
ಬೆಂಗಳೂರು, ಫೆಬ್ರವರಿ 27: ಬೆಂಗಳೂರು ನಗರದ (Bengaluru City) ಹಲವೆಡೆ ಇಂದು (ಮಂಗಳವಾರ) ಮತ್ತು ನಾಳೆ ನೀರು ಪೂರೈಕೆಯಲ್ಲಿ (Water Supply) ವ್ಯತ್ಯಯವಾಗಲಿದೆ. ಮಳೆ ಕೊರತೆ ಮತ್ತು ತಮಿಳುನಾಡಿಗೆ ನೀರು ಬಿಡಬೇಕಾಗಿ ಬಂದ ಕಾರಣ ಕರ್ನಾಟಕವು ಜಲ ಸಂಕಷ್ಟ ಎದುರಿಸುತ್ತಿದ್ದು, ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಲ್ಲಿ ನೀರಿಗೆ ಸಂಕಷ್ಟ ಎದುರಾಗಿದೆ. 1.3 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ ನೀರಿನ ಬೇಡಿಕೆ ಪೂರೈಸಲು ಆಡಳಿತವು ಪರದಾಡುವಂತಾಗಿದೆ. ಈ ಸಂದರ್ಭದಲ್ಲೇ ಎರಡು ದಿನ ಸಿಲಿಕಾನ್ ಸಿಟಿಯ ವಿವಿಧ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಗತ್ಯ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಲು ಮತ್ತು ಮೀಟರ್‌ಗಳನ್ನು ಸ್ಥಾಪಿಸಲು ನೀರು ಪೂರೈಕೆ ತಾತ್ಕಾಲಿತ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಫೆಬ್ರವರಿ 27 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 28 ರಂದು ಬೆಳಿಗ್ಗೆ 6 ರವರೆಗೆ ನೀರು ಪೂರೈಕೆ ಸ್ಥಗಿತಗೊಂಡಿರಲಿದೆ.
ಬಿಹೆಚ್ಇಎಲ್ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ, ನಂದಿನಿ ಲೇಔಟ್, ಸಾಕಮ್ಮ ಲೇಔಟ್, ನರಸಿಂಹ ಸ್ವಾಮಿ ಲೇಔಟ್, ಮುನೇಶ್ವರ ನಗರ, ಜ್ಞಾನ ಜ್ಯೋತಿ ನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್ಜಿಇಎಫ್ ಲೇಔಟ್, ಐಟಿಐ ಲೇಔಟ್‌ನ ಭಾಗ, 1ನೇ ಮತ್ತು 2ನೇ ಹಂತದ ರೈಲ್ವೆ ಲೇಔಟ್, ಆರ್ಹೆಚ್ಬಿಸಿಎಸ್ ಲೇಔಟ್ 1 ನೇ ಮತ್ತು 2 ನೇ ಹಂತ, ಬೈರವೇಶ್ವರನಗರ, ಸುಂಕದಕಟ್ಟೆ, ಜಯ ಲಕ್ಷ್ಮಮ್ಮ ಲೇಔಟ್, ಕೆಬ್ಬೆಹಳ್ಳ, ಚಂದನ ಲೇಔಟ್, ಚಂದ್ರಶೇಖರ ಬಡಾವಣೆ, ಭೂವಿಜ್ಞಾನ ಲೇಔಟ್, ನರಸಾಪುರ, ಕಂದಾಯ ಬಡಾವಣೆ, ಮುಳಕಟ್ಟಮ್ಮ ಬಡಾವಣೆ, ಪಾಪರೆಡ್ಡಿಪಾಳ್ಯ ಭಾಗ, ಬಿಇಎಲ್ 1ನೇ ಮತ್ತು 2ನೇ ಹಂತ, ಬಿಳೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್ ಈ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ದಾಸರಹಳ್ಳಿ ವಲಯ ಮತ್ತು ಆರ್ ಆರ್ ನಗರ ವಲಯದ ಭಾಗಗಳು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜಲಕ್ಷಾಮ; ನೀರಿಲ್ಲದೆ ಕಂಗಾಲಾದ ಕೆಂಗೇರಿಯ ಲಗ್ಜುರಿ ಅಪಾರ್ಟ್ಮೆಂಟ್ನ 2,800 ಕುಟುಂಬಗಳು
ಎ ನಾರಾಯಣಪುರದ ಭಾಗಗಳು, ಉದಯ ನಗರ, ಆಂಧ್ರ ಕಾಲೋನಿ, ವಿಎಸ್ಆರ್ ಲೇಔಟ್, ಇಂದಿರಾ ಗಾಂಧಿ ಸ್ಟ್ರೀಟ್, ಜ್ಯೋತಿ ನಗರ, ದರ್ಗಮಹಾಲ್, ಸಾಕಮ್ಮ ಲೇಔಟ್, ವಿಜ್ಞಾನ ನಗರ ಸೇವಾ ಠಾಣೆ ವ್ಯಾಪ್ತಿಯ ವಿಜ್ಞಾನ ನಗರ, ಅಕ್ಷಯನಗರ, ಎಂಇಜಿ ಲೇಔಟ್, ರಮೇಶ್ ನಗರ, ವೀರಭದ್ರ ನಗರ, ಜಗದೀಶ್ ನಗರ ಸೇವಾ ಠಾಣೆ ವ್ಯಾಪ್ತಿಯ ಶಿವ ಶಕ್ತಿ ಕಾಲೋನಿ, ದೊಡ್ಡಾನೆಕುಂದಿ ಮತ್ತು ಮಾರತಳ್ಳಿ ಸರ್ವೀಸ್ ಸ್ಟೇಷನ್ಪ್ರ ದೇಶಗಳು, ನಲ್ಲೂರು ಪುರಂ, ರಮೇಶ್ ನಗರ, ರೆಡ್ಡಿ ಪಾಳ್ಯ, ವಿಭೂತಿಪುರ, ಅನ್ನಸಂದ್ರ ಪಾಳ್ಯ, ಎಲ್ಬಿಎಸ್ ನಗರ ಈ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ