಪನೆ ಭಾಗ್ಯ 

ಬಹು ವರ್ಷಗಳ ಬೇಡಿಕೆ ಮೇರೆಗೆ ಹೃದಯ ಯೋಜನೆಯ ಅಡಿಯ ಒಂದು ಕಾರ್ಯದಲ್ಲಿ ಇಮ್ಮಡಿ‌ ಪುಲಿಕೇಶಿ ಪ್ರತಿಮೆ ನಿರ್ಮಾಣ ‌ಮಾಡಲಾಗಿದೆ. ಆದರೆ ಪ್ರತಿಷ್ಠಾಪನೆ ಭಾಗ್ಯ ದೊರೆತ್ತಿಲ್ಲ. ಇದು ಸ್ಥಳೀಯರಿಗೆ ಅಸಮಾಧಾನ ತಂದಿದೆ. ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಪುಲಿಕೇಶಿ ಸರ್ಕಲ್​ನಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಬಸವೇಶ್ವರ ಪ್ರತಿಮೆಯನ್ನು ಬಸವೇಶ್ವರ ಸರ್ಕಲ್​ನಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂಬ ಬೇಡಿಕೆ ಇಂದಿಗೂ ಈಡೇರುತ್ತಿಲ್ಲ.

ಇದನ್ನೂ ಓದಿ: ಸರಳ ಮದುವೆ: ಉಳಿದ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ ನವಜೋಡಿ

ಸುಪ್ರೀಂ ಕೋರ್ಟ್ ಆದೇಶ, ಲೋಕೋಪಯೋಗಿ ಇಲಾಖೆ ಅಡಚಣೆ, ಪುರಸಭೆ ಜಾಗವಿಲ್ಲ ಅಂತ ವಿವಿಧ ಕಾರಣ ನೀಡುತ್ತಲೇ ಪ್ರತಿಮೆಗಳು ಸಿಮೆಂಟ್ ಯಾರ್ಡ್​ನಲ್ಲೇ ಧೂಳು ಹಿಡಿಯುವಂತೆ ಮಾಡಲಾಗಿದೆ. ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು, ಪುರಸಭೆ, ತಹಸೀಲ್ದಾರ, ಜಿಲ್ಲಾಧಿಕಾರಿಗಳು, ಎಲ್ಲ ಜನಪ್ರತಿನಿಧಿಗಳಿಗೂ ಪ್ರತಿಮೆ ಪ್ರತಿಷ್ಠಾಪನೆ ಬೇಗ ಮಾಡಿ ಅಂದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಕೆರಳಿದ ಜನರು ಆದಷ್ಟು ಬೇಗ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಇಲ್ಲದಿದ್ದರೆ ‌ಮುಂದೆ ಉಗ್ರ ಹೋರಾಟ ಮಾಡುವಾಗಿ ಬಾದಾನಿ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರಾದ ಇಷ್ಟಲಿಂಗ ನರೇಗಲ್ ಹೇಳಿದ್ದಾರೆ.

ಬಾದಾಮಿ ಪಟ್ಟಣದ ಪುಲಿಕೇಶಿ ಸರ್ಕಲ್​ಗೆ ರಾಮದುರ್ಗ ಸರ್ಕಲ್ ಅಂತಲೂ ಕೂಡ ಕರೆಯುತ್ತಾರೆ. ಅದೇ ಜಾಗದಲ್ಲಿ ಇಮ್ಮಡಿ ಪುಲಿಕೇಶಿ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಆದರೆ ಇದಕ್ಕೆ ಕಾನೂನು ಅಡ್ಡಿ, ಲೋಕೋಪಯೋಗಿ ಇಲಾಖೆಯವರು ನಡುರಸ್ತೆಯಲ್ಲಿ ಅವಕಾಶ ಕೊಡುತ್ತಿಲ್ಲ. ಪುರಸಭೆಯವರು ಜಾಗ ನೀಡುತ್ತಿಲ್ಲ. ಇನ್ನು ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳನ್ನು ಕೇಳಿದರೆ, ಈ ಪ್ರೊಪೋಜಲ್ ನಮಗೆ ಬಂದಿದೆ. ಆದರೆ ಲೋಕೋಪಯೋಗಿ ಇಲಾಖೆ ಅವಕಾಶ ಕೊಡುತ್ತಿಲ್ಲ ಎಂದಿದ್ದಾರೆ.

ಇನ್ನು ಪುರಸಭೆ ಜಾಗ ಅಲ್ಲಿ ಸಮರ್ಪಕವಾಗಿಲ್ಲ. ನಮಗೆ ಸಂಸದರು ಶಾಸಕರು ಸೂಕ್ತ ಜಾಗ ಸರ್ವೆ ಮಾಡಲು ಹೇಳಿದ್ದಾರೆ. ಜಾಗ ಸರ್ವೆ ಕಾರ್ಯ ಆದಷ್ಟು ಬೇಗ ಮುಗಿಸಿ ವರದಿ ಕೊಡುತ್ತೇವೆ. ನಂತರ ಶಾಸಕರು, ಸಂಸದರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಬಾದಾಮಿ ಬಿ ಎ ಡಾಂಗೆ ಹೇಳಿದ್ದಾರೆ.

ಸಂಸದ ಪಿಸಿ ಗದ್ದಿಗೌಡರ ಹೇಳಿದ್ದಿಷ್ಟು

ಸಂಸದ ಪಿಸಿ ಗದ್ದಿಗೌಡರ ಮಾತನಾಡಿ, ನಾವು ಪುಲಿಕೇಶಿ ಸರ್ಕಲ್​ನಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದೆವು. ಆದರೆ ಸುಪ್ರೀಂ ಕೋರ್ಟ್ ಆದೇಶ ರಸ್ತೆ ಮೇಲೆ ಪ್ರತಿಮೆಗೆ ನಿರ್ಬಂಧ ಹೇರಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಹಾಗೂ ಡಿಸಿ ಅವರ ಜೊತೆ ಸಭೆ ಮಾಡಲಾಗಿದೆ. ಪುರಸಭೆ ಜಾಗ ಗುರುತಿಸಿ‌‌ ಹೇಳಿದ ನಂತರ ಆದಷ್ಟು ಬೇಗ ಇಮ್ಮಡಿ ಪುಲಿಕೇಶಿ ಹಾಗೂ ಬಸವೇಶ್ವರ ಎರಡು ಪ್ರತಿಮೆ ಪ್ರತಿಷ್ಠಾಪನೆ ‌ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಬೇಟೆ: ವಿಜಯಪುರದ ಅಂಧ ಬಾಲಕನಿಂದ ಸಾಧನೆ

ವಿವಿಧ ಕಾರಣ ನೆಪವೊಡ್ಡಿ ಪ್ರತಿಮೆ ಪ್ರತಿಷ್ಠಾಪನೆ ‌ಮುಂದೂಡಲಾಗುತ್ತಿದೆ. ಇದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದ್ದು, ಆದಷ್ಟು ಬೇಗ ಎರಡು ಪ್ರತಿಮೆ ಅನಾವರಣ ಮಾಡುವ ಕಾರ್ಯ ಆಗಬೇಕಿದೆ ಎನ್ನುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ