ಬೆಂಗಳೂರಿನಲ್ಲಿ ಜಲಕ್ಷಾಮ; ನೀರಿಲ್ಲದೆ ಕಂಗಾಲಾದ ಕೆಂಗೇರಿಯ ಲಗ್ಜುರಿ ಅಪಾರ್ಟ್ಮೆಂಟ್​ನ 2,800 ಕುಟುಂಬಗಳು

ನಗರದ ದೊಡ್ಡಬೆಲೆ ಗ್ರಾಮದಲ್ಲಿರುವ ಕೆಂಗೇರಿ ಹೋಬಳಿಯ ಲಗ್ಜುರಿ ಅಪಾರ್ಟ್ಮೆಂಟ್​ನಲ್ಲಿ ಕಳೆದ 10 ದಿನಗಳಿಂದ ನೀರು ಬರ್ತಿಲ್ಲ. ಇದರಿಂದ 2,800 ಕುಟುಂಬಗಳು ಕಂಗಾಲಾಗಿವೆ. ಒಂದು ಟ್ಯಾಂಕರ್​ ನೀರಿಗಾಗಿ 5 ಸಾವಿರ ರೂ ಕೊಟ್ಟರೂ ನೀರು ಸಿಗುತ್ತಿಲ್ಲ. ಹೀಗಾಗಿ ನಿವಾಸಿಗಳು ಅಪಾರ್ಟ್ಮೆಂಟ್ ಮುಂದೆ ಧರಣಿ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಜಲಕ್ಷಾಮ; ನೀರಿಲ್ಲದೆ ಕಂಗಾಲಾದ ಕೆಂಗೇರಿಯ ಲಗ್ಜುರಿ ಅಪಾರ್ಟ್ಮೆಂಟ್​ನ 2,800 ಕುಟುಂಬಗಳು
ಅಪಾರ್ಟ್ಮೆಂಟ್
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Feb 27, 2024 | 11:25 AM

ಬೆಂಗಳೂರು, ಫೆ.27: ಬೇಸಿಗೆ (Summer) ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ (Drinking Water Crisis). ಬೋರ್ ವೆಲ್​ಗಳು ಬತ್ತಿಹೋಗಿವೆ. ಬರ್ತಿದ್ದ ಅಲ್ಪಸ್ವಲ್ಪ ನೀರು ಕೂಡ ಮರೆಯಾಗಿದೆ. ನಗರದ ದೊಡ್ಡಬೆಲೆ ಗ್ರಾಮದಲ್ಲಿರುವ ಕೆಂಗೇರಿ ಹೋಬಳಿಯ ಲಗ್ಜುರಿ ಅಪಾರ್ಟ್ಮೆಂಟ್​ನಲ್ಲಿ ಜಲಕ್ಷಾಮ ಎದುರಾಗಿದ್ದು ಸ್ನಾನಕ್ಕೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಳೆದ 10 ದಿನದಿಂದ‌ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. 5 ಸಾವಿರ ರೂಪಾಯಿ ಕೊಟ್ಟು ಒಂದು ಟ್ಯಾಂಕರ್​ ನೀರನ್ನು ಖರೀದಿವಂತಾಗಿದೆ. ಹೀಗಾಗಿ ನಿವಾಸಿಗಳು ಅಪಾರ್ಟ್ಮೆಂಟ್ ಮುಂದೆ ಧರಣಿ ನಡೆಸುತ್ತಿದ್ದಾರೆ.

ಪ್ರಾವಿಡೆಂಟ್ ಸಂವತ್ ಅಪಾರ್ಟ್ಮೆಂಟ್​ನಲ್ಲಿ ಕಳೆದ ಕೆಲ ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಈ ಅಪಾರ್ಟ್ಮೆಂಟ್​ನಲ್ಲಿ 2,800 ಕುಟುಂಬಗಳು ಪರದಾಡುತ್ತಿದ್ದು ಒಂದು ಟ್ಯಾಂಕರ್​ಗೆ 5000 ರೂಪಾಯಿ ಕೊಟ್ಟರೂ ಸರಿಯಾಗಿ ನೀರು ಸಿಗುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಪ್ರತಿದಿನ ನೀರಿಗಾಗಿ ಒದ್ದಾಡುತ್ತಿದ್ದಾರೆ. ಈ ಕುರಿತಾಗಿ ಬಿಲ್ಡರ್ ಹಾಗೂ ಅಸೋಸಿಯೇಷನ್​ಗಳಿಗೆ ಹೇಳಿದರೂ ಯಾರು ತಲೆಕೆಡಿಸಿಕೊಳ್ತಿಲ್ಲ. ಹೀಗಾಗಿ ಇಂದು ಅಪಾರ್ಟ್ಮೆಂಟ್ ಎದುರು ನಿವಾಸಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಅಪಾರ್ಟ್ಮೆಂಟ್ ನಿವಾಸಿಗಳು ನೀರಿಲ್ಲದೇ ಎಸ್​ಟಿಪಿ ಬಳಕೆ ಮಾಡ್ತಿದ್ದಾರೆ. ಸಧ್ಯ ಎಸ್​ಟಿಪಿ ನೀರನ್ನ ಬಳಕೆ ಮಾಡಿ ಆರೋಗ್ಯದ ಸಮಸ್ಯೆ ಎದುರಾಗಿದೆ. ಆದ ಕಾರಣ ನಮಗೆ ನೀರಿನ ವ್ಯವಸ್ಥೆ ಮಾಡ್ಕೊಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಾತಾವರಣದಲ್ಲಿ ಏರುಪೇರು; ಮಕ್ಕಳು, ವಯಸ್ಕರು, ವಯೋ ವೃದ್ಧರ ಆರೋಗ್ಯದ ಮೇಲೆ ಎಫೆಕ್ಟ್, ವೈದ್ಯರ ಈ ಸಲಹೆ ಪಾಲಿಸಿ

ನೀರಿಲ್ಲದೇ ಕಂಗಾಲಾದ 808 ಪ್ಲಾಟ್ ಜನರು

ಮತ್ತೊಂದೆಡೆ ಕೆಂಗೇರಿಯಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್‌ ನಿರ್ಮಿಸಿರೋ KHB ಪ್ಲಾಟಿನಂ ಅಪಾರ್ಟ್ ಮೆಂಟ್ ನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, 3 ಸಾವಿರ ನಿವಾಸಿಗಳು ನೀರಿಲ್ಲದೇ ಕಂಗಾಲಾಗಿದ್ದಾರೆ. ಒಣಗಿ ನಿಂತ ಗಿಡಗಳು, ನೀರಿಲ್ಲದೇ ಗಲೀಜಾಗಿರೋ ಸ್ವಿಮ್ಮಿಂಗ್ ಪೂಲ್, ಅರೆಬರೆ ನೀರಲ್ಲೇ ನಿತ್ಯ ಜೀವನ ನಡೆಸಿ ಸುಸ್ತಾದ ಜನರು, ಜಲಮಂಡಳಿ, ಗೃಹಮಂಡಳಿ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.

ಕರ್ನಾಟಕ ಗೃಹಮಂಡಳಿ 808 ಪ್ಲಾಟ್ ಇರೋ ಈ ಅಪಾರ್ಟ್ ಮೆಂಟ್ ನಿರ್ಮಿಸಿದ್ದು, ಇದರಲ್ಲಿ 3 ಸಾವಿರ ಜನರು ವಾಸಿಸುತ್ತಿದ್ದಾರೆ, ನೀರಿನ ಮೂಲವಾಗಿದ್ದ 4 ಬೋರ್ ವೆಲ್ ಬತ್ತಿಹೋಗಿದ್ದು, ಪ್ರತಿನಿತ್ಯ 50 ರಿಂದ 100 ಟ್ಯಾಂಕರ್ ನೀರು ತರಿಸಿದ್ರೂ ದಿನಕ್ಕೆ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ಮಾತ್ರ ನೀರು ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇರೋ ನೀರನ್ನೇ ಮಿತವಾಗಿ ಬಳಸುವಂತೆ ನೋಟಿಸ್ ಅಂಟಿಸಿದ್ದು, ಅಲ್ಪಸ್ವಲ್ಪ ನೀರಲ್ಲೇ ಬದುಕು ದೂಡುತ್ತಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಜನಸ್ಪಂದನದಲ್ಲೂ ಮನವಿ ಸಲ್ಲಿಸಿದ್ದ ನಿವಾಸಿಗಳು ಯಾವುದೇ ಸ್ಪಂದನೆ ಸಿಗದಿರೋದಕ್ಕೆ ಮತ್ತಷ್ಟು ಹೈರಾಣಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ