ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬಂದ್ಗೆ ಮುಂದಾಗಿದ್ದು ಸಿಲಿಕಾನ್ ಸಿಟಿಯ 4 ಭಾಗಗಳಿಂದ ಇಂದು ಪ್ರತಿಭಟನಾ ಱಲಿ ಆರಂಭವಾಗಿದೆ. ಹೀಗಾಗಿ ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆದ್ರೆ ಬೆಂಗಳೂರಿನಲ್ಲಿ ಬಸ್ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಹಾಗೂ ಮಾರುಕಟ್ಟೆ, ಹೋಟೆಲ್, ಅಂಗಡಿಗಳು ಓಪನ್ ಆಗಿವೆ.
ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಯಾರಿಗೂ ತೊಂದ್ರೆ ಮಾಡದೆ ಪ್ರತಿಭಟನೆ ನಡೆಸಿ ಅಂತಾ ರಾಜ್ಯ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ. ಇಷ್ಟಾದ್ರು ಇವತ್ತು ಹೆದ್ದಾರಿ ತಡೆ, ಱಲಿಯಿಂದಾಗಿ ಟ್ರಾಫಿಕ್ ಕಿರಿಕಿರಿ ಎದುರಾಗಲಿದೆ. ಸಾಮಾನ್ಯ ದಿನಗಳಲ್ಲೇ ಟ್ರಾಫಿಕ್ನಲ್ಲಿ ಸಿಲುಕಿ ಒದ್ದಾಡುವ ಬೆಂಗಳೂರಿಗರಿಗೆ ವಾರದ ಆರಂಭದಲ್ಲೇ ಕಿರಿಕಿರಿ ಎದುರಾಗಲಿದೆ.
ಬೆಂಗಳೂರಿನಾದ್ಯಂತ ಪೊಲೀಸರಿಂದ ಹೈಅಲರ್ಟ್
ಇನ್ನು ಬಂದ್ ಹಿನ್ನೆಲೆ ಬೆಂಗಳೂರಿನಾದ್ಯಂತ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 12 ಡಿಸಿಪಿ, ಎಲ್ಲಾ ಎಸಿಪಿಗಳು, 120ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 150ಕ್ಕೂ ಹೆಚ್ಚು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಭದ್ರತೆಗಾಗಿ ಇಂದು 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಮುಂಜಾನೆ 5 ಗಂಟೆಯಿಂದಲೇ ಪೊಲೀಸರು ತಮ್ಮ ಕರ್ತವ್ಯದಲ್ಲಿ ತೊಡಗಿದ್ದಾರೆ. ಪ್ರತಿ ವಿಭಾಗದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಫ್ರೀಡಂಪಾರ್ಕ್, ಟೌನ್‌ಹಾಲ್‌ನಲ್ಲಿ ಹೆಚ್ಚುವರಿ ಭದ್ರತೆ ಮಾಡಲಾಗಿದ್ದು ಹೆಚ್ಚುವರಿಯಾಗಿ KSRP, CAR ತುಕಡಿ ನಿಯೋಜನೆ ಮಾಡಲಾಗಿದೆ.
ಸಾರ್ವಜನಿಕರ ದೈನಂದಿನ ಕೆಲಸಕ್ಕೆ ಅಡ್ಡಿಪಡಿಸುವಂತಿಲ್ಲ. ಇಂದು ಯಾವುದೇ ರಸ್ತೆ ತಡೆಗೆ ಅನುಮತಿ ನೀಡಿಲ್ಲ. ಈವರೆಗೂ ಯಾರೂ ಮೆರವಣಿಗೆಗೆ ಅನುಮತಿ ಕೇಳಿಲ್ಲ. ಪ್ರತಿಭಟನೆ ಹೆಸರಿನಲ್ಲಿ ನಿಯಮ ಉಲ್ಲಂಘಿಸುವಂತಿಲ್ಲ. ದುಷ್ಕೃತ್ಯಗಳಲ್ಲಿ ಭಾಗಿಯಾದ್ರೆ ಪೊಲೀಸರಿಂದ ಕಠಿಣಕ್ರಮ ಕೈಗೊಳ್ಳಲಾಗುತ್ತೆ.
ಪ್ರತಿಭಟನಾ ಱಲಿ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು ಮೈಸೂರು ರಸ್ತೆ, ಕೆ.ಆರ್.ಪುರಂ, ಮಾಗಡಿ ರಸ್ತೆ, ಹೊಸೂರು ರಸ್ತೆ ಮಾರ್ಗದಲ್ಲಿ ಬರಲಿವೆ. ಬೆಂಗಳೂರಿನ ಹಲವೆಡೆ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಗಳ ಜತೆಗೆ ಱಲಿ ಹಿನ್ನೆಲೆ ಟ್ರಾಫಿಕ್ ಜಾಮ್? ಸಮಸ್ಯೆ ಎದುರಾಗಲಿದೆ. ಹೀಗಾಗಿ ಬೇರೆ ಭಾಗಗಳಿಂದ ಬೆಂಗಳೂರಿಗೆ ಬರುವವರು ಎಚ್ಚರ ವಹಿಸಬೇಕು.
ಇದನ್ನೂ ಓದಿ: Petrol Price Today: ಇಂದು ಡೀಸೆಲ್ ಬೆಲೆ ಸ್ಥಿರ; ಸತತ 3 ವಾರಗಳಿಂದ ಪೆಟ್ರೋಲ್ ದರದಲ್ಲಿಯೂ ಬದಲಾವಣೆಗಳಿಲ್ಲ!
Published On - 7:36 am, Mon, 27 September 21