ಹತ್ತು ದಿನದ ಹಿಂದಷ್ಟೇ ಗಂಡು ಮಗುವಿಗೆ ತಂದೆಯಾಗಿದ್ದ ಉಪನ್ಯಾಸಕ: ಕಾಲೇಜ್ ಕ್ವಾರ್ಟರ್ಸ್ನಲ್ಲಿ ನೇಣಿಗೆ ಶರಣು
ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನ ಉಪನ್ಯಾಸಕ ಪ್ರವೀಣ್ ಕುಮಾರ್ (35) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರವೀಣ್ ಕುಮಾರ್ ಅವರ ಪತ್ನಿ 10 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಹುಬ್ಬಳ್ಳಿ, ನವೆಂಬರ್ 13: ನಗರದ ಪಿ.ಸಿ.ಜಾಬಿನ್ ಕಾಲೇಜ್ ಕ್ವಾರ್ಟರ್ಸ್ನಲ್ಲಿ ನೇಣು ಬಿಗಿದುಕೊಂಡು ಉಪನ್ಯಾಸಕ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ನಿನ್ನೆ ರಾತ್ರಿ ನಡೆದಿದೆ. ಪ್ರವೀಣ್ ಕುಮಾರ್(35) ಮೃತ ಉಪನ್ಯಾಸಕ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತ ಪ್ರವೀಣ್ ಕುಮಾರ್ ದಾವಣಗೆರೆ ಜಿಲ್ಲೆಯ ನಿವಾಸಿಯಾಗಿದ್ದು, ಕಳೆದ 4 ವರ್ಷದಿಂದ ಪಿ.ಸಿ.ಜಾಬಿನ್ ಕಾಲೇಜ್ನಲ್ಲಿ ಕೆಮಿಸ್ಟ್ರಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. 10 ದಿನ ಹಿಂದಷ್ಟೇ ಗಂಡು ಮಗುವಿಗೆ ಪ್ರವೀಣ್ ಪತ್ನಿ ಜನ್ಮ ನೀಡಿದ್ದರು.
ಕೆಟ್ಟು ನಿಂತ ಟ್ರಿಪ್ಪರ್ಗೆ ಲಾರಿ ಡಿಕ್ಕಿ: ಚಾಲಕ ಸಾವು
ಕೋಲಾರ: ಕೆಟ್ಟು ನಿಂತಿದ್ದ ಟ್ರಿಪ್ಪರ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೇತಿಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಶಿವಪುರ ಗ್ರಾಮದ ಬಾಬು (30) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ದರೋಡೆಕೋರ ಫಹೀಮ್ ಉತ್ತರ ಪ್ರದೇಶದಲ್ಲಿ ಬಂಧನ: ಮನೆ ಬುಲ್ಡೋಜರ್ನಿಂದ ನೆಲಸಮ
ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರಿಪ್ಪರ್ ಅನ್ನು ರಿಪೇರಿ ಮಾಡುತ್ತಿದ್ದ ಚಾಲಕ ಬಾಬು ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಶ್ರೀನಿವಾಸಪುರ- ಮುಳಬಾಗಿಲು ಹೆದ್ದಾರಿಯಲ್ಲಿ ಮುಂಜಾನೆ ನಸುಕಿನ ಜಾವದಲ್ಲಿ ದುರಂತ ಸಂಭವಿಸಿದೆ. ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.
ಕಳ್ಳತನವಾಗಿದ್ದ 105 ಬೈಕ್ಗಳನ್ನ ಪತ್ತೆ ಹಚ್ಚಿದ ಪೊಲೀಸರು: 30 ಆರೋಪಿಗಳ ಬಂಧನ
ಕಲಬುರಗಿ: ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ಮಾಡಿ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬರೋಬ್ಬರಿ 105 ಬೈಕ್ಗಳನ್ನು ಪತ್ತೆ ಮಾಡಿದ್ದಾರೆ. ಕಳ್ಳತನ ಕೃತ್ಯದಲ್ಲಿ ಭಾಗಿದ್ದ 30 ಆರೋಪಗಳನ್ನು ಬಂಧಿಸಿದ್ದು, ಒಟ್ಟು 54,55,613 ಲಕ್ಷ ಮೌಲ್ಯದ ಬೈಕ್ಗಳು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ತನ್ನ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಕೈಗಾದಲ್ಲಿ ರಕ್ಷಣಾ ಸಿಬ್ಬಂದಿ ಆತ್ಮಹತ್ಯೆ
ದುಂದು ವೆಚ್ಚಕ್ಕಾಗಿ ಕಳ್ಳರು ಬೈಕ್ಗಳ ಕಳ್ಳತನ ಮಾಡುತ್ತಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಳ್ಳತನ ನಡೆದಿದೆ. ಎರಡು-ಮೂರು ದಿನ ಒಂದೆ ಕಡೆ ನಿಲ್ಲಿಸುತ್ತಿದ್ದ ಬೈಕ್ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬೈಕ್ನ ನಂಬರ್ ಪ್ಲೇಟ್ಗಳನ್ನು ಕೂಡ ಬದಲಾವಣೆ ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.