ಮರ್ಯಾದಾ ಹತ್ಯೆ ಭೀತಿ; ತಂದೆಯಿಂದ ರಕ್ಷಣೆ ಕೋರಿ ಮಗಳಿಂದಲೇ ಹೈಕೋರ್ಟ್​ಗೆ ಅರ್ಜಿ!

ಬೆಂಗಳೂರಿನ ಯುವತಿಯೊಬ್ಬಳು ಮರ್ಯಾದಾ ಹತ್ಯೆ ಭೀತಿಯಿಂದ ತಂದೆಯ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ತಂದೆಯ ಒಪ್ಪಿಗೆಯಿಲ್ಲದೆ ನಿಶ್ಚಯಿಸಿದ ಮದುವೆಯನ್ನು ವಿರೋಧಿಸಿದ್ದಕ್ಕೆ ಮರ್ಯಾದಾ ಹತ್ಯೆಯ ಭೀತಿ ಎದುರಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ. ಅರ್ಜಿ ವಿಚಾರಣೆಯ ನಂತರ ಹೈಕೋರ್ಟ್ ವೈಟ್‌ಫೀಲ್ಡ್ ಪೊಲೀಸರಿಗೆ ಕಾಜಲ್‌ಗೆ ಸೂಕ್ತ ಭದ್ರತೆ ನೀಡಲು ಆದೇಶಿಸಿದೆ.

ಮರ್ಯಾದಾ ಹತ್ಯೆ ಭೀತಿ;  ತಂದೆಯಿಂದ ರಕ್ಷಣೆ ಕೋರಿ ಮಗಳಿಂದಲೇ ಹೈಕೋರ್ಟ್​ಗೆ ಅರ್ಜಿ!
ಹೈಕೋರ್ಟ್​
Image Credit source: High Court Website
Edited By:

Updated on: Apr 21, 2026 | 12:21 PM

ಬೆಂಗಳೂರು, ಏಪ್ರಿಲ್ 21: ತನ್ನ ಒಪ್ಪಿಗೆಯಿಲ್ಲದೆ ನಿಶ್ಚಯ ಮಾಡಿರುವ ಮದುವೆಯನ್ನು ಬೇಡ ಎಂದಿದ್ದಕ್ಕೆ ಮರ್ಯಾದಾ ಹತ್ಯೆ ಭೀತಿಯಿಂದ ಬೆಂಗಳೂರಿನ ಯುವತಿ ತಂದೆಯಿಂದ ರಕ್ಷಣೆ ಕೋರಿ ಹೈಕೋರ್ಟ್​ (High Court) ಮೆಟ್ಟಿಲೇರಿದ್ದಾಳೆ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಕಾಜಲ್ ರಾಜಪುರೋಹಿತ್ ಎಂಬ ಯುವತಿ, ತನ್ನ ತಂದೆ ಅಶೋಕ್ ರಾಜಪುರೋಹಿತ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾಳೆ.

ಮದುವೆ ಬೇಡ ಎಂದರೂ ತಂದೆಯ ಬಲವಂತ, ಮದುವೆಗೆ ತಯಾರಿ!

ಕಳೆದ ಎರಡು ವರ್ಷಗಳಿಂದ ಉದ್ಯೋಗದಲ್ಲಿರುವ ಯುವತಿಗೆ ಮದುವೆಯ ಮೇಲೆ ಆಸಕ್ತಿಯಿರಲಿಲ್ಲ. ತನ್ನ ಅಕ್ಕನಿಗೂ ಹೀಗೆ ಬಲವಂತದಿಂದ ಮದುವೆ ಮಾಡಿದ್ದನ್ನು ಕಂಡಿದ್ದ ಆಕೆಗೆ ತನ್ನ ಪರಿಸ್ಥಿತಿಯೂ ಹಾಗೆ ಆಗಿಬಿಡಬಹುದೆಂಬ ಆತಂಕವಿತ್ತು. ತಾನು ದುಡಿದು ತನ್ನ ಕಾಲ ಮೇಲೆ ನಿಂತ ಆಕೆಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲವೂ ಇತ್ತು. ಹೀಗಿರುವಾಗ ತನ್ನ ಒಪ್ಪಿಗೆಯಿಲ್ಲದೆ ತಂದೆ ಅಶೋಕ್ ರಾಜಸ್ಥಾನ ಮೂಲದ ಡಾ. ಯಶ್‌ಪಾಲ್ ಜೊತೆ ವಿವಾಹ ನಿಶ್ಚಯ ಮಾಡಿದ್ದರೆಂದು ಆರೋಪಿಸಿರುವ ಕಾಜಲ್, ತಂದೆಯ ನಿರ್ಧಾರವನ್ನು ವಿರೋಧಿಸಿದ್ದಾಳೆ. ವಿರೋಧದ ನಡುವೆಯೂ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದಾಳೆ.

ಇದನ್ನೂ ಓದಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಕರ್ನಾಟಕ ಹೈಕೋರ್ಟ್​

ಯುವತಿಗೆ ಭದ್ರತೆ ಮೀಡುವಂತೆ ಆದೇಶಿಸಿದ ಕೋರ್ಟ್​

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವೈಟ್‌ಫೀಲ್ಡ್ ಪೊಲೀಸರಿಗೆ ಕಾಜಲ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ. ತಂದೆಯಿಂದ ಜೀವಭಯವಿದೆ ಎಂದು ಆರೋಪಿಸಿರುವ ಈ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Tue, 21 April 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us