ಟ್ರಾಫಿಕ್ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಸರ್ಕಾರ ಚಿಂತನೆ: ದುಪ್ಪಟ್ಟಾಗಲಿದೆ ಫೈನ್ ಮೊತ್ತ!
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಸಂಚಾರ ನಿಯಮ ಉಲ್ಲಂಘನೆಗಳ ದಂಡ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಫುಟ್‌ಪಾತ್ ಪಾರ್ಕಿಂಗ್, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಹಲವು ಉಲ್ಲಂಘನೆಗಳಿಗೆ ₹3 ಸಾವಿರದಿಂದ ₹5 ಸಾವಿರದವರೆಗೆ ದಂಡ ವಿಧಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ. ಯಾವ್ಯಾವ ಉಲ್ಲಂಘನೆಗೆ ಎಷ್ಟು ದಂಡ ತೆರಬೇಕಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 1: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆ ನಡುವೆ ಚರ್ಚೆ ನಡೆದಿದೆ. ಬುಧವಾರ ನಡೆದ ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆಯ ಜಂಟಿ ಸಭೆಯಲ್ಲಿ, ಸಂಚಾರ ನಿಯಮ ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ವಿಧಿಸುವ ಕುರಿತು ಚರ್ಚಿಸಲಾಗಿದೆ. ಸಚಿವ ಭೈರತಿ ಸುರೇಶ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಂಚಾರ ನಿಯಮಗಳ ಉಲ್ಲಂಘನೆಯೂ ಪ್ರಮುಖ ಕಾರಣವಾಗಿರುವ ಹಿನ್ನೆಲೆಯಲ್ಲಿ ದಂಡ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ.
ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ, ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ, ಫುಟ್‌ಪಾತ್ ಮೇಲೆ ಚಾಲನೆ, ಅನಧಿಕೃತ ಪಾರ್ಕಿಂಗ್, ನೋ ಪಾರ್ಕಿಂಗ್ ಉಲ್ಲಂಘನೆ, ಸಿಗ್ನಲ್ ಜಂಪ್ ಹಾಗೂ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗೆ ದಂಡ ಹೆಚ್ಚಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.
ಬೆಂಗಳೂರು ಟ್ರಾಫಿಕ್ ಫೈನ್: ಪ್ರಸ್ತಾವಿತ ದಂಡದ ವಿವರ
ಫುಟ್‌ಪಾತ್ ಪಾರ್ಕಿಂಗ್
- ಪ್ರಸ್ತುತ ಮೊದಲ ಉಲ್ಲಂಘನೆಗೆ: ₹500
- ಮರುಕಳಿಸಿದರೆ: ₹1,000
- ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
- ಮರುಕಳಿಸಿದರೆ: ₹5,000
ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ
- ಪ್ರಸ್ತುತ ಮೊದಲ ಉಲ್ಲಂಘನೆ: ₹500
- ಮರುಕಳಿಸಿದರೆ: ₹1,000
- ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
- ಮರುಕಳಿಸಿದರೆ: ₹5,000
ಫುಟ್‌ಪಾತ್ ಮೇಲೆ ಚಾಲನೆ
- ಪ್ರಸ್ತುತ ಮೊದಲ ಉಲ್ಲಂಘನೆ: ₹500
- ಮರುಕಳಿಸಿದರೆ: ₹1,000
- ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
- ಮರುಕಳಿಸಿದರೆ: ₹5,000
ಅನಧಿಕೃತ ಪಾರ್ಕಿಂಗ್
- ಪ್ರಸ್ತುತ ಮೊದಲ ಉಲ್ಲಂಘನೆ: ₹500
- ಮರುಕಳಿಸಿದರೆ: ₹1,000
- ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
- ಮರುಕಳಿಸಿದರೆ: ₹5,000
ನೋ ಪಾರ್ಕಿಂಗ್ ಉಲ್ಲಂಘನೆ
- ಪ್ರಸ್ತುತ ಮೊದಲ ಉಲ್ಲಂಘನೆ: ₹500
- ಮರುಕಳಿಸಿದರೆ: ₹1,000
- ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
- ಮರುಕಳಿಸಿದರೆ: ₹5,000
ಸಿಗ್ನಲ್ ಜಂಪ್
- ಪ್ರಸ್ತುತ ಮೊದಲ ಉಲ್ಲಂಘನೆ: ₹500
- ಮರುಕಳಿಸಿದರೆ: ₹1,000
- ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
- ಮರುಕಳಿಸಿದರೆ: ₹5,000
ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅಡ್ಡಿ
- ಪ್ರಸ್ತುತ ಮೊದಲ ಉಲ್ಲಂಘನೆ: ₹500
- ಮರುಕಳಿಸಿದರೆ: ₹1,000
- ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
- ಮರುಕಳಿಸಿದರೆ: ₹5,000
ಅಪಾಯಕಾರಿ ಚಾಲನೆಗೂ ದಂಡ ಹೆಚ್ಚಳ ಪ್ರಸ್ತಾವನೆ
ದ್ವಿಚಕ್ರ ವಾಹನ
- ಪ್ರಸ್ತುತ ಮೊದಲ ತಪ್ಪಿಗೆ: ₹1,500
- ಪ್ರಸ್ತಾವಿತ ದಂಡ: ₹3,000
ಲಘು ಮೋಟಾರು ವಾಹನ
- ಪ್ರಸ್ತುತ ಮೊದಲ ತಪ್ಪಿಗೆ: ₹3,000
- ಪ್ರಸ್ತಾವಿತ ದಂಡ: ₹5,000
ಇತರ / ಭಾರೀ ವಾಹನಗಳು
- ಪ್ರಸ್ತುತ ಮೊದಲ ತಪ್ಪಿಗೆ: ₹5,000
- ಪ್ರಸ್ತಾವಿತ ದಂಡ: ₹10,000
ಸಂಚಾರ ನಿಯಮ ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ವಿಧಿಸುವ ಪ್ರಸ್ತಾವನೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದರೂ, ದಂಡದ ಅನುಷ್ಠಾನದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Thu, 1 October 26




