ಬೆಂಗಳೂರು, ಮೇ.09: ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರು ನಗರದಲ್ಲಿ ಮಳೆ(Bengaluru Rain)ಯ ಅಬ್ಬರ ಜೋರಾಗಿದ್ದು, ಇಂದು (ಮೇ.09) ಕೂಡ ನಗರದಲ್ಲಿ ದಟ್ಟವಾಗಿ ಮೋಡ ಕವಿದ ವಾತಾವರಣವಿದೆ. ಹೀಗಾಗಿ ಗುಡುಗು ಸಹಿತ 40 ರಿಂದ 50 ಕೀ.ಮಿ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬರಲಿದ್ದು, ಮಳೆಯಿಂದ ಜನರು ಜಾಗ್ರತೆ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೊತೆಗೆ ಇನ್ನೂ ಮೇ. 12 ನೇ ತಾರೀಖಿನವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆಯಿದೆ ಎಂದು ಮೂನ್ಸುಚನೆ ನೀಡಿದೆ.
ಮಳೆ ಸಂದರ್ಭದಲ್ಲಿ ಅವಘಡ ಸಂಭವ ಹಿನ್ನಲೆ ಸಾರ್ವಜನಿಕರಿಗೆ ಹವಾಮಾನ ಇಲಾಖೆ ಕೆಲ ಸಲಹೆಗಳನ್ನು ಕೊಟ್ಟಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಹಲವೆಡೆ ಅನಾಹುತ; ಪಾಲಿಕೆ ಹೆಲ್ಪ್ ಲೈನ್ಗೆ ಬಂತು ನೂರಾರು ದೂರುಗಳು
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತುಂತುರು ಮಳೆ ಆರಂಭವಾಗಿದ್ದು, ಮಳೆಯಿಂದಾಗಿ ಕೆಂಪೇಗೌಡ ಏರ್ಪೋಟ್ ಕೂಲ್ ಆಗಿದೆ. ಬೆಳಗಿನಿಂದ ಬಿಸಿಲಿಗೆ ಕಂಗೆಟ್ಟಿದ್ದ ಏರ್ಪೋಟ್ ಪ್ರಯಾಣಿಕರು, ಟ್ಯಾಕ್ಸಿ ಚಾಲಕರು ಮಳೆ ಆಗಮನದಿಂದ ಖುಷ್ ಆಗಿದ್ದು, ಏರ್ಪೋಟ್ ವಾತಾವರಣ ತಂಪಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 pm, Thu, 9 May 24