ಹೊಸ ವರ್ಷ ಸಂಭ್ರಮ; ಮೊದಲ ದಿನವೇ ದೇವಸ್ಥಾನಗಳಲ್ಲಿ ಭಕ್ತರ ದಂಡು

ಹೊಸ ವರ್ಷ ಸಂಭ್ರಮ; ಮೊದಲ ದಿನವೇ ದೇವಸ್ಥಾನಗಳಲ್ಲಿ ಭಕ್ತರ ದಂಡು

TV9 Web
| Updated By: ಆಯೇಷಾ ಬಾನು

Updated on: Jan 01, 2024 | 9:11 AM

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಭಕ್ತ ಸಾಗರವೇ ಹರಿದು ಬರುತ್ತಿದೆ. ಮುಂಜಾನೆಯೇ ಭಕ್ತಿಯಿಂದ ದೇವಾಲಯಗಳಿಗೆ ಭೇಟಿ ನೀಡಿ ವರ್ಷದ ಮೊದಲ ದಿನವನ್ನು ಜನ ಪ್ರಾರಂಭಿಸುತ್ತಿದ್ದಾರೆ.

ಮೈಸೂರು, ಜ.01: ಇಂದು ನಾಡಿನೆಲ್ಲೆಡೆ ಹೊಸ ವರ್ಷದ (New Year) ಸಂಭ್ರಮ ಮನೆ ಮಾಡಿದೆ. ಹೀಗಾಗಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಭಕ್ತ ಸಾಗರವೇ ಹರಿದು ಬರುತ್ತಿದೆ. ಮುಂಜಾನೆಯೇ ಭಕ್ತಿಯಿಂದ ದೇವಾಲಯಗಳಿಗೆ ಭೇಟಿ ನೀಡಿ ವರ್ಷದ ಮೊದಲ ದಿನವನ್ನು ಜನ ಪ್ರಾರಂಭಿಸುತ್ತಿದ್ದಾರೆ. ಹೊಸ ವರ್ಷಕ್ಕೆ ಮೈಸೂರಿನ ವಿಜಯನಗರ ಲೇಔಟ್​​ಲ್ಲಿರುವ ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತ ಸಾಗರವೇ ಕಂಡು ಬಂದಿದೆ. ಇನ್ನು ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಾಡು ವಿತರಣೆ ಮಾಡಲಾಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ