AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕ್ಕಾಗಿ ಸೀನಿಯರ್​​ ವಿದ್ಯಾರ್ಥಿಗಳಿಂದ ಜೂನಿಯರ್​​ನ​​ ಕಿಡ್ನ್ಯಾಪ್​​: 50 ಸಾವಿರಕ್ಕೆ ಡಿಮ್ಯಾಂಡ್​​; ನಾಲ್ವರು ಅರೆಸ್ಟ್​

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. 50,000 ಹಣಕ್ಕಾಗಿ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಯನ್ನು ಅಪಹರಿಸಿದ್ದರು. ಮಡಿವಾಳ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ, ಐದು ಗಂಟೆಗಳೊಳಗೇ ಅಪಹೃತ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಪ್ರಸಿದ್ಧ ಮ್ಯಾನೇಜ್ಮೆಂಟ್ ಕಾಲೇಜಿನ ನಾಲ್ವರು ಸೀನಿಯರ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಹಾಗೂ ಸಂತ್ರಸ್ತ ವಿದ್ಯಾರ್ಥಿ ಒಂದೇ ಹಾಸ್ಟೆಲ್‌ನವರಾಗಿದ್ದರು ಎಂಬುದು ಗೊತ್ತಾಗಿದೆ.

ಹಣಕ್ಕಾಗಿ ಸೀನಿಯರ್​​ ವಿದ್ಯಾರ್ಥಿಗಳಿಂದ ಜೂನಿಯರ್​​ನ​​ ಕಿಡ್ನ್ಯಾಪ್​​: 50 ಸಾವಿರಕ್ಕೆ ಡಿಮ್ಯಾಂಡ್​​; ನಾಲ್ವರು ಅರೆಸ್ಟ್​
ಸಾಂದರ್ಭಿಕ ಚಿತ್ರImage Credit source: shutterstock.com
ಪ್ರಸನ್ನ ಹೆಗಡೆ
|

Updated on: Apr 13, 2026 | 12:49 PM

Share

ಬೆಂಗಳೂರು, ಏಪ್ರಿಲ್​​ 13: ಹಣಕ್ಕಾಗಿ ಜೂನಿಯರ್​​ ವಿದ್ಯಾರ್ಥಿಯೋರ್ವನನ್ನು ಸಿನೀಯರ್​​ಗಳು ಅಪಹರಣ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಪ್ರಕರಣ ಸಂಬಂಧ ಪ್ರಸಿದ್ಧ ಮ್ಯಾನೇಜ್ಮೆಂಟ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ಘಟನೆ ನಡೆದು ಐದು ಗಂಟೆಗಳ ಒಳಗಾಗಿಯೇ ಪೊಲೀಸರು ರಕ್ಷಿಸಿದ್ದು, ಪ್ರಕಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯನ್ನು ಒಡಿಶಾ ಮೂಲದ 19 ವರ್ಷದ ರಿಷಭ್ ಮೊಹಂತಿ ಎಂದು ಗುರುತಿಸಲಾಗಿದೆ. ಇನ್ನು ಕೇರಳದ ಶೌರ್ಯ, ಜಯನಗರದ ಸಯ್ಯದ್ ಬಿಲಾಲ್, ಬಿಹಾರದ ನಿಕುಂಜ್ ಹಾಗೂ ಮಹಾರಾಷ್ಟ್ರದ ಅದಿತಾ ರಾಕ್ಸಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರ ಪೈಕಿ ಮೂವರು ಮತ್ತು ಸಂತ್ರಸ್ತ ವಿದ್ಯಾರ್ಥಿ ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ಒಂದೇ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು ಎಂಬುದು ತಿಳಿದುಬಂದಿದೆ.

ರಿಷಭ್ ಮೊಹಂತಿ ತಮ್ಮಿಂದ ಹಣ ಸಾಲ ಪಡೆದಿದ್ದ. ಆದರೆ ಅದನ್ನು ಹಿಂದಿರುಗಿಸದ ಕಾರಣ ಆತನನ್ನು ಕಾರಲ್ಲಿ ಕರೆದುಕೊಂಡು ಹೋಗಿದ್ದೇವೆ ಎಂದು ಆರೋಪಿಗಳು ವಿಚಾರಣೆವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ರಿಷಭ್ ಈ ಆರೋಪಗಳನ್ನು ಅಲ್ಲಗಳೆದಿದ್ದು, ಯಾವುದೇ ಹಣವನ್ನು ಯಾರಿಂದಲೂ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ರಿಷಭ್‌ನ ಅಪಹರಿಸಿದ ಬಳಿಕ ಆರೋಪಿಗಳು 50,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ದುಡ್ಡು ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ರಿಷಭ್​​ ಸ್ನೇಹಿತನಿಗೆ ಕರೆ ಮಾಡಿ ಹಣದ ವ್ಯವಸ್ಥೆ ಮಾಡಲು ಕೇಳಿದ್ದ. ಮತ್ತೊಂದೆಡೆ ಅಪಹರಣ ನಡೆದ ಬಳಿಕ ರಿಷಭ್​​ ಸ್ನೇಹಿತನೋರ್ವ112ಕ್ಕೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳು ಅಪಹರಣಕ್ಕೆ ಬಳಸಿದ್ದ ಕಾರಿನ ನೋಂದಣಿ ವಿವರಗಳನ್ನು ನೀಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ! ತವರಿನಿಂದ ಪತ್ನಿ ಕರೆದೊಯ್ಯುವಾಗ ಅಡ್ಡ ಬಂದಿದ್ದಕ್ಕೆ ಭೀಕರವಾಗಿ ಕೊಂದ ವ್ಯಕ್ತಿ

ಮಾಹಿತಿ ಆಧಾರದಲ್ಲಿ ರಿಷಭ್​​ ಮತ್ತು ಆರೋಪಿಗಳ ಮೊಬೈಲ್​​ ಸಂಖ್ಯೆ ಪಡೆದಿದ್ದ ಪೊಲೀಸರು, ಟವರ್ ಲೊಕೇಶನ್ ಆಧರಿಸಿ ಎಲ್ಲರನ್ನು ಪತ್ತೆಹಚ್ಚಿದ್ದಾರೆ. ನಂತರ ಜಯನಗರದಲ್ಲಿರುವ ಮನೆಯಿಂದ ರಿಷಭ್​​ನ ರಕ್ಷಿಸಲಾಗಿದೆ. ಆರೋಪಿಗಳು ಮನೆಯಲ್ಲಿ ಜೂನಿಯರ್​​ ವಿದ್ಯಾರ್ಥಿಯನ್ನು ಬಂಧಿಸಿಟ್ಟು, ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಹಣಕ್ಕಾಗಿ ಸ್ನೇಹಿತರಿಗೆ ಕರೆ ಮಾಡಲು ಪೀಡಿಸಿದ್ದರು. ಆದರೆ ಆರೋಪಿಗಳು ಅವನಿಗೆ ಯಾವುದೇ ರೀತಿಯ ದೈಹಿಕ ಹಾನಿ ಮಾಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us