ಬೆಂಗಳೂರಿಗರೇ ಗಮನಿಸಿ, ಈ ಎರಡು ದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕರೆಂಟ್​​ ಇರುವುದಿಲ್ಲ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಜನವರಿ 17 ಮತ್ತು 18 ರಂದು ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ವಿದ್ಯುತ್ ಕಡಿತ ಘೋಷಿಸಿದೆ. ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಗ್ರಿಡ್ ನಿರ್ವಹಣೆ ಮತ್ತು ನವೀಕರಣ ಕಾರ್ಯಗಳಿಗಾಗಿ ಈ ಕಡಿತ ಅಗತ್ಯ. ಬೊಮ್ಮನಹಳ್ಳಿ, ವೈಟ್‌ಫೀಲ್ಡ್, ಮಾರತಹಳ್ಳಿ ಸೇರಿದಂತೆ ಹಲವು ಪ್ರದೇಶಗಳು ಬಾಧಿತವಾಗಲಿವೆ. ನಿವಾಸಿಗಳು ಮೊಬೈಲ್ ಚಾರ್ಜ್, ಪವರ್ ಬ್ಯಾಂಕ್ ಸಿದ್ಧಪಡಿಸುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.

ಬೆಂಗಳೂರಿಗರೇ ಗಮನಿಸಿ, ಈ ಎರಡು ದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕರೆಂಟ್​​ ಇರುವುದಿಲ್ಲ
ಸಾಂದರ್ಭಿಕ ಚಿತ್ರ

Updated on: Jan 16, 2026 | 5:16 PM

ಬೆಂಗಳೂರು, ಜ.16: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್​​​ ಕಂಬಗಳ ಬದಲಾವಣೆ, ಇತರ ಕೆಲಸ ಕಾರಣದಿಂದ ಈ ವಾರಾಂತ್ಯದಲ್ಲಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಿದೆ ಎಂದು ಹೇಳಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕರೆಂಟ್​​ ಇರುವುದಿಲ್ಲ ಎಂದು ಹೇಳಲಾಗಿದೆ. ವಿದ್ಯುತ್ ಜಾಲದ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ವಾರಾಂತ್ಯದಲ್ಲಿ ಈ ಕೆಲಸವನ್ನು ಮಾಡಲು ಆಯ್ಕೆ ಮಾಡಿಕೊಂಡಿದ್ದು, ಕೆಲಸಕ್ಕೆ ಹೋಗುವವರಿಗೆ ಇದರಿಂದ ಅನುಕೂಲವಾಗಲಿದೆ. ಶನಿವಾರ ಮತ್ತು ಭಾನುವಾರ (ಜನವರಿ 17 ಮತ್ತು 18) ಹಗಲಿನಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಮಾಡಲಾಗುವುದು ಎಂದು ನಾಗರಿಕರಿಗೆ ಮೊದಲೇ ಎಚ್ಚರಿಕೆ ನೀಡಿದ್ದಾರೆ.

ಈ ದಿನದಂದು ಟ್ರಾನ್ಸ್‌ಫಾರ್ಮರ್‌ಗಳನ್ನು ನವೀಕರಿಸುವುದು ಮತ್ತು ಫೀಡರ್‌ಗಳ ಸುರಕ್ಷತೆಗಳ ಬಗ್ಗೆ ಪರಿಶೀಲನೆ, ಇತರ ಕೆಲಸಗಳನ್ನು ಮಾಡಲಾಗುವುದು. ಇದರಿಂದ ಮುಂದಿನ ದಿನಗಳಲ್ಲಾಗುವ ಸಮಸ್ಯೆಗಳನ್ನು ತಡೆಯಬಹುದು ಎಂದು ಬೆಸ್ಕಾಂ ಹೇಳಿದೆ. ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳಿದೆ. ದಕ್ಷಿಣ ಬೆಂಗಳೂರು ಪ್ರದೇಶಗಳಾದ ಬೊಮ್ಮನಹಳ್ಳಿ, ಹೆಚ್‌ಎಸ್‌ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆಯಲ್ಲಿ ವಿದ್ಯುತ್​​ ಕಡಿತವಾಗಲಿದೆ. ಪೂರ್ವ ಬೆಂಗಳೂರಿನ ಮಾರತಹಳ್ಳಿ, ವೈಟ್‌ಫೀಲ್ಡ್, ಕೆಆರ್ ಪುರಂ, ಮಹದೇವಪುರ, ಬಾಣಸವಾಡಿ, ಮತ್ತು ಹೊರಮಾವು ವಿದ್ಯುತ್​​ ಕಡಿತವಾಗಲಿದೆ.

ಬೆಂಗಳೂರಿನ ವಿದ್ಯುತ್ ಕಡಿತದ ಪರಿಣಾಮವನ್ನು ಕಡಿಮೆ ಮಾಡಲು, ನಿವಾಸಿಗಳು ಮತ್ತು ವ್ಯಾಪಾರಿಗಳು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ವಿದ್ಯುತ್ ಕಡಿತಗೊಳ್ಳುವ ಮೊದಲು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪವರ್ ಬ್ಯಾಂಕ್‌ಗಳು ಸಂಪೂರ್ಣವಾಗಿ ಚಾರ್ಜ್ ಆಗಿವೆಯೇ ಎಂದು ನೋಡಿಕೊಳ್ಳಬೇಕು. ಮನೆಯಿಂದ ಕೆಲಸ ಮಾಡುವವರು, ಕೆಲಸದ ಸ್ಥಳದಲ್ಲಿ ವೈ-ಫೈ ಹೊಂದಿರುವ ಬಗ್ಗೆ ಮೊದಲೆ ಪರಿಶೀಲನೆ ಮಾಡಿಕೊಂಡಿರಬೇಕು. ಇನ್ವರ್ಟರ್‌ಗಳು, ಬ್ಯಾಕಪ್ ಲೈಟ್‌ಗಳು ಮತ್ತು ಇತರ ಅಗತ್ಯ ಸಾಧನಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವುದು ಅಗತ್ಯ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಕಂಪನಿಯಲ್ಲಿ 1 ವರ್ಷ ಅನುಭವ ಇರುವವರಿಗೆ 35 ಲಕ್ಷದ ಪ್ಯಾಕೇಜ್? 5 ವರ್ಷ ದುಡಿದವರಿಗೆ ಮರ್ಯಾದೆಯೇ ಇಲ್ಲ

ಈ ಮೇಲೆ ತಿಳಿಸಲಾದ ಎಲ್ಲ ಪ್ರದೇಶಗಳಲ್ಲಿ ಸಂಪೂರ್ಣ ವಿದ್ಯುತ್​ ಕಡಿತ ಇರಲ್ಲ, ಕೆಲವು ಪ್ರದೇಶಗಳು ಅಲ್ಪಾವಧಿಯ ವಿದ್ಯುತ್ ಅಡಚಣೆಗಳು ಅಥವಾ ಸಣ್ಣಪುಟ್ಟ ಅಡೆತಡೆಗಳನ್ನು ಮಾತ್ರ ಇರುತ್ತದೆ. ಇದಲ್ಲದೆ, ನಗರದ ವಿದ್ಯುತ್ ಮೂಲಸೌಕರ್ಯದ ದೀರ್ಘಕಾಲೀನ ಸುಧಾರಣೆಗೆ ಈ ದುರಸ್ಥಿತಿಗಳನ್ನು ಮಾಡಲೇಬೇಕು. ಈ ದಿನಕ್ಕೆ ನಿಮಗೆ ವಿದ್ಯುತ್​​​​​​ ಸಮಸ್ಯೆ ಉಂಟಾದರೂ ಮುಂದಿನ ದಿನಗಳಲ್ಲಿ ಇದರ ಲಾಭವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ