ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಗಬ್ಬೆದ ಚರ್ಚ್ ಸ್ಟ್ರೀಟ್ ರಸ್ತೆಯನ್ನು ಸ್ಚಚ್ಛಗೊಳಿಸಿದ ಪ್ರಜ್ಞಾವಂತ ನಾಗರಿಕರು
ಹೊಸ ವರ್ಷವನ್ನು ಯುವ ಪೀಳಿಗೆ ಹೇಗೆ ಆಚರಿಸುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ನಗರದ ಪ್ರಮುಖ ರಸ್ತೆ, ಬೀದಿಗಳಲ್ಲಿ ಜನ ಹಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಸಂಭ್ರಮಿಸಿದರು. ಕೆಲ ಅತಿರೇಕ ವರ್ತನೆಗಳು ಅಲ್ಲಲ್ಲಿ ಕಂಡುಬಂದಿದ್ದು ನಿಜ. ಹೆಚ್ಚುತ್ತಿರುವ ಕೋವಿಡ್ ಜೆಎನ್.1 ಸೋಂಕಿನ ಪ್ರಕರಣಗಳು ಪಾರ್ಟಿಗಿಳಿದವರನ್ನು ಧೃತಿಗೆಡಿಸಿರಲಿಲ್ಲ.
ಬೆಂಗಳೂರು: ನಮ್ಮೆಲ್ಲ ವೀಕ್ಷಕರಿಗೆ, ಚಂದಾದಾರರಿಗೆ ನೂತನ ವರ್ಷದ ಶುಭಾಶಯಗಳು (Happy New Year), 2023 ವರ್ಷವನ್ನು ಹಿಂದೆ ತಳ್ಳಿ 2024 ವರ್ಷದಲ್ಲಿ ಕಾಲಿಟ್ಟಿದ್ದೇವೆ, ಎಲ್ಲರಿಗೂ ಶುಭವಾಗಲಿ ಒಳ್ಳೆಯದಾಗಲಿ. ಬೆಂಗಳೂರಲ್ಲಿ ಹೊಸ ವರ್ಷವನ್ನು ಬಹಳ ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ಹೊಸ ವರ್ಷಾಚರಣೆಯ ದೃಶ್ಯಗಳನ್ನು ನಾವು ಕಳೆದ ರಾತ್ರಿ ತೋರಿಸಿದ್ದೇವೆ. ಬೆಂಗಳೂರಿನ ನಿವಾಸಿಗಳು (Bengaluru residents) ತಮಗೆ ಸರಿಯೆನಿಸಿದ ಹಾಗೆ 2024 ಅನ್ನು ಬರಮಾಡಿಕೊಂಡರು. ಯುವ ಪೀಳಿಗೆ (youth) ಹೊಸ ವರ್ಷವನ್ನು ಹೇಗೆ ಆಚರಿಸುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ನಗರದ ಪ್ರಮುಖ ರಸ್ತೆ, ಬೀದಿಗಳಲ್ಲಿ ಜನ ಹಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಸಂಭ್ರಮಿಸಿದರು. ಕೆಲ ಅತಿರೇಕ ವರ್ತನೆಗಳು ಅಲ್ಲಲ್ಲಿ ಕಂಡುಬಂದಿದ್ದು ನಿಜ. ಹೆಚ್ಚುತ್ತಿರುವ ಕೋವಿಡ್ ಜೆಎನ್.1 ಸೋಂಕಿನ ಪ್ರಕರಣಗಳು ಪಾರ್ಟಿಗಿಳಿದವರನ್ನು ಧೃತಿಗೆಡಿಸಿರಲಿಲ್ಲ. ಆದರೆ, ಜನ ಮೋಜು, ಮಸ್ತಿ ನಡೆಸಿದ ಸ್ಥಳಗಳು, ಮದ್ಯದ ಬಾಟಲಿ ಮತ್ತು ತಿಂದು ಬಿಟ್ಟ ತಿಂಡಿಗಳು ಮತ್ತು ಪೊಟ್ಟಣ ಹಾಗೂ ಱಪರ್ ಗಳಿಂದ ಗಬ್ಬೆದಿದ್ದು ಸತ್ಯ. ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಸಂಸ್ಥಯೊಂದರ ಉದ್ಯೋಗಿಗಳು ಖುದ್ದು ತಾವೇ ಬೀದಿಗಿಳಿದು ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಈ ವಿವೇಕವಂತ ಮತ್ತು ಪರಿಸರ ಹಾಗೂ ಸ್ವಚ್ಛತೆಯ ಬಗ್ಗೆ ಕಾಳಜಿಯುಳ್ಳ ಜನ ಉಳಿದ ನಗರವಾಸಿಗಳಿಗೆ ಮಾದರಿಯೆನಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ