ಜಮೀನಲ್ಲಿ ಕರೆಂಟ್ ಕಂಬ ಹಾಕಿಸಿದ್ದರೆ ಪರಿಹಾರ ಸಿಗುತ್ತೆ ಎಂಬ ಸುದ್ದಿ ಸುಳ್ಳು -ಬೆಸ್ಕಾಂ ಸ್ಪಷ್ಟನೆ

|

Updated on: Jun 19, 2024 | 1:08 PM

ಜಮೀನಿನಲ್ಲಿ ಕರೆಂಟ್‌ ಕಂಬ ಅಥವಾ ಡಿಪಿ(DP) ಹಾಗೂ ಟ್ರಾನ್ಸ್‌ ಫಾರ್ಮರ್‌ ಗಳನ್ನು ಅಳವಡಿಸಲಾಗಿದ್ದರೆ ಅಂತಹ ರೈತರಿಗೆ ಸರ್ಕಾರದಿಂದ ಪರಿಹಾರ ಧನ ನೀಡಲಾಗುತ್ತೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಸದ್ಯ ಈ ಬಗ್ಗೆ ಬೆಸ್ಕಾಂ ಸ್ಪಷ್ಟನೆ ನೀಡಿದ್ದು ಅದೊಂದು ಸುಳ್ಳು ಸುದ್ದಿ ಎಂದು ತಿಳಿಸಿದೆ.

ಜಮೀನಲ್ಲಿ ಕರೆಂಟ್ ಕಂಬ ಹಾಕಿಸಿದ್ದರೆ ಪರಿಹಾರ ಸಿಗುತ್ತೆ ಎಂಬ ಸುದ್ದಿ ಸುಳ್ಳು -ಬೆಸ್ಕಾಂ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜೂನ್.19: ರೈತರು ತಮ್ಮ ಜಮೀನುಗಳಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್ (Transformer) ಅಳವಡಿಸಿಕೊಂಡಿದ್ದರೆ ಅಂತಹ ರೈತರಿಗೆ ರಾಜ್ಯ ಸರ್ಕಾರ (Karnataka Government) ದಿನಕ್ಕೆ 50 ರೂ. ಪರಿಹಾರ ನೀಡಲಿದೆ ಹಾಗೂ ಗೃಹಬಳಕೆದಾರರು ಪ್ರತಿನಿತ್ಯ 2000 – 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೆ ಸರ್ಕಾರ ₹5000 ಪರಿಹಾರ ಧನ ನೀಡಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಈ ಬಗ್ಗೆ ಬೆಸ್ಕಾಂ ಸ್ಪಷ್ಟನೆ ನೀಡಿದೆ. ಇದೊಂದು ಗಾಳಿ ಸುದ್ದಿ. ಇದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಗ್ರಾಹಕರೇ ಎಚ್ಚರವಹಿಸಿ. ಈ ಸುದ್ದಿ ರೈತರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದ ಕೂಡಿದೆ. ಇಂತಹ ಯಾವುದೇ ಯೋಜನೆಯನ್ನು ರಾಜ್ಯ ಸರಕಾರ ಅಥವಾ ಇಂಧನ ಇಲಾಖೆ, ಕೆಪಿಟಿಸಿಎಲ್ ಅಥವಾ ಬೆಸ್ಕಾಂ ಸೇರಿದಂತೆ ಯಾವುದೇ ಎಸ್ಕಾಂಗಳು ಈ ರೀತಿಯ ಪ್ರಕಟಣೆ ಹೊರಡಿಸಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಮಾಹಿತಿಯನ್ನು ಕಡೆಗಣಿಸಬೇಕಾಗಿ ವಿನಂತಿ. ಇಂತಹ ಗಾಳಿಸುದ್ದಿಗಳನ್ನು ನಂಬದಿರಿ ಹಾಗೂ ಯಾವುದೇ ಗೊಂದಲಗಳಿದ್ದಲ್ಲಿ, ನಮ್ಮ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ ಎಂದು ಬೆಸ್ಕಾಂ ಎಕ್ಸ್ ಖಾತೆ ಮೂಲಕ ಟ್ವೀಟ್ ಮಾಡಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ; ಆಸ್ಪತ್ರೆಗೆ ಕೆ.ಜೆ. ಜಾರ್ಜ್ ಭೇಟಿ

ಕೃಷಿ ಭೂಮಿಯಲ್ಲಿ ಕರೆಂಟ್‌ ಕಂಬ ಅಥವಾ ಡಿಪಿ(DP) ಹಾಗೂ ಟ್ರಾನ್ಸ್‌ ಫಾರ್ಮರ್‌ ಗಳು ಇದ್ದರೆ ಸರ್ಕಾರದಿಂದ ರೈತರಿಗೆ ತಿಂಗಳಿಗೆ ಉಚಿತ 5 ರಿಂದ 10 ಸಾವಿರ ಹಣ ಸಿಗುತ್ತದೆ. ಸರ್ಕಾರವೇ ಅದರ ನಿರ್ವಹಣೆ ಕೂಡ ಮಾಡುತ್ತದೆ. 5 ರಿಂದ 10 ಸಾವಿರ ಹಣದ ಜೊತೆಗೆ ಟಿಸಿಗಳ ನಿರ್ವಹಣೆಯನ್ನು ಕೂಡ ಉಚಿತವಾಗಿ ಮಾಡುತ್ತದೆ. Noc ಪ್ರಮಾಣಪತ್ರ ಕೂಡ ಸಿಗುತ್ತದೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಸದ್ಯ ಈಗ ಇದೊಂದು ಸುಳ್ಳು ಸುದ್ದಿ ಎಂದು ಬೆಸ್ಕಾಂ ಸ್ಪಷ್ಟ ಪಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:56 pm, Wed, 19 June 24