ಬೆಂಗಳೂರು: ಶಾಲಾ ಕಾಲೇಜುಗಳನ್ನೇ ಗುರಿಯಾಗಿಸಿ ಚರಸ್ ಚಾಕೊಲೇಟ್ ದಂಧೆ, ಆರೋಪಿಗಳ ಬಂಧನ

ಚಾಕೋಲೆಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ವಯೋವೃದ್ಧರ ವರೆಗೂ ಚಾಕಲೇಟ್ ಇಷ್ಟ ಪಡದವರೇ ಇಲ್ಲ. ಆದರೆ, ಬೆಂಗಳೂರಿನ ಕೆಲ ಪಾನ್ ಶಾಪ್​​ಗಳಲ್ಲಿ ಥೇಟ್ ಚಾಕೊಲೆಟ್ ರೂಪದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಹೀಗೆ ದಂಧೆ ನಡೆಸುವ ಚರಸ್ ಚಾಕೊಲೇಟ್ ಗ್ಯಾಂಗ್ ಅನ್ನು ಕೊನೆಗೂ ಪೋಲಿಸರು ಬಂಧಿಸಿದ್ದಾರೆ. ಚರಸ್ ಚಾಕೊಲೇಟ್ ಹೇಗಿದೆ? ಹೇಗೆಲ್ಲಾ ಮಾರಾಟ ಆಗುತ್ತಿದೆ ಎಂಬುದರ ವಿವರ ಇಲ್ಲಿದೆ.

ಬೆಂಗಳೂರು: ಶಾಲಾ ಕಾಲೇಜುಗಳನ್ನೇ ಗುರಿಯಾಗಿಸಿ ಚರಸ್ ಚಾಕೊಲೇಟ್ ದಂಧೆ, ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
Follow us
Shivaprasad
| Updated By: ಗಣಪತಿ ಶರ್ಮ

Updated on: Nov 13, 2024 | 7:25 AM

ಬೆಂಗಳೂರು, ನವೆಂಬರ್ 13: ಉತ್ತರ ಪ್ರದೇಶದ ಗಾಂಜಾ, ಚರಸ್​ನ ಘಾಟು ಬೆಂಗಳೂರಿಗೂ ತಲುಪಿದೆ. ಚರಸ್, ಗಾಂಜಾ ಬಳಸಿ ತಯಾರಿಸುವ ಭಾಂಗ್ ಚಾಕೊಲೇಟ್ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಎಗ್ಗಿಲ್ಲದೆ ಮಾರಾಟವಾಗುತ್ತಿತ್ತು. ಉತ್ತರಪ್ರದೇಶದ ಗಾಂಜಾ ಚಾಕೊಲೇಟ್ ಪ್ಯಾಕ್ಟರಿಯಿಂದ ಬೆಂಗಳೂರಿಗೆ ಪೂರೈಕೆಯಾಗುತ್ತಿದ್ದ ಭಾಂಗ್ ಚಾಕೊಲೇಟ್ ಜಾಲವನ್ನು ಜಿಗಣಿ ಇನ್ಸ್​​ಪೆಕ್ಟರ್ ಮಂಜುನಾಥ ಅವರ ತಂಡೆ ಕೊನೆಗೂ ಪತ್ತೆ ಮಾಡಿದೆ. ಅಂತರ ರಾಜ್ಯ ಭಾಂಗ್ ಚಾಕಲೋಟ್ ಪೂರೈಕೆ ಮಾಡುತ್ತಿದ್ದ ಆರು ಪೆಡ್ಲರ್​​ಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಅಂಕೂರ್, ಸೂರಜ್, ಸೋಮ್ ಸೇನ್, ಆನಂದ್ ಕುಮಾರ್, ಜೀತೂ ಸಿಂಗ್ ಬಳಿಯಿಂದ 10 ಲಕ್ಷ ರೂ. ಮೌಲ್ಯದ 50 ಕೆಜಿ ಚರಸ್ ಚಾಕೊಲೇಟ್ ಜಪ್ತಿ ಮಾಡಿದ್ದಾರೆ.

ಏನಿದು ಚರಸ್ ಚಾಕೊಲೇಟ್?

ಚರಸ್, ಗಾಂಜಾ ಬಳಸಿ ತಯಾರಿಸುವ ಮಾದಕ ದ್ರವ್ಯವಾಗಿದೆ ಚರಸ್ ಚಾಕೊಲೇಟ್. ಇದು ಮಕ್ಕಳು ತಿನ್ನುವ ಸಾಮಾನ್ಯ ಚಾಕೊಲೇಟ್ ರೀತಿಯೇ ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶ, ಶಾಲಾ ಕಾಲೇಜು ಆವರಣಗಳನ್ನು ಗುರಿಯಾಗಿಸುತ್ತಿದ್ದ ಆರೋಪಿಗಳು ಒಂದು ಚಾಕೊಲೇಟ್​ಗೆ ನೂರು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.

ಉತ್ತರ ಪ್ರದೇಶದಲ್ಲಿ ರೈಲುಗಳಲ್ಲಿ ಬರುತ್ತಿತ್ತು ಚರಸ್ ಚಾಕೊಲೇಟ್

ಆರೋಪಿಗಳು ಚಾಕೊಲೇಟ್​​ಗಳನ್ನು ಉತ್ತರ ಪ್ರದೇಶದಿಂದ ರೈಲಿನ ಮೂಲಕ ತಂದು ಮನೆಗಳಲ್ಲಿ ಶೇಖರಣೆ ಮಾಡಿ ಇಡುತ್ತಿದ್ದರು. ಕಾನ್ಪುರದ ಮಹಾಲಕ್ಷ್ಮಿ ಫಾರ್ಮ್ ಕಂಪನಿಯ ಮಹಾಕಾಳ್ ಎಂಬ ಹೆಸರಲ್ಲಿ ಚಾಕೊಲೇಟ್ ತಯಾರಾಗುತ್ತಿತ್ತು. ಕೆಲ ರೈಲ್ವೆ ಕೂಲಿ ಕಾರ್ಮಿಕರ ಸಹಾಯ ಪಡೆದು ಅಂತರಾಜ್ಯ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಚರಸ್ ಚಾಕೊಲೇಟ್ ದಂಧೆಯ ವ್ಯಾಪ್ತಿ ಇನ್ನಷ್ಟು ದೊಡ್ಡದಾಗಿರುವ ಸುಳಿವು ಇದ್ದು, ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಬೆಳಿಗ್ಗೆ ಮಾಲ್ ನಲ್ಲಿ ಕೆಲಸ ರಾತ್ರಿ ಬೈಕ್ ಕಳವು!

ಬೆಳಿಗ್ಗೆ ಮಾಲ್​ನಲ್ಲಿ ಕೆಲಸ, ರಾತ್ರಿ ಬೈಕ್ ಕಳ್ಳತನ ಮಾಡಿಕೊಂಡಿದ್ದ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಶೋಕಿಯ ಹಿಂದೆ ಬಿದ್ದಿದ್ದ ಮಾಲ್ ಆಫ್ ಏಷಿಯಾದಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ, ರಾತ್ರಿಯಾದರೆ ತನ್ನ ಕೈಚಳಕ ತೋರಿಸುತ್ತಿದ್ದ. ಶೋಕಿಗಾಗಿ ರಾತ್ರಿ ವೇಳೆ ಆರ್​ಎಕ್ಸ್ ಬೈಕ್​​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. 25 ವರ್ಷದ ಸಾಗರ್ ಎಂಬ ವ್ಯಕ್ತಿಯನ್ನ ವಿಶ್ವನಾಥಪುರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 4 ಆರ್​ಎಕ್ಸ್ ಬೈಕ್ ಮತ್ತು ಎರಡು ಆ್ಯಕ್ಟೀವಾ, ಒಟ್ಟು ಆರು ಬೈಕ್​ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಕಾರ್ಯಾಚರಣೆ, 64 ಜನರ ಬಂಧನ, 140 ಕೆಜಿ ಗಾಂಜಾ ಜಪ್ತಿ

ಇನ್ನೋಂದು ಪ್ರತ್ಯೇಕ ಪ್ರಕರಣದಲ್ಲಿ ಐಶಾರಾಮಿ ಬೈಕ್​ಗಳಾದ ಎನ್ ಫೀಲ್ಡ್ ಬುಲೆಟ್​ಗಳನ್ನು ಕಳ್ಳತನ ಮಾಡುತ್ತಿದ್ದ ಮೋಹನ್, ಅರುಣ್, ದಿಲೀಪ್ ಎಂಬುವವರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 42 ಲಕ್ಷ ರೂ. ಮೌಲ್ಯದ 18ಕ್ಕೂ ಹೆಚ್ಚು ಬೈಕ್​​ಗಳನ್ನ ಸೀಜ್ ಮಾಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ