Namma Clinics: ಬೆಂಗಳೂರಿನ ಕೆಲ ನಮ್ಮ ಕ್ಲೀನಿಕ್​​ಗಳ ಸಮಯ ಬದಲಿಸಲು ಚಿಂತನೆ: ದಿನೇಶ್ ಗುಂಡೂರಾವ್

|

Updated on: Aug 11, 2023 | 10:48 AM

ಬೆಂಗಳೂರಿನ ಕೆಲವು ನಮ್ಮ ಕ್ಲೀನಿಕ್​​ಗಳ ಸಮಯವನ್ನು ಬದಲಾಯಿಸಲು ರಾಜ್ಯ ಸರ್ಕಾರ ಚಿಂತಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಮಾತನಾಡಿ ನಮ್ಮ ಕ್ಲಿನಿಕ್​ ಮಧ್ಯಾಹ್ನ 12 ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿವೆ ಎಂದರು.

Namma Clinics: ಬೆಂಗಳೂರಿನ ಕೆಲ ನಮ್ಮ ಕ್ಲೀನಿಕ್​​ಗಳ ಸಮಯ ಬದಲಿಸಲು ಚಿಂತನೆ: ದಿನೇಶ್ ಗುಂಡೂರಾವ್
Namma Clinic
Follow us on

ಬೆಂಗಳೂರು: ನಗರದ ಕೆಲವು ನಮ್ಮ ಕ್ಲೀನಿಕ್​​ಗಳ (Namma Clinic) ಸಮಯವನ್ನು ಬದಲಾಯಿಸಲು ರಾಜ್ಯ ಸರ್ಕಾರ ಚಿಂತಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (​Dinesh Gundu Rao) ಮಾತನಾಡಿ ನಮ್ಮ ಕ್ಲಿನಿಕ್​ ಮಧ್ಯಾಹ್ನ 12 ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿವೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಭಾವಿಸಿದ್ದೇವೆ. ಸಮಯ ಬದಲಾಯಿಸಿ ಕೆಲ ದಿನಗಳಕಾಲ ಕಾರ್ಯನಿರ್ವಹಣೆಯನ್ನು ನಾವು ಗಮನಿಸುತ್ತೇವೆ. ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದರು.

ನಾಗರಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ರೋಗಿಗಳು ತಮ್ಮ ಕೆಲಸ ಮತ್ತು ಮನೆಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಸಮಾಲೋಚನೆಗಾಗಿ ಬರಲು ಸಂಜೆ ಉತ್ತಮವಾಗಿದೆ. ಪ್ರಸ್ತುತ, ನಮ್ಮ ಕ್ಲಿನಿಗಳು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ರಿಂದ ಸಂಜೆ 4:30 ರವರೆಗೆ ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ: ಬೆಂಗಳೂರು: ಹೊಸ ಪಡಿತರ ಚೀಟಿ ಮಂಜೂರು ಮಾಡದಂತೆ ಸರ್ಕಾರ ಆದೇಶ; ಸದ್ಯಕ್ಕಿಲ್ಲ ಅರ್ಜಿ ಸಲ್ಲಿಕೆ

ಸಚಿವರು ಕಳೆದವಾರ ದೆಹಲಿಯಲ್ಲಿ ಆಪ್​ ಸರ್ಕಾರದ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ಮೊಹಲ್ಲಾ ಕ್ಲಿನಿಕ್​​ಗಳಲ್ಲಿ ಮೂಲಕಭೂತ ಸೌಕರ್ಯಗಳಿಲ್ಲದೆ ಜನರು ಈ ಕ್ಲಿನಿಕ್​ಗಳಿಗೆ ಬರುತ್ತಿಲ್ಲ. ಆದರೆ ನಮ್ಮ ರಾಜ್ಯದಲ್ಲಿನ ಚಿಕಿತ್ಸಾಲಯಗಳು ರೋಗಿಗಳಿಗೆ ತಕ್ಷಣದ ಪರೀಕ್ಷೆಯನ್ನು ಮಾಡಲು ಪ್ರಯೋಗಾಲಯ ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನು ಹೊಂದಿವೆ ಎಂದು ಹೇಳಿದರು.

ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಪ್ರಾರಂಭಿಸಿದ ಕ್ಲಿನಿಕ್‌ಗಳು ಉದ್ಘಾಟನೆಯಾದಾಗಿನಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿವೆ. ಈ ನಮ್ಮ ಚಿಕಿತ್ಸಾಲಯಗಳನ್ನು ಪ್ರಾರಂಭಿಸುವ ಬದಲು ಈಗಿರುವ ಆರೋಗ್ಯ ಕೇಂದ್ರಗಳಲ್ಲಿನ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ ಹೂಡಿಕೆ ಮಾಡಬೇಕಿತ್ತು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದರು ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ