ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಸದ್ಯದಲ್ಲೇ ಸಿಗಲಿದೆ ಮುಕ್ತಿ; ಇದೇ ಮಾರ್ಚ್​ನಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ರಿಂಗ್ ರೋಡ್ ಯೋಜನೆ

|

Updated on: Mar 08, 2024 | 9:44 AM

Bengaluru Traffic Jam: ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊಸಕೋಟೆವರೆಗೆ ವಿಸ್ತರಿಸಿರುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯ ಉದ್ಘಾಟನಾ ಹಂತಕ್ಕೆ ತಲುಪಿದೆ. ಈ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯು ಮೂರು ರಾಷ್ಟ್ರೀಯ ಹೆದ್ದಾರಿಗಳಾದ ಎನ್‌ಹೆಚ್ 48 (ತುಮಕೂರು ರಸ್ತೆ), ಎನ್‌ಹೆಚ್ 44 (ಬಳ್ಳಾರಿ ರಸ್ತೆ), ಮತ್ತು ಎನ್‌ಎಚ್ 75 (ಬೆಂಗಳೂರು-ಕೋಲಾರ ರಸ್ತೆ)ಗಳನ್ನು ಪರಸ್ಪರ ಸಂಪರ್ಕಿಸುವುದರಿಂದ ಟ್ರಾಫಿಕ್ ಜಾಮ್ ಶೀಘ್ರದಲ್ಲೇ ಕಡಿಮೆಯಾಗಲಿದೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಸದ್ಯದಲ್ಲೇ ಸಿಗಲಿದೆ ಮುಕ್ತಿ; ಇದೇ ಮಾರ್ಚ್​ನಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ರಿಂಗ್ ರೋಡ್ ಯೋಜನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್​.08: ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊಸಕೋಟೆವರೆಗೆ ವಿಸ್ತರಿಸಿರುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆಯ ಉದ್ಘಾಟನಾ ಹಂತಕ್ಕೆ ತಲುಪಿದೆ. ಇದೇ 2024 ಮಾರ್ಚ್ ತಿಂಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗುವುದರಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಶೀಘ್ರದಲ್ಲೇ ಕೊನೆಗೊಳ್ಳಲಿದೆ.

ಈ ಯೋಜನೆಯು ಮೂರು ರಾಷ್ಟ್ರೀಯ ಹೆದ್ದಾರಿಗಳಾದ ಎನ್‌ಹೆಚ್ 48 (ತುಮಕೂರು ರಸ್ತೆ), ಎನ್‌ಹೆಚ್ 44 (ಬಳ್ಳಾರಿ ರಸ್ತೆ), ಮತ್ತು ಎನ್‌ಹೆಚ್ 75 (ಬೆಂಗಳೂರು-ಕೋಲಾರ ರಸ್ತೆ)ಗಳನ್ನು ಪರಸ್ಪರ ಸಂಪರ್ಕಿಸುವುದರಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಶೀಘ್ರದಲ್ಲೇ ಕಡಿಮೆಯಾಗಲಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನವೆಂಬರ್‌ನಲ್ಲಿ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ನಡುವಿನ STRR ನ 34-ಕಿಲೋಮೀಟರ್ ಉದ್ದದ ಮಾರ್ಗವನ್ನು ಉದ್ಘಾಟಿಸಿತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಲ್ಲೂರು ಗ್ರಾಮದಲ್ಲಿ ಟೋಲ್ ಸಂಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಸದ್ಯ ಈಗ ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ನಿರ್ಮಾಣ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಇದಲ್ಲದೆ, ದೊಡ್ಡಬಳ್ಳಾಪುರ ಬಳಿ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಮತ್ತು ದೊಡ್ಡಬೆಳವಂಗಲ ಬಳಿ ಅಂಡರ್‌ಪಾಸ್ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯವಾಗಲಿದೆ.

ಇದನ್ನೂ ಓದಿ: Driverless Metro: ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಟ್ರಯಲ್ ರನ್ ಆರಂಭ

ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ನಡುವಿನ ಬೆಂಗಳೂರು ರಸ್ತೆ ಯೋಜನೆ: ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ನಡುವಿನ ರಸ್ತೆ ಯೋಜನೆಯ ಒಂದು ಭಾಗವು ಸಾರ್ವಜನಿಕರಿಗೆ ಮುಕ್ತವಾಗಿದ್ದು ವಾಹನ ಸವಾರರಿಗೆ ಸಹಾಯಕವಾಗಿದೆ. ಇನ್ನು ಸಂಪೂರ್ಣ 80 ಕಿಲೋಮೀಟರ್ ಉದ್ದದ ರಸ್ತೆ ಪೂರ್ಣಗೊಂಡ ನಂತರ, ತುಮಕೂರು ರಸ್ತೆಯಿಂದ ನಗರಕ್ಕೆ ಪ್ರವೇಶಿಸುವ ಟ್ರಕ್‌ಗಳ ಒಳಹರಿವು ಶೇಕಡಾ 40-50 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.

ಪ್ರಮುಖ ಹೆದ್ದಾರಿಗಳಿಗೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಸಂಪರ್ಕವು ನಗರದಿಂದ ಟ್ರಕ್ ದಟ್ಟಣೆಯನ್ನು ಬೇರೆಡೆಗೆ ತಿರುಗಿಸುತ್ತದೆ, ಇದು ನಗರ ಮಿತಿಯಲ್ಲಿ ದಟ್ಟಣೆಯನ್ನು ನಿವಾರಿಸುತ್ತದೆ. ಹೊಸಕೋಟೆ ಬಳಿಯ ಅಂತಿಮ 4-ಕಿಲೋಮೀಟರ್ ಹಂತ ಮತ್ತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯೊಂದಿಗೆ ಎಸ್‌ಟಿಆರ್‌ಆರ್‌ನ ಏಕೀಕರಣವು ಪೂರ್ಣಗೊಂಡಿದೆ. ಮತ್ತು ಇದು ಸಾರ್ವಜನಿಕರಿಗೂ ತೆರೆಯುತ್ತದೆ ಎಂಬುದನ್ನು ಗಮನಿಸಬೇಕು. ಇದಲ್ಲದೆ, ಈ ಪ್ರಮುಖ ರಸ್ತೆ ಯೋಜನೆಯ ಉದ್ಘಾಟನೆಯು ಮುಂಬರುವ ಲೋಕಸಭೆ ಚುನಾವಣೆಗಿಂತ ಮುಂಚಿತವಾಗಿ ಉದ್ಘಾಟನೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ