- Kannada News Photo gallery Hassan Simple marriage: new Couple gave Water Purifiers to 26 schools with the remaining money, taja suddi
ಸರಳ ಮದುವೆ: ಉಳಿದ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ ನವಜೋಡಿ
ಹಾಸನದ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಇಂಜಿನಿಯರ್ ಶಿವಕುಮಾರ್ ಮತ್ತು ಮಂಡ್ಯದ ಸಂಗೀತಾ ಅವರು ಸರಳ ವಿವಾಹದಿಂದ 5 ಲಕ್ಷ ರೂಪಾಯಿ ಉಳಿಸಿ, 26 ಶಾಲೆಗಳಿಗೆ ಶುದ್ಧ ನೀರಿನ ಯಂತ್ರಗಳನ್ನು ದಾನ ಮಾಡಿದ್ದಾರೆ. ಹೊ.ತಿ.ಹುಚ್ಚಪ್ಪ ಅವರ ಪ್ರೇರಣೆಯಿಂದ ಈ ಕಾರ್ಯ ಮಾಡಿದ್ದಾರೆ ಎಂದು ನವಜೋಡಿ ತಿಳಿಸಿದ್ದಾರೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Updated on: Nov 13, 2024 | 6:39 PM
Share

ಅತ್ಯಂತ ಅದ್ದೂರಿ ಮತ್ತು ಆಡಂಭರದ ಈ ಕಾಲದಲ್ಲಿ ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ತಮಗೆ ಬಂದ ಹಣದಿಂದ ವಿಷೇಶ ಕೊಡುಗೆ ಕೂಡ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಇಂಜಿನಿಯರ್ ಆಗಿರುವ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್ 11ರಂದು ಸರಳ ವಿವಾಹವಾಗಿದ್ದಾರೆ. ಆ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ್ದಾರೆ.

ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ್ದಾರೆ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಕೆಲಸ ಮಾಡಲು ನವಜೋಡಿಗೆ ರೈತಪರ ಹೋರಾಟಗಾರರಾದ ತಾತ ಹೊ.ತಿ.ಹುಚ್ಚಪ್ಪ ಅವರು ಪ್ರೇರಣೆ ಎಂದಿದ್ದಾರೆ.

ಹೊನ್ನವಳ್ಳಿ ಗ್ರಾಮದಲ್ಲಿ ಹೊ.ತಿ.ಹುಚ್ಚಪ್ಪ ತಾತ ದತ್ತು ಪಡೆದಿದ್ದ ಶಾಲೆ ಸೇರಿದಂತೆ ತಾಲೂಕಿನ ಕಸಬ ಹೋಬಲಿಯ 26 ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಯಂತ್ರವನ್ನು ನೀಡಿದ್ದಾರೆ.
Related Photo Gallery
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ



