ಬೆಂಗಳೂರು, ನ.3: ಹಣ ವಾಪಸ್ ಕೊಟ್ಟಿಲ್ಲವೆಂದು ಬೆಸ್ಕಾಂನಲ್ಲಿ (BESCOM) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಣ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡ್ನಾಪ್ ಆದ 24 ಗಂಟೆಯಲ್ಲಿ ನೌಕರನನ್ನು ರಕ್ಷಣೆ ಮಾಡಿದ ಪೀಣ್ಯಾ ಠಾಣಾ ಪೊಲೀಸರು, ಆರೋಪಿಗಳನ್ನ ಬಂಧಿಸಿದ್ದಾರೆ.
ಲೋಹಿತ್ ಗೌಡ, ವೆಂಕಟೇಶ್, ರವಿ, ರಮೇಶ್, ಭರತ್ ಸೇರಿದಂತೆ ಒಟ್ಟು 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಲವನ್ನು ಮರು ಪಾವತಿಸಿದ ಗುತ್ತಿಗೆ ನೌಕರ ಪ್ರವೀಣ್ನನ್ನು ನವಯುಗ ಟೋಲ್ ಬಳಿ ಕಿಡ್ನಾಪ್ ಮಾಡಿ ಮಡಿಕೇರಿಯ ಹೋಮ್ ಸ್ಟೇಯಲ್ಲಿ ಇರಿಸಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರವೀಣ್ನನ್ನು ರಕ್ಷಣೆ ಮಾಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾಸನ: ಬೆಂಗಳೂರಿನ ಕಾಲೇಜು ವಿದ್ಯಾರ್ಥಿಯ ಕಿಡ್ನಾಪ್, ಅರಕಲಗೂಡಿನಲ್ಲಿ ರಕ್ಷಣೆ
ಆರೋಪಿಗಳ ಬಂಧಿಸಿ ವಿಚಾರಣೆ ನಡೆಸಿದಾಗ ಹಣಕಾಸಿನ ವಿಚಾರ ಬೆಳಕಿಗೆ ಬಂದಿದೆ. ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಾಕಷ್ಟು ಜನರಿಗೆ ಪ್ರವೀಣ್ ವಂಚನೆ ಮಾಡಿರುವುದು ತಿಳಿದುಬಂದಿದೆ. ಬೆಸ್ಕಾಂ ಅಧಿಕಾರಿ ಪರಿಚಯವಿದ್ದಾರೆ ಎಂದು ಲಕ್ಷಾಂತರ ಹಣ ಪಡೆದು ವಂಚಿಸಿದ್ದನ್ನು ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ.
ಈ ಬಗ್ಗೆ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಿರುವಾಗ ಕಳೆದ ಅಕ್ಟೋಬರ್ 30 ರಂದು ಸಂಜೆ ಮಾತುಕತೆಗೆಂದು ಪ್ರವೀಣ್ನನ್ನು ಕರೆಸಿಕೊಂಡು ಹಣ ನೀಡಿದ್ದವರು ಕಿಡ್ನಾಪ್ ಮಾಡಿದ್ದಾರೆ. ಹಣ ವಾಪಸ್ ಕೊಡುವಂತೆ ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ