ಬೆಂಗಳೂರು, ಡಿ.28: ಹೊಸ ವರ್ಷಕ್ಕೆ(New Year) ಡ್ರಗ್ಸ್ ಮಾರಲು ಯತ್ನಿಸುತ್ತಿದ್ದ ಕೇರಳ ಮೂಲದ ಮೂವರು ಡ್ರಗ್ ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಬರೊಬ್ಬರಿ 28 ಲಕ್ಷ ರೂ. ಮೌಲ್ಯದ 170 MDMA ಕ್ರಿಸ್ಟಲ್, 25 MDMA ಎಕ್ಸಟೆಸಿ ಮಾತ್ರೆಗಳು, 200 LSD ಸ್ಟ್ರಿಪ್ಗಳು ಹಾಗೂ 3 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಈ ಕುರಿತು ಕೆಂಗೇರಿ ಹಾಗೂ ಅಮೃತಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ಪಟ್ಟಣದ ದೊಡ್ಡಬಳ್ಳಾಪುರ ರಸ್ತೆಯ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೋಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬ್ಯಾಗ್ನಲ್ಲಿ ತಂದು ಗಾಂಜಾ ಮಾರಾಟ ಮಾಡುವ ವೇಳೆ ಬಂಧಿಸಲಾಗಿದ್ದು, ದಾಳಿ ವೇಳೆ ಆರೋಪಿಗಳಿಂದ 2 ಕೆಜಿ 200 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ನಿತೀಶ್ ಕುಮಾರ್ (25) ಹಾಗೂ ವೆಂಕಟೇಶ್ (30) ಬಂಧಿತ ಆರೋಪಿಗಳು.
ಅಂದಾಜು 6 ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು. ಬಿಹಾರ ಮೂಲದವನಾದ ಆರೋಪಿ ನಿತೀಶ್ ಕುಮಾರ್, ದೇವನಹಳ್ಳಿಯಲ್ಲಿ ಶೆಡ್ ಹಾಕಿಕೊಂಡು ವಾಸ ಮಾಡುತ್ತಿದ್ದ. ಇನ್ನೋರ್ವ ಆರೋಪಿ ವೆಂಕಟೇಶ್ ದೇವನಹಳ್ಳಿ ಪಟ್ಟಣದ ಗಾಣಿಗರ ಪೇಟೆ ನಿವಾಸಿಯಾಗಿದ್ದು, ದೇವನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಪೋಲೀಸರು, ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ