ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ಬಸ್​ ಸ್ಟ್ಯಾಂಡ್​ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2023 | 11:49 AM

ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಹಿಂಭಾಗ, ವಿಧಾನಸೌಧದಿಂದ 1 ಕಿ.ಮೀಗಿಂತ ಕಡಿಮೆ ದೂರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಸ್ ಶೆಲ್ಟರ್ ಕಳ್ಳತನವಾಗಿಲ್ಲ. ಮಿಸ್ ಆಗಿಲ್ಲ, ಏನು ಆಗಿಲ್ಲ.

ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ಬಸ್​ ಸ್ಟ್ಯಾಂಡ್​ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಬಸ್​ ನಿಲ್ದಾಣ ನಿರ್ಮಿಸಲಾಗಿದ್ದ ಸ್ಥಳ
Follow us on

ಬೆಂಗಳೂರು, (ಅಕ್ಟೋಬರ್ 10): ಸಿಲಿಕಾನ್‌ ಸಿಟಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ (bengaluru city police commissioner office) ಕೊಂಚ ದೂರದಲ್ಲಿ ನಿರ್ಮಾಣ ಮಾಡಲಾಗಿದ್ದ ಬಿಎಂಟಿಸಿ ಬಸ್‌ ತಂಗುದಾಣ (BMTC Bus Stand) ಕಳ್ಳತನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸ್ ಕಮಿಷನರ್ ಕಚೇರಿಯ ಹಿಂಭಾಗ, ವಿಧಾನಸೌಧದಿಂದ 1 ಕಿ.ಮೀಗಿಂತ ಕಡಿಮೆ ದೂರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣವನ್ನು (BMTC bus shelter )ಕದ್ದೊಯ್ದಿದ್ದಾರೆ ಎಂದು ದೂರು ದಾಖಲಾಗಿತ್ತು. ಆದ್ರೆ, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಸ್ ಶೆಲ್ಟರ್ ಕಳ್ಳತನವಾಗಿಲ್ಲ. ಮಿಸ್ ಆಗಿಲ್ಲ, ಏನು ಆಗಿಲ್ಲ. ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆ ಅದನ್ನು ತೆರವು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು… ಕನ್ನಿಂಗ್ ಹ್ಯಾಮ್ ರಸ್ತೆಯ ಬಸ್​ ನಿಲ್ದಾಣ ಕಳ್ಳತನವಾಗಿಲ್ಲ. ಕಳೆಪೆ ಕಾಮಗಾರಿ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಬಸ್ ನಿಲ್ದಾಣ ನಾಪತ್ತೆ ರಹಸ್ಯ ಈಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಮೀಪದ ಬಸ್​ ನಿಲ್ದಾಣವನ್ನೇ ಕದ್ದೊಯ್ದ ಖದೀಮರು

ಸೈನ್ ಪೋಸ್ಟ್ ಕಂಪನಿಯವರು 10 ಲಕ್ಷ ರೂಪಾಯಿಯಲ್ಲಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಪ್ರಯಾಣಿಕರಿಗಾಗಿ ಬಸ್​ ತಂಗುದಾಣವನ್ನು ನಿರ್ಮಿಸಿತ್ತು. ಆದ್ರೆ, ಅದು ಕೆಲ ದಿನಗಳ ಬಳಿಕ ಸ್ಥಳದಿಂದ ನಾಪತ್ತೆಯಾಗಿತ್ತು.ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಅವರು ಸ್ಥಳಕ್ಕೆ ಬಂದು ನೋಡಿದಾಗ ನಿರ್ಮಿಸಲಾಗಿದ್ದ ಬಸ್​ ನಿಲ್ದಾಣ ಇರಲಿಲ್ಲ. ನಿರ್ಮಿಸಿದ್ದ ಒಂದು ವಾರದೊಳಗೆ ಮಾಯವಾಗಿದ್ದು ಅಚ್ಚರಿಗೆ ಕಾರಣವಾಗಿತ್ತು.

ಬಳಿಕ ಎನ್ ರವಿ ರೆಡ್ಡಿ ಅವರು ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪೊಲಿಸರು, ಬಸ್​ ನಿಲ್ದಾಣದ ಅಕ್ಕ-ಪಕ್ಕದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದರು. ಇದೀಗ ಸ್ವಲ್ಪ ದಿನಗಳ ಬಳಿಕ ಬಸ್​ ನಿಲ್ದಾಣ ನಾಪತ್ತೆ ರಹಸ್ಯ ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ