ವಾತಾವರಣದಲ್ಲಿ ಏರುಪೇರು; ಮಕ್ಕಳು, ವಯಸ್ಕರು, ವಯೋ ವೃದ್ಧರ ಆರೋಗ್ಯದ ಮೇಲೆ ಎಫೆಕ್ಟ್, ವೈದ್ಯರ ಈ ಸಲಹೆ ಪಾಲಿಸಿ
ಚಳಿಗಾಲ ಮುಗಿದಿಲ್ಲ, ಬೇಸಿಗೆ ಆರಂಭಕ್ಕೂ ಮುನ್ನ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ವಾತಾವರಣದಲ್ಲಿ ಆದ ಏರುಪೇರಿನಿಂದ ಮಕ್ಕಳು, ವಯಸ್ಕರು ಸೇರಿದಂತೆ ವಯೋ ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜ್ವರ, ಕೆಮ್ಮು, ಗಂಟಲು ನೋವು ಹಾಗೂ ನೆಗಡಿಯಿಂದ ಜನರು ಬಳಲುತ್ತಿದ್ದಾರೆ. ಉಸಿರಾಟ ಸಮಸ್ಯೆಯಂತಹ ತೊಂದರೆಗಳು ಹೆಚ್ಚಾಗಿವೆ.
ಬೆಂಗಳೂರು, ಫೆ.27: ಚಳಿಗಾಲವೇ ಕಳೆದಿಲ್ಲ ಈಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆ (Summer) ಆಗಮನ ಆಗಿದೆ. ಇದರಿಂದಾಗಿ ಮಕ್ಕಳು, ವಯಸ್ಕರು ಹಾಗೂ ವಯೋ ವೃದ್ಧರ ಆರೋಗ್ಯದಲ್ಲಿ (Health Issue) ಎಫೆಕ್ಟ್ ಆಗುತ್ತಿದೆ. ಜ್ವರ, ಕೆಮ್ಮು, ಗಂಟಲು ನೋವು ಹಾಗೂ ನೆಗಡಿಯಿಂದ ಜನರು ಬಳಲುತ್ತಿದ್ದಾರೆ. ಮಕ್ಕಳು, ವಯೋವೃದ್ಧರಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಿದ್ದು ಮಕ್ಕಳಲ್ಲಿ ಪದೇ ಪದೇ ಶೀತ, ಕೆಮ್ಮು, ಜ್ವರ ಕಾಡುತ್ತಿದೆ. ಇನ್ನೊಂದೆಡೆಗೆ ಮಕ್ಕಳಲ್ಲಿ ಹಾಗೂ ವಯೋ ವೃದ್ಧರಲ್ಲಿ ನ್ಯುಮೋನಿಯಾ (Pneumonia) ಕಂಡು ಬರುತ್ತಿದೆ.
ಮಕ್ಕಳಲ್ಲಿ ಕಂಡು ಬರುತ್ತಿರುವ ರೋಗಗಳ ಬಗ್ಗೆ ಮಕ್ಕಳ ತಜ್ಞರನ್ನ ಕೇಳಿದರೆ, ಚಳಿಗಾಲ ಮುಗಿದು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮಕ್ಕಳಿಗೆ ನೀರಿನ ಅಭಾವ ಉಂಟಾಗುವುದರಿಂದ ಅತಿಸಾರ, ಬೇಧಿ ಹೆಚ್ಚಾಗುತ್ತದೆ. ರಸ್ತೆ ಬದಿಯ ತಿಂಡಿ-ತಿನಿಸು, ಹಣ್ಣು – ಹಂಪಲುಗಳ ಮೇಲೆ ಬ್ಯಾಕ್ಟೇರಿಯಾ, ವೈರಸ್ಗಳು ಕುಂತಿರುತ್ತವೆ ಮಕ್ಕಳು ಅದನ್ನು ತಿನ್ನುತ್ತಾರೆ. ಈಗ ಕೆಮ್ಮು, ನೆಗಡಿ, ಜ್ವರ ಬರುತ್ತಿದೆ ಹಾಗೂ ಗಂಟಲು ನೋವು ಬರುತ್ತೆ. ವೈರಲ್ ಅಥವಾ ಬ್ಯಾಕ್ಟೇರಿಯಾದಿಂದ ಗಂಟಲು ನೋವು ಬರಬಹುದು ಈ ಬಗ್ಗೆ ತಜ್ಞ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಕೊಡಿಸಬೇಕು. ಹಾಗೂ ನ್ಯುಮೋನಿಯಾ ತಡೆಗಟ್ಟಲು ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಬೇಕು. ಲಸಿಕೆ ಹಾಕದೇ ಇದ್ದರೆ ನ್ಯುಮೋನಿಯಾ ಬರುತ್ತೆ ಅಂತ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾವಗಡ ಮತ್ತು ಕಲಬುರಗಿಯಲ್ಲಿ ಗ್ರೀನ್ ಹೈಡ್ರೋಜನ್ ಸ್ಥಾವರ ಸ್ಥಾಪನೆ
ಇನ್ನೂ ಹಿರಿಯರು, ವಯಸ್ಕರಲ್ಲಿ ಗಂಟಲು ನೋವಿಗೆ ಕಾರಣ, ಚಳಿಗಾಲ ಕಳೆದು ಬೇಸಿಗೆ ಆರಂಭವಾಗುವುದರಿಂದ ಧೂಳಿನ ಅಂಶ ಹೆಚ್ಚಾಗುವುದರಿಂದ ಗಂಟಲು ನೋವು, ಜ್ವರ, ಕೆಮ್ಮು ಹಾಗೂ ನೆಗಡಿ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಕಾಯಿಲೆ ಹಾಗೂ ಹೂವುಗಳು ಅರಳುವ ಕಾಲ, ಬಿಸಿಲಿನಿಂದ ಧೂಳು ಹಾಗೂ ಹೊಗೆ ಕಾರಣದಿಂದಾಗಿ ಅಸ್ತಮಾ ಕಂಡು ಬರುತ್ತದೆ. ಇನ್ನೂ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದ್ದಂತೆ ಹಾಗೂ ಚಳಿಗಾಲ ಆರಂಭ ಕಾಲದಲ್ಲಿ ನ್ಯುಮೋನಿಯಾ ಹೆಚ್ಚಾಗಿ ಕಂಡು ಬರುತ್ತದೆ ಹೀಗಾಗಿ ಅಷ್ಟೊಂದು ಜಟೀಲ ಸಮಸ್ಯೆ ಇಲ್ಲ. ಇನ್ನೂ ವಯಸ್ಸಾದವರು ಧೂಳಿಗೆ ಹೋಗದೇ ಇರುವುದು, ಹೊಗೆಯಿಂದ ದೂರವಿರುವುದು ಹಾಗೂ ಗಂಟಲು ನೋವು, ನೆಗಡಿ ಶೀತ ಆದರೆ ಕೂಡಲೆ ವೈದ್ಯರನ್ನ ಸಂಪರ್ಕಿಸಿದರೆ ಅಸ್ತಮಾ, ನ್ಯುಮೋನಿಯಾ ತಡೆಯಬಹುದು ಹಾಗೂ ಅಸ್ತಮಾ ಹಾಗೂ ಸಿಒಪಿಡಿ ಇರುವಂತಹವರು ಆದಷ್ಟು ಧೂಳಿಗೆ ಹೋಗಬಾರದು, ಸಕಾಲಕ್ಕೆ ಔಷಧಿ ತಗೆದುಕೊಳ್ಳಬೇಕು, ಕಾಯಿಸಿ ಆರಿಸಿದ ನೀರು ಕುಡಿಯುವಂತೆ ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಒಟ್ಟಿನಲ್ಲಿ ವಾತಾವರಣದಲ್ಲಿ ಆದ ಬದಲಾವಣೆಯಿಂದ ರೋಗಗಳು ಕಂಡು ಬರುತ್ತಿವೆ. ರೋಗ ಲಕ್ಷಣಗಳು ಕಂಡು ಬರುತ್ತಿದ್ದಂತೆ ನಿರ್ಲಕ್ಷಿಸದೇ ಆದಷ್ಟು ಬೇಗ ತಜ್ಞ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ