ಬೆಂಗಳೂರು, ಸೆ.06: ಆಗಸ್ಟ್‌ನಲ್ಲಿ ಮಳೆ ಕೊರತೆಯಾಗಿದ್ದು ಸೆಪ್ಟೆಂಬರ್ ಆರಂಭದಿಂದಲೇ ಬೆಂಗಳೂರಿನಲ್ಲಿ ವರುಣನ ಆರ್ಭಟ ಶುರುವಾಗಿದೆ(Bengaluru Rain). ಭರ್ಜರಿ ಮಳೆಯಿಂದಾಗಿ ನಗರದಲ್ಲಿ ಕೆಲವು ಕಡೆ ಟ್ರಾಫಿಕ್ ಸಮಸ್ಯೆಗಳು ಕೂಡ ಎದುರಾಗಿವೆ. ರಾತ್ರಿ ಸುರಿದ ಮಳೆಗೆ ಕಾಳೇನ ಅಗ್ರಹಾರ ಸಮೀಪದ ಡೆಕಾತ್ಲಾನ್ ಬಳಿಯ ಬೆಂಗಳೂರು-ಬನ್ನೇರುಘಟ್ಟ ರಸ್ತೆ ಜಲಾವೃತಗೊಂಡಿದೆ(Bangalore-Bannerghatta Road). ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ವಾಹನ ಸವಾರರ ಸಂಕಷ್ಟ ತಿಳಿಯುತ್ತಿದ್ದಂತೆ ನೀರು ರಸ್ತೆಗೆ ಬರದಂತೆ ತಡೆಯಲು ಟ್ರಾಫಿಕ್ ಪೊಲೀಸರು ಜೆಸಿಬಿ ಮೂಲಕ ರಸ್ತೆಗಿಳಿದು ಜಲ್ಲಿಕಲ್ಲು ಹಾಕಿ ರಸ್ತೆಗೆ ನೀರು ಬರದಂತೆ ತಡೆದಿದ್ದಾರೆ.
ರಾತ್ರಿ ಸುರಿದ ಮಳೆಯಿಂದಾಗಿ ಬೆಂಗಳೂರು-ಬನ್ನೇರುಘಟ್ಟ ರಸ್ತೆ ಕೆರೆಯಂತಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ಮಳೆ ನೀರು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಸುರಿದಾಗಲೂ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ರಸ್ತೆ ಕಾಮಗಾರಿ, ಬಿಡಬ್ಲ್ಯೂಎಸ್ಎಸ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡು ಸವಾರರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಬೆಳಿಗ್ಗೆಯಿಂದಲೂ ಶಾಲೆ, ಆಫೀಸ್ಗಳಿಗೆ ಹೋಗುವವರು ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿದ್ದು ಜೆಸಿಬಿ ಮೂಲಕ ಜಲ್ಲಿಕಲ್ಲು ಹಾಕಿ ರಸ್ತೆಗೆ ನೀರು ಬರದಂತೆ ತಡೆಗಟ್ಟಲು ಮುಂದಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆ ಟ್ರಾಫಿಕ್ ಪೊಲೀಸರೇ ಕ್ರಮಕ್ಕೆ ಮುಂದಾಗಿದ್ದು ನೀರು ರಸ್ತೆಗೆ ಬರುತ್ತಿರುವ ಜಾಗದಲ್ಲಿ ಅಡ್ಡ ಹಾಕಲು ಜೆಸಿಬಿ ತಂದಿದ್ದಾರೆ.
ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಮಿನಿಸ್ಟ್ರು ಬಾಯಲ್ಲಿ ಮಾತ್ರ! ಬೆಂಗಳೂರು ನಗರದಲ್ಲಿ ಮಳೆಯಾದರೆ ವಾಹನ ಸವಾರರಿಗೆ ಅದು ದುಸ್ವಪ್ನ
ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ವಾಂಕರ ಅಪಾರ್ಟ್‌ಮೆಂಟ್ (ರಾಷ್ಟ್ರೋತ್ಥಾನ) ಬಳಿಯ ರಸ್ತೆ ಜಲಾವೃತಗೊಂಡು ವಾಹನ ಸಂಚಾರ ನಿಧಾನವಾಗಿದೆ ಎಂದು ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ.
‘Traffic advisory’
Water logging near Rashtrothana fly over towards Hegadenagar ( Hennur traffic Ps limits). Vehicle movements are slow. pic.twitter.com/I6axn5g05X— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 5, 2023
ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿರುವ ಕಲ್ಯಾಣ್ ನಗರ ಸೇತುವೆಯ ಡೌನ್ ರ್ಯಾಂಪ್ ಬಳಿ ನೀರು ನಿಂತಿದೆ. ಸದ್ಯ ನೀರು ತುಂಬಿರುವುದನ್ನು ತೆರವುಗೊಳಿಸಲಾಗಿದ್ದು, ಮಳೆ ನೀರು ಚರಂಡಿಗೆ ಹರಿದು ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಎಕ್ಸ್‌ನಲ್ಲಿ(ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದ್ದಾರೆ.
ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯ ಯಶಸ್ವಿ ಶಾಲೆಯ ಬಳಿ ಮಳೆಯಿಂದ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಹೀಗಾಗಿ ಜುಡಿಶಿಯಲ್ ಲೇಔಟ್ ಜಂಕ್ಷನ್‌ನಿಂದ ವಜ್ರಮುನೇಶ್ವರ ಗೇಟ್‌ವರೆಗಿನ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಲಘಟ್ಟಪುರ ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:05 pm, Wed, 6 September 23