ಹಾಸನ: ಬೆಂಗಳೂರಿನ ಕಾಲೇಜು ವಿದ್ಯಾರ್ಥಿಯ ಕಿಡ್ನಾಪ್, ಅರಕಲಗೂಡಿನಲ್ಲಿ ರಕ್ಷಣೆ
ದುಷ್ಕರ್ಮಿಗಳು ಬೆಂಗಳೂರಿನ ನಾಗಾರ್ಜುನ ಕಾಲೇಜಿನ ವಿದ್ಯಾರ್ಥಿಯನ್ನು ಅಪಹರಣ ಮಾಡಿ ಬುಧವಾರದಂದು ಹಾಸನದ ಅರಕಲಗೂಡು ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಬೆಂಗಳೂರಿನ ಯಲಹಂಕ ಪೊಲೀಸ್ ವ್ಯಾಪ್ತಿಯ ಅನಂತಪುರ ಎಕ್ಸ್‌ಟೆನ್ಶನ್‌ನ ಕೃಷ್ಣೇಗೌಡರ ಪುತ್ರ ಚಿರಾಗ್‌ನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನ, ನ.3: ಬೆಂಗಳೂರಿನ (Bengaluru) ನಾಗಾರ್ಜುನ ಕಾಲೇಜಿನ ವಿದ್ಯಾರ್ಥಿ ಚಿರಾಗ್ (21) ಎಂಬಾತನನ್ನು ಅಪಹರಿಸಿದ ನಾಲ್ವರು ದುಷ್ಕರ್ಮಿಗಳು ಬುಧವಾರ ಹಾಸನದ (Hassan) ಅರಕಲಗೂಡು ಬಳಿ ಬಿಟ್ಟು ಹೋಗಿದ್ದಾರೆ. ಬೆಂಗಳೂರಿನ ಯಲಹಂಕ ಪೊಲೀಸ್ ವ್ಯಾಪ್ತಿಯ ಅನಂತಪುರ ಎಕ್ಸ್‌ಟೆನ್ಶನ್‌ನ ಕೃಷ್ಣೇಗೌಡರ ಪುತ್ರ ಚಿರಾಗ್‌ನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿರಾಗ್ ಕಾಲೇಜಿಗೆ ಹೋಗುತ್ತಿದ್ದಾಗ ನಾಲ್ವರು ಅಪರಿಚಿತರು ಕಾರಿನಲ್ಲಿ ಬಂದು ಕಾರಿಗೆ ಎಳೆದೊಯ್ದಿದ್ದಾರೆ. ಅರಕಲಗೂಡು ಸಮೀಪದ ಶನಿವಾರಸಂತೆ ರಸ್ತೆಯಲ್ಲಿ ಮರದ ಕೆಳಗೆ ಕುಳಿತಿದ್ದ ಚಿರಾಗ್ ದೂರವಾಣಿ ಕರೆ ಮಾಡಿದ ನಂತರ ಅರಕಲಗೂಡು ಪೊಲೀಸರು ರಕ್ಷಿಸಿದ್ದಾರೆ.
ಇದನ್ನೂ ಓದಿ: ಇಬ್ಬರು ವ್ಯಕ್ತಿಗಳನ್ನ ಕಿಡ್ನಾಪ್ ಮಾಡಿದ ಅಕ್ರಮ ಮರಳು ದಂಧೆಕೋರರು, ನದಿ ಪಾಲಾಗಬೇಕಿದ್ದವರು ಜಸ್ಟ್ ಮಿಸ್
ಚಿರಾಗ್ ದಾರಿಹೋಕನ ಫೋನ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಚಿರಾಗ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ. ಅಪಹರಣಕಾರರು ಕೆಲವು ರಾಸಾಯನಿಕಗಳನ್ನು ಸಿಂಪಡಿಸಿ ಚಿರಾಗ್‌ನನ್ನು ವಾಹನಕ್ಕೆ ಎಳೆದೊಯ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ