Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಬೆಂಗಳೂರಿನಲ್ಲಿ ತಾಯಿ, ಮಗನ ಬರ್ಬರ ಹತ್ಯೆ

ಬೆಂಗಳೂರಿನ ಬಾಗಲಗುಂಟೆ ರವೀಂದ್ರ ನಗರದಲ್ಲಿ ತಾಯಿ,ಮಗನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೃತ ಮಹಿಳೆಯ ಪತಿಯೇ ಹತ್ಯೆ ಮಾಡಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಚಂದ್ರುಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಮತ್ತೊಂದೆಡೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ನಾಗಶೆಟ್ಟಿಹಳ್ಳಿ ಬಳಿ ನಡೆಯುತ್ತಿರುವ ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ಕಾಮಗಾರಿ ವೇಳೆ ಕಾರ್ಮಿಕ ಸಾವನ್ನಪ್ಪಿದ್ದಾನೆ. ಈ ಎರಡೂ ಘಟನೆಗಳ ವಿವರ ಈ ಕೆಳಗಿನಂತಿದೆ ನೋಡಿ.

Bengaluru News: ಬೆಂಗಳೂರಿನಲ್ಲಿ ತಾಯಿ, ಮಗನ ಬರ್ಬರ ಹತ್ಯೆ
ಕೊಲೆಯಾದ ತಾಯಿ ಮಗ
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on:Sep 06, 2023 | 1:08 PM

ಬೆಂಗಳೂರು, (ಸೆಪ್ಟೆಂಬರ್ 06): ಬೆಂಗಳೂರಿನ (Bengaluru) ಬಾಗಲಗುಂಟೆಯ ರವೀಂದ್ರನಗರದಲ್ಲಿ ತಾಯಿ, ಮಗನನ್ನು ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ನವನೀತಾ(33), ಸೃಜನ್(11) ಕೊಲೆಯಾದವರು. ನಿನ್ನೆ(ಸೆಪ್ಟೆಂಬರ್ 05) ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಾಗಲಗುಂಟೆ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಚಂದ್ರುನೇ ತನ್ನ ಪತ್ನಿ ಹಾಗೂ ಮಗನನ್ನು ಕೊಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗಲಗುಂಟೆ ಪೊಲೀಸರು ಇದೀಗ ಪರಾರಿಯಾದ ಚಂದ್ರು ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಪತಿ ಚಂದ್ರುವೇ ಕೊಂದಿರಬಹುದೆಂದು ಮೃತ ನವನೀತಾ ಕುಟುಸ್ಥರು ಅರೋಪಿಸಿದ್ದಾರೆ. ಕೊಲೆಯಾದ ಮಹಿಳೆ ಆಂಧ್ರ ಪ್ರದೇಶ ಮೂಲದವರಾಗಿದ್ದು, ಕಳೆದ ಮೂರು ವರ್ಷಗಳಿಂದ ರವೀಂದ್ರ ನಗರದಲ್ಲಿ ವಾಸವಿದ್ದರು. ಆದ್ರೆ, ಪತಿಯಿಂದ ಕಳೆದ 2 ವರ್ಷಗಳಿಂದ ದೂರವಾಗಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಇನ್ನು ಈ ಪ್ರಕರಣ ಭೇದಿಸಲು ಡಿಸಿಪಿ ಶಿವಪ್ರಕಾಶ್ ದೇವರಾಜ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.  ಈ ಬಗ್ಗೆ ಪೊಲೀಸರು ಚಂದ್ರುನನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಕೊಲೆ ಸತ್ಯಾಸತ್ಯತೆ ತಿಳಿಯಲಿದೆ.

ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ಕಾಮಗಾರಿ ವೇಳೆ ಕಾರ್ಮಿಕ ಸಾವು

ಕೋಲಾರ, (ಸೆಪ್ಟೆಂಬರ್ 06): ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ನಾಗಶೆಟ್ಟಿಹಳ್ಳಿ ಬಳಿ ನಡೆಯುತ್ತಿರುವ ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ಕಾಮಗಾರಿ ವೇಳೆ ಕಾರ್ಮಿಕ ಸಾವನ್ನಪ್ಪಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಸುಜನ್​ ಘೋಷ್​(32) ಮೃತ ದುರ್ವೈವಿ. ಹೈವೇ ಕಾಮಗಾರಿ ವೇಳೆ ತಲೆಗೆ ಕಬ್ಬಿಣದ ರಾಡ್ ಬಡಿದು ಆರ್ಕಾನ್ಸ್ ಕಂಪನಿಯ ಕಾರ್ಮಿಕ ಸುಜನ್​ ಘೋಷ್​( ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬೇತಮಂಗಲ ಠಾಣಾ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​  ಮಾಡಿ

Published On - 1:03 pm, Wed, 6 September 23