Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿ ಪಿತ್ರಾರ್ಜಿತ ಆಸ್ತಿ ಕೊಟ್ಟಿಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ

ಪಿತ್ರಾರ್ಜಿತ ಆಸ್ತಿ ವಿವಾದದಿಂದಾಗಿ 20 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನೆಲಮಂಗಲದಲ್ಲಿ ನಡೆದಿದೆ. ಅಜ್ಜಿಯಿಂದ ಆಸ್ತಿಯನ್ನು ಹೆಣ್ಣು ಮಗಳಿಗೆ ಮಾತ್ರ ನೀಡಲಾಗಿರುವುದರಿಂದ ಉಂಟಾದ ಕುಟುಂಬದಲ್ಲಿನ ಕಲಹದಿಂದ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಜ್ಜಿ ಪಿತ್ರಾರ್ಜಿತ ಆಸ್ತಿ ಕೊಟ್ಟಿಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ
ಅಜ್ಜಿ ಪಿತ್ರಾರ್ಜಿತ ಆಸ್ತಿ ಕೊಟ್ಟಿಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 11, 2024 | 6:45 PM

ನೆಲಮಂಗಲ, ನವೆಂಬರ್​ 11: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ತಾಯಿ ಪದ್ಮ ಕೋಣೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶಿವನಗರದ ಪೃಥ್ವಿ(20) ಮೃತ ಯುವಕ. ಬಿಎ ಓದಿಕೊಂದಿದ್ದು ಚಾಲಕನಾಗಿದ್ದ ಕೆಲಸ ಮಾಡುತ್ತಿದ್ದ.

ಅಜ್ಜಿ ಕುಳಯಮ್ಮ ಮತ್ತಿಕೆರೆಯ ಮನೆಯೊಂದನ್ನ ತನ್ನ ಮಗನ ಮಕ್ಕಳಿಗೆ ಆಸ್ತಿ ಕೊಡದೆ ಹೆಣ್ಣು ಮಗಳಿಗೆ ಕೊಟ್ಟಿರುವ ಆರೋಪ ಕೇಳಿಬಂದಿದೆ. ಈ ವಿಷಯವಾಗಿ ಸಂಬಂಧಿಕರನ್ನ ಸೇರಿಸಿ ಮಾತುಕತೆ ಮಾಡಲಾಗಿದ್ದು, ಆದರೆ ಮಾತುಕತೆ ವಿಫಲವಾಗಿದೆ. ಈ ಘಟನೆಯಿಂದ ಮನನೊಂದ ಪೃಥ್ವಿ, ಮನೆಯ ಕೋಣೆಯಲ್ಲಿ ವೇಲ್​ ಬಳಸಿ ಪ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ: ಮಹಿಳೆ ಜಸ್ಟ್​ ಮಿಸ್

ಬೆಂಗಳೂರು: ನಗರದ ಹೊರವಲಯದ ಅವಲಹಳ್ಳಿಯ ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ವೇಗವಾಗಿ ಬಂದ ಟಿಪ್ಪರ್ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಕಾರಿನಲ್ಲಿದ್ದ ಮಹಿಳೆ ಪಾರಾಗಿದ್ದಾರೆ. ಟಿಪ್ಪರ್ ಲಾರಿ ಚಾಲಕನ ಅಜಾಗರೂಕ ಮತ್ತು ಅತಿವೇಗದ ಚಾಲನೆಯಿಂದ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಯುವಕನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್​?

ಅಪಘಾತದ ದೃಶ್ಯ ಕಾರಿನ ಹಿಂಬದಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಅಪಘಾತ ದೃಶ್ಯ ಮತ್ತು ಫೋಟೊಗಳನ್ನ ಎಕ್ಸ್​​ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಹಾಗೂ ನ್ಯಾಯ ಒದಗಿಸುವಂತೆ ಮಹಿಳೆ ಮನವಿ ಮಾಡಿದ್ದಾರೆ.

10 ಲಕ್ಷಕ್ಕೂ ಅಧಿಕ ಸಾಲ: ರೈತ ನೇಣಿಗೆ ಶರಣು

ಚಿಕ್ಕೋಡಿ: ಸಾಲಭಾದೆ ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೈತ ನೇಣಿಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ‌ ಗ್ರಾಮದಲ್ಲಿ ನಡೆದಿದೆ. ದೇವೆಂದ್ರ ಶಂಕರ್ ಕದಂ(58) ಮೃತ ರೈತ. ಹಾರೂಗೇರಿ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ದೇವೆಂದ್ರ ಶಂಕರ್ ಕದಂ ಸುಮಾರು 2.20 ಎಕರೆ ಭೂಮಿ‌ ಹೊಂದಿದ್ದು, ಖಾಸಗಿ ಹಾಗೂ ವಿವಿಧ ಬ್ಯಾಂಕ್​ಗಳಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.