ಬೆಂಗಳೂರು: ನಗರದಲ್ಲಿ ಬೇಕೆಂತಲೋ ಅಥವಾ ಅವಸರದಲ್ಲೋ ವಾಹನ ಚಾಲಕರು (Drivers) ಸಂಚಾರಿ ನಿಯವನ್ನು ಉಲ್ಲಂಘಿಸುತ್ತಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಚಾರಿ ಪೊಲೀಸರು (Traffic Police) ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಇವರಿಂದ ಸಂಚಾರಿ ಪೊಲೀಸರು ಸೂಕ್ತ ದಂಡ ವಸೂಲಿ ಮಾಡಿ, ನಿಯಮ ಉಲ್ಲಂಘಿಸಿದಂತೆ ಎಚ್ಚರಿಸುವುದರ ಜೊತೆಗೆ ಕ್ರಿಮಿನಲ್ ಕೇಸ್ ಕೂಡ ದಾಖಲಿಸುತ್ತಿದ್ದಾರೆ. ಹೌದು ಸಂಚಾರಿ ನಿಯಮ (Traffic Rules) ಉಲ್ಲಂಘಿಸಿದರೇ ಬರೀ ದಂಡ ಮಾತ್ರವಲ್ಲ ಜೊತೆಗೆ ಸಂಚಾರಿ ಪೊಲೀಸರು ಕ್ರಿಮಿನಲ್ ಕೇಸ್ (Criminal Case) ಕೂಡ ಹಾಕುತ್ತಿದ್ದಾರೆ.
ಒನ್ ವೇಯಲ್ಲಿ ಸಂಚರಿಸುವುದು, ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಿದರೇ ಸಂಚಾರಿ ಪೊಲೀಸರು ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿ ವಾಹನದ ಮೇಲೆ ಮತ್ತು ಚಾಲಕನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ. ಒಮ್ಮೆ ಎಫ್ಐಆರ್ ದಾಖಲಾದರೇ ನಿಮ್ಮ ವಾಹನ ಸೀಜ್ ಮಾಡಲಾಗುತ್ತದೆ. ಸೀಜ್ ಆದ ವಾಹನವನ್ನು ನ್ಯಾಯಾಲಾಯದ ಅನುಮತಿ ಪಡೆದು ಬಿಡಿಸಿಕೊಳ್ಳಬೇಕು.
ಇದನ್ನೂ ಓದಿ: ಕಟ್ಟಿಂಗ್ಗೆ ಹೋಗುತ್ತೀನೆಂದು ಬಟ್ಟೆ ಸಮೇತ ಮನೆ ಬಿಟ್ಟ ಬಾಲಕ; ಜ್ಯೋತಿಷಿ ಹೇಳಿದ ಸ್ಥಳದಲ್ಲಿ ಪೋಷಕರ, ಪೊಲೀಸರ ಹುಡುಕಾಟ
ಒನ್ ವೇಯಲ್ಲಿ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಈ ಹಿನ್ನಲೆ ಒನ್ ವೇ ಮತ್ತು ಫುಟ್ಬಾತ್ ಮೇಲೆ ವಾಹಾನ ಚಾಲನೆ ಹಾಗೂ ನಡು ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಿದರೇ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:13 am, Tue, 6 June 23