ಬೆಂಗಳೂರು: 700ಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಿದ ಟ್ರಾಫಿಕ್ ಪೊಲೀಸ್

|

Updated on: Jan 01, 2024 | 10:34 AM

ಬೆಂಗಳೂರು ಸಂಚಾರ ಪೊಲೀಸರು ಡಿಸೆಂಬರ್ 21 ರಿಂದ ಡಿಸೆಂಬರ್ 30 ರವರೆಗೆ ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಸಿದ 27,280 ಕ್ಕೂ ಹೆಚ್ಚು ವಾಹನ ಚಾಲಕರು ಮತ್ತು ದ್ವಿಚಕ್ರ ವಾಹನ ಚಾಲಕರ ತಪಾಸಣೆ ವೇಳೆ 717 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು: 700ಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಿದ ಟ್ರಾಫಿಕ್ ಪೊಲೀಸ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜ.01: ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ನಗರದಾದ್ಯಂತ ಒಟ್ಟು 717 ಡ್ರಿಂಕ್ ಆ್ಯಂಡ್ ಡ್ರೈವ್ (Drink And Drive) ಪ್ರಕರಣಗಳನ್ನು ದಾಖಲಿಸಿದ್ದಾರೆ. ಡಿಸೆಂಬರ್ 21 ರಿಂದ, ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆದ ವಾಹನ ಚಾಲಕರು ಮತ್ತು ದ್ವಿಚಕ್ರ ವಾಹನ ಚಾಲಕರ ತಪಾಸಣೆ ವೇಳೆ 717 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ಪತ್ತೆಯಾಗಿವೆ.

ಸಂಚಾರ ಪೊಲೀಸರು ಬೆಂಗಳೂರಿನ ನಾಲ್ಕು ವಿಭಾಗಗಳಲ್ಲಿ ತಪಾಸಣೆ ನಡೆಸಿದ್ದು ಡಿಸೆಂಬರ್ 30 ರವರೆಗೆ 27,280 ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಿದ್ದಾರೆ. ಮತ್ತು ಹಲವೆಡೆ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದು ಕಂಡು ಬಂದಿದೆ. 30mg/100ml ಕಾನೂನುಬದ್ಧ ರಕ್ತದ ಆಲ್ಕೋಹಾಲ್ ಸಾಂದ್ರತೆಯ (BAC) ಮಿತಿಯನ್ನು ಉಲ್ಲಂಘಿಸಿದ ಒಟ್ಟು 717 ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ದಕ್ಷಿಣ ಭಾಗದ ಅಂಕಿಅಂಶ ಹೀಗಿದೆ

ದಕ್ಷಿಣ ವಿಭಾಗವೊಂದರಲ್ಲೇ ಡಿ.29ರವರೆಗೆ ಸಂಚಾರ ಪೊಲೀಸರು 4,381 ವಾಹನಗಳ ತಪಾಸಣೆ ನಡೆಸಿ 167 ಪಾನಮತ್ತ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸ್ ಮಿತಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸ್ ಮಿತಿಯಲ್ಲೇ 154 ವಾಹನಗಳನ್ನು ಪರಿಶೀಲಿಸಿದ್ದು 30 ಪ್ರಕರಣಗಳು ದಾಖಲಾಗಿವೆ . ತಲಘಟ್ಟಪುರ ಟ್ರಾಫಿಕ್ ಪೊಲೀಸ್ ಠಾಣೆ, ದಕ್ಷಿಣದ ಟ್ರಾಫಿಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 20 ಮತ್ತು 29 ರ ನಡುವೆ ಕೇವಲ 41 ವಾಹನಗಳನ್ನು ಪರಿಶೀಲಿಸಲಾಗಿದ್ದು, 18 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 44% ಚಾಲಕರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಗಿಫ್ಟ್: ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ

ಕಂಡಕ್ಟರ್, ಮಹಿಳೆಯರ ನಡುವೆ ಜಟಾಪಟಿ

ಶಕ್ತಿ ಯೋಜನೆ ಎಫೆಕ್ಟ್​ನಿಂದ ಬಸ್​​ ಕಂಡಕ್ಟರ್​ಗಳು ಹಲವೆಡೆ ಪೀಕಲಾಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಿಂದ ಟಿಕೆಟ್​ಪಡೆದಿದ್ದ ಮಹಿಳೆಯರು ಮಾರ್ಗಮಧ್ಯೆ ದಾಬಸ್ ಪೇಟೆಯಲ್ಲೇ ಇಳಿದಿದ್ರು. ಕೊರಟಗೆರೆಯ ಗೊರವನಹಳ್ಳಿ ಕ್ರಾಸ್ ಬಳಿಗೆ ಟಿಕೆಟ್ ಪಡೆದಿದ್ರು. ಅದ್ರೆ ಮಾರ್ಗ ಮಧ್ಯದಲ್ಲಿ ಮಗು ಆಳುತ್ತಿದೆ ಶೆಕೆ ಅಂತ ದಾಬಸ್ ಪೇಟೆಯಲ್ಲಿ ಇಳಿದಿದ್ರು. ಇದ್ರಿಂದ ಕಂಗಾಲಾದ ಕಂಡಕ್ಟರ್ ಮುಂದೆ ಚಕಿಂಗ್ ಬಂದ್ರೆ ನನ್ನ ಕೆಲಸಕ್ಕೆ ತೊಂದರೆ ಆಗುತ್ತೆ ಎಂದು ಹೇಳಿದ್ದಾರೆ. ಕಂಡಕ್ಟರ್ ಹಾಗೂ ಮಹಿಳೆಯರ ಹೈಡ್ರಾಮ ಸ್ಥಳೀಯ ಮೊಬೈಲ್ ಸೆರೆಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:00 am, Mon, 1 January 24