ಉಪಚುನಾವಣೆ ಅಂತ್ಯ: ಸಂಡೂರು, ಶಿಗ್ಗಾಂವಿ-ಚನ್ನಪಟ್ಟಣದಲ್ಲಿ ಎಷ್ಟು ಮತದಾನ?

ಒಂದು ತಿಂಗಳಿನಿಂದ ಸದ್ದು ಮಾಡಿದ್ದ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್‌ ಅಖಾಡ ಸೈಲೆಂಟ್ ಆಗಿದೆ. ಇಷ್ಟು ದಿನ ನಾಯಕರ ಭಾಷಣ ಕೇಳಿದ್ದ ಮತದಾರ ಇಂದು ತನ್ನ ತೀರ್ಪು ಬರೆದಿದ್ದಾನೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಲಾಕ್ ಆಗಿದ್ದು, ಎಲ್ಲಾ ಕಡೆಯೂ ಸೋಲುಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಹಾಗಾದ್ರೆ, ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆ ಹೇಗಾಯ್ತು? ಎಷ್ಟು ಮತದಾನವಾಯ್ತು ಎನ್ನುವ ವಿವರ ಇಲ್ಲಿದೆ.

ಉಪಚುನಾವಣೆ ಅಂತ್ಯ: ಸಂಡೂರು, ಶಿಗ್ಗಾಂವಿ-ಚನ್ನಪಟ್ಟಣದಲ್ಲಿ ಎಷ್ಟು ಮತದಾನ?
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 13, 2024 | 8:32 PM

ಬೆಂಗಳೂರು, (ನವೆಂಬರ್ 13): ಸಣ್ಣಪುಟ್ಟ ಕಿರಿಕ್‌ ನಡುವೆ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಭರ್ಜರಿ ಮತದಾನವಾಗಿದೆ. ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂತ್ಯವಾಗಿದ್ದು, ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮತದಾನ ಪ್ರಕ್ರಿಯೆ ಸುಖಾಂತ್ಯವಾಗಿದೆ. ಇನ್ನು ಕೆಲವೆಡೆ ರಾಜಕೀಯ ಮುಖಂಡರ ಮಾತಿನ ಚಕಮಕಿ ನಡುವೆ ಮತದಾರು ತಮ್ಮ ತಮ್ಮ ಹಕ್ಕು ಚಲಾಯಿಸಿದ್ದು. ಅಭ್ಯರ್ಥಿಗಳ ಹಣೆ ಬರಹ ಇವಿಎಂಗಳಲ್ಲಿ ಲಾಕ್ ಆಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ವೋಟಿಂಗ್‌?

ಚನ್ನಪಟ್ಟಣ, ಸಂಡೂರು, ಶಿಗ್ಗ್ಗಾಂವಿ ಕ್ಷೇತ್ರಗಳಲ್ಲಿ ಬೈಎಲೆಕ್ಷನ್‌ ನಡೆದಿದ್ದು ಇಂದು ಮತದಾನನೊಂದಿಗೆ ಮಿನಿಯುದ್ಧ ಅಂತ್ಯವಾಗಿದೆ. ಯುದ್ಧ ಅಂತ್ಯವಾದ್ರೂ ಯುದ್ಧದಲ್ಲಿ ಗೆಲ್ಲುವರು ಯಾರು? ಸೋಲುವರು ಯಾರು? ಎನ್ನುವುದು ಗೊತ್ತಾಗಬೇಕು ಅಂದ್ರೆ ಇನ್ನೂ 10 ದಿನ ಅಂದ್ರೆ ನವೆಂಬರ್ 23ರ ವರೆಗೆ ಕಾಯಲೇ ಬೇಕು. ಅಷ್ಟಕ್ಕೂ ಮೂರು ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನ ಆಗಿದ್ದು, ಮತಪ್ರಮಾಣ ಕೂಡಾ ಹೆಚ್ಚಾಗಿದೆ. ತೀವ್ರ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣದಲ್ಲಿ ಬರೋಬ್ಬರಿ 88.80ರಷ್ಟು ಮತದಾನ ಆಗಿದೆ. ಇನ್ನು ಕುತೂಹಲಕ್ಕೆ ಕಾರಣವಾಗಿರೋ ಶಿಗ್ಗಾಂವಿಯಲ್ಲೂ 8048.07ರಷ್ಟು ವೋಟಿಂಗ್ ಆಗಿದೆ. ಇತ್ತ ಸಂಡೂರಿನಲ್ಲಿ 76.24 %ರಷ್ಟು ಮತದಾನ ಆಗಿದೆ ಎಂದು  ಕರ್ನಾಟಕ ಚುನಾವಣಾ ಆಯೋಗ ಅಧಿಕೃತವಾಗಿ ತಿಳಿಸಿದೆ.

ಸಂಡೂರಿನಲ್ಲಿ 76.24% ಮತದಾನ

ಎಸ್​ಟಿ ಮೀಸಲಾತಿ ಇರುವ ಸಂಡೂರು ಕ್ಷೇತ್ರದಲ್ಲಿ 90922 ಪುರುಷರು, 89252 ಮಹಿಳೆಯರು ಹಾಗೂ ಇತರೆ 12 ಸೇರಿದಂತೆ ಒಟ್ಟು 180189 ಮತದಾರರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಈ ಉಪಚುನಾವಣೆಯಲ್ಲಿ ಶೇಕಡ 76.24% ಮತದಾನವಾಗಿದೆ ಎಂದು ಬಳ್ಳಾರಿ‌ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಸಣ್ಣ ಜಗಳ ಬಿಟ್ರೆ ಶಾಂತಿಯುತವಾಗಿ ವೋಟಿಂಗ್ ಆಗಿದೆ. ನವೆಂಬರ್‌ 23 ರಂದು ಫಲಿತಾಂಶ ಹೊರಬೀಳಲಿದ್ದು, ಅಲ್ಲಿಯವರೆಗೂ ಸೋಲುಗೆಲುವಿನ ಲೆಕ್ಕಾಚಾರವೇ ಮುಂದುವರಿಯಲಿದೆ.

ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ