ಪಿಸ್ತೂಲ್ ಮಿಸ್ ಫೈರ್: ಪ್ರಿಯಕರನ ಗನ್​​ನಿಂದ ಪ್ರೇಯಸಿಯ ಹೊಟ್ಟೆಗೆ ಹೊಕ್ಕಿದ ಬುಲೆಟ್

ಮಿಸ್ ಫೈರಿಂಗ್ ಘಟನೆಯಲ್ಲಿ ಬೆಂಗಳೂರಿನ ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಯುವತಿ, ಪ್ರಿಯಕರನ ಗನ್ ಪರಿಶೀಲಿಸುವಾಗ ಮಿಸ್​​ ಫೈರಿಂಗ್​ ಆಗಿದೆ. ಗುಂಡು ತಗುಲಿದ ಪರಿಣಾಮ ಯುವತಿಯ ಒಂದು ಕಿಡ್ನಿಯನ್ನು ತೆಗೆಯಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಿಸ್ತೂಲ್ ಮಿಸ್ ಫೈರ್: ಪ್ರಿಯಕರನ ಗನ್​​ನಿಂದ ಪ್ರೇಯಸಿಯ ಹೊಟ್ಟೆಗೆ ಹೊಕ್ಕಿದ ಬುಲೆಟ್
ಬಂದೂಕು (ಸಾಂದರ್ಭಿಕ ಚಿತ್ರ)
Edited By: ವಿವೇಕ ಬಿರಾದಾರ

Updated on: Jul 30, 2025 | 3:37 PM

ಬೆಂಗಳೂರು, ಜುಲೈ 30: ಮಿಸ್​ ಫೈರಿಂಗ್ (Miss Firing)​​​ ಆಗಿ ಓರ್ವ ಯುವತಿಯ ಹೊಟ್ಟೆಗೆ ಗುಂಡು ತಗುಲಿದೆ. ಬೆಂಗಳೂರಿನ (Bengaluru) ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೆಚೆಲ್ ಮಿಸ್ ಫೈರಿಂಗ್​ನಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವತಿ. ಪ್ರಿಯಕರ ನಿಖಿಲ್​​​​ಗೆ ಸೇರಿದ ಗನ್ ರೆಚೆಲ್​ ಪರಿಶೀಲನೆ ಮಾಡುವಾಗ ಮಿಸ್ ಫೈರಿಂಗ್​​ ಆಗಿದೆ. ಗಾಯಾಳು ರೆಚೆಲ್​ ಮತ್ತು ನಿಖಿಲ್​ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಎರಡೂ ಕುಟುಂಬಗಳು ಸಿದ್ಧತೆ ನಡೆಸಿದ್ದವು. ನಿಖಲ್​ ಅವರ ಬಳಿ ಲೈಸೆನ್ಸ್ಡ್​​ ಗನ್​ ಇದೆ.

ಜು.28ರಂದು ನಿಖಿಲ್​​​​​ ಟೆರೆಸ್​ ಮೇಲೆ ಗನ್ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ರೆಚೆಲ್​ ಕೂಡ ಜೊತೆಯಲ್ಲಿದ್ದರು. ರೆಚೆಲ್​ ಪ್ರಿಯಕರ ನಿಖಿಲ್​ನಿಂದ ಗನ್​ ಪಡೆದು ಪರಿಶೀಲನೆ ನಡೆಸುತ್ತಿದ್ದಾಗ, ಮಿಸ್​ ಫೈರ್​ ಆಗಿ ಹೊಟ್ಟೆಗೆ ಗುಂಡು ತಗುಲಿದೆ. ಕೂಡಲೇ ರೆಚೆಲ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಬಂದೂಕು ಸೌಲಭ್ಯ ದುರುಪಯೋಗ: ಲೈಸೆನ್ಸ್​​ಗಾಗಿ ನಕಲಿ ದಾಖಲೆ ಸೃಷ್ಟಿ

ಗುಂಡು ತಗುಲಿದ ಪರಿಣಾಮ ರೆಚೆಲ್​ ಅವರ ಒಂದು ಕಿಡ್ನಿಗೆ ಹಾನಿಯಾಗಿದೆ. ಹೀಗಾಗಿ, ವೈದ್ಯರು ರೆಚೆಲ್​ ಅವರ ಒಂದು‌ ಕಿಡ್ನಿಯನ್ನು ಹೊರ ತೆಗೆದಿದ್ದಾರೆ. ರೆಚೆಲ್​ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೆಣ್ಣೂರು ಪೊಲೀಸ್​​ ಠಾಣೆಯಲ್ಲಿ ಎಫ್​​​ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Wed, 30 July 25

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us